ಜ.4 ರಂದು ಅಯ್ಯಪ್ಪ ಸ್ವಾಮಿ ಮಹಾಪೂಜೆ
Ayyappa Swamy Mahapooja on January 4th
ತಾಳಿಕೋಟಿ 01: ಪಟ್ಟಣದಲ್ಲಿ ಜ4. ಶನಿವಾರರಂದು ಬೆಳಿಗ್ಗೆ 7ಗಂಟೆಯಿಂದ ದರಾಬಾರಿ ಮಠದಿಂದ ವಿವಿಧ ವಿಶೇಷ ವಾದ್ಯಗಳೊಂದಿಗೆ ರಾಜವಾಡೆ, ಕತ್ರಿ ಬಜಾರ ಮೂಲಕ ವಿಠ್ಠಲ ಮಂದಿರದವರೆಗೆ ಅಯ್ಯಪ್ಪ ಸ್ವಾಮಿಯ ಗಂಗಸ್ಥಳ ಕಾರ್ಯಕ್ರಮ ನೆರವೇರುವುದು. ಅಂದೇ ಮಧ್ಯಾಹ್ನ 12 ಗಂಟೆಯಿಂದ ವಿಠ್ಠಲ ಮಂದಿರ ದೇವಸ್ಥಾನದಲ್ಲಿ ಮಹಾಪ್ರಸಾದ ಇರುವುದು ಹಾಗೂ ಸಾಯಂಕಾಲ 5ಗಂಟೆಗೆ ನಗರೇಶ್ವರ ದೇವಸ್ಥಾನದಿಂದ ಅಯ್ಯಪ್ಪ ಸ್ವಾಮಿ ಪೂಜಾ ಸ್ಥಳದವರೆಗೆ ಬಾಲಕ ಮತ್ತು ಬಾಲಕಿಯರಿಂದ ಜ್ಯೋತಿ ತರುವ ಕಾರ್ಯಕ್ರಮ ಇರುತ್ತದೆ. ಆದ್ದರಿಂದ ಎಲ್ಲ ತಾಯಂದಿರು ತಮ್ಮ ತಮ್ಮ ಮಕ್ಕಳನ್ನು ಸರಿಯಾಗಿ 4 ಗಂಟೆಗೆ ನಗರೇಶ್ವರ ದೇವಸ್ಥಾನಕ್ಕೆ ಕರೆದುಕೊಂಡು ಬರಬೇಕು ಹಾಗೂ ಸಾಯಂಕಾಲ 6ಗಂಟೆಯಿಂದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ವಿಠ್ಠಲ ಮಂದಿರದ ಮುಂಭಾಗದಲ್ಲಿ ನೆರೆವೆರುವುದು. ಅಲ್ಲಿಗೆ ಎಲ್ಲ ಭಕ್ತರು ಬಂದು ಅಯ್ಯಪ್ಪ ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಪ್ರಕಟಣೆ ಕೇಳಿಕೊಂಡಿದೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 