ಜಮಖಂಡಿ 25: ತಾಲೂಕಿನ ಆಲಬಾಳ ಗ್ರಾಮದಲ್ಲಿ ಮಣಿಕಂಠ ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿಯ 5ನೇ ವರ್ಷದ ಮಹಾಪೂಜೆಯಲ್ಲಿ ಮಾಲಾಧಾರಿಗಳು ಎಣ್ಣೆ
ಸೇವೆ ಮಾಡುವ ಜೊತೆಗೆ ಅದ್ದೂರಿಯಾಗಿ ನಡೆಯಿತು.
ಅಯ್ಯಪ್ಪ ಸ್ವಾಮಿಗೆ ವಿವಿಧ ಹೂವಿನಿಂದ ಅಲಂಕರಿಸಿ. ಅಭಿಷೇಕ ಪೂಜೆಯನ್ನು ಮಾಡಲಾಯಿತು. ನೂರಾರು ಮಾಲಾಧಾರಿಗಳು ಅಯ್ಯಪ್ಪನ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ನಾಮಸ್ಮರಣೆಯನ್ನು ಮಾಡುತ್ತಿದ್ದರು. ಅಯ್ಯಪ್ಪನ ಆಭರಣದ ಪೆಟ್ಟಿಗೆಯನ್ನು ಮಾಲಾಧಾರಿಗಳು ಹೆಜ್ಜೆಯನ್ನು ಹಾಕುತ್ತಾ ಹಾಡುಗಳನ್ನು ಹಾಡುತ್ತಾ ಆಭರದ ಪೆಟ್ಟಿಗೆಯನ್ನು ಸನ್ನಿಧಾನಕ್ಕೆ ತರಲಾಯಿತು. ನೂರಾರು ಮಾಲಾಧಾರಿಗಳು ಕುದಿಯುತ್ತಿರುವ ಎಣ್ಣೆಯಲ್ಲಿ ಭಜಿಯನ್ನು ಬಿಡಲಾಯಿತು. ಎಲ್ಲ ಮಾಲಾಧಾರಿಗಳು ಎಣೆಯಲ್ಲಿ ಕೈ ಹಾಕಿ ಭಜಿಯನ್ನು ತೆಗೆದು ಭಕ್ತಿ ಭಾವವನ್ನು ಮೆರೆದರು.
ಮಣಿಕಂಠ ಸನ್ನಿಧಾನದಲ್ಲಿ ದೀಪಗಳ ಅಲಂಕಾರ, ನಾನಾ ಬಗ್ಗೆಯ ಹೂವಿನ ಅಲಂಕಾರದಿಂದ ಅಯ್ಯಪ್ಪನ ಸನ್ನಿಧಾನವನ್ನು ಅಲಂಕರಿಸಿದರು. ಅಯ್ಯಪ್ಪನ ಪೂಜೆಯನ್ನು ಮುಗಿದ ಬಳಿಕ ಅನ್ನಸಂತರೆ್ನಯನ್ನು ಮಾಡಿದರು. ಮಹಾಲಿಂಗ ಗುರುಸ್ವಾಮೀಜಿಯವರು ಅಯ್ಯಪ್ಪನ ಮಂತ್ರವನ್ನು ಹೇಳುವ ಮೂಲಕ ಅಭಿಷೇಕ ಪೂಜೆ ಹಾಗೂ ಕುಂಕುಮ ಪೂಜೆ, ಆರತಿ ಪೂಜೆ ಹೀಗೆ ಹಲವಾರು ಪೂಜೆಯನ್ನು ನೇರವೇರಿಸಿದರು.
ಇದೇ ಸಂದರ್ಭದಲ್ಲಿ ಅಭಯ ಗುರುಸ್ವಾಮಿ, ಅಜೇಯ ಗುರುಸ್ವಾಮಿ, ಗೋಪಾಲ ಗುರುಸ್ವಾಮಿ, ಶಿವಲಿಂಗ ಗುರುಸ್ವಾಮಿ, ಸದಾನಂದ ಗುರುಸ್ವಾಮಿ, ರವಿ ಗುರುಸ್ವಾಮಿ,ಹನುಮಂತ ಗುರುಸ್ವಾಮಿ, ಮಾಂತು ಗುರುಸ್ವಾಮಿ, ಬಾಳು ಗುರುಸ್ವಾಮಿ
ಸೇರಿದಂತೆ ಜಮಖಂಡಿ, ಮುದೋಳ ತಾಲೂಕಿನ ಅಯ್ಯಪ್ಪನ ಮಾಲಾಧಾರಿಗಳು ಸೇರಿದಂತೆ ಅನೇಕ ಭಕ್ತಾಧಿಗಳು ಪೂಜೆಯಲ್ಲಿ ಭಾಗಿಯಾಗಿದರು.