ಆಯುರ್ವೇದ ವಿದ್ಯಾರ್ಥಿಗಳಿಂದ ಹಿರಿಯರೊಂದಿಗೆ ಸಂವಾದ
Ayurveda students interact with elders
ಆಯುರ್ವೇದ ವಿದ್ಯಾರ್ಥಿಗಳಿಂದ ಹಿರಿಯರೊಂದಿಗೆ ಸಂವಾದ
ಯಮಕನಮರಡಿ 21: ಜೆ. ಜಿ. ಕೊಆಪರೆಟಿವ ಹಾಸ್ಪಿಟಲ್‌ನ ಆಯುರ್ವೇದಿಕ ಮಹಾವಿದ್ಯಾಲಯದ ವೈದ್ಯ ವಿದ್ಯಾರ್ಥಿಗಳು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ನಲ್ಲಿರುವ ಆಸರೆ ವೃದ್ದಾಶ್ರಮ ಮತ್ತು ಶಕ್ತಿಸದನ ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಭೇಟೀನೀಡಿ ಹಿರಿಯರೊಂದಿಗೆ ಆರೋಗ್ಯ ಸಂವಾದ ನಡೆಸಿದರು. ಹಿರಿಯರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕುರಿತು ಮಾತನಾಡಿ ಆಯುವೇದದ ನೈಸರ್ಗಿಕ ಜೀವನ ಶೈಲಿ ಆಹಾರ ಕ್ರಮ ಮತ್ತು ದಿನಚರಿಯ ಮಹತ್ವವನ್ನು ಹಿರಿಯರಿಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಸಂವಾದದಲ್ಲಿ ಭಾಗವಹಿಸಿದ್ದ ಅಗಧ ತಂತ್ರ ವಿಭಾಗದ ಹಿರಿಯ ವೈದ್ಯ ಡಾ. ಶಶಿಕಲಾ ಹೊಸಮಠ ಮಾತನಾಡಿ ಮಹಿಳೆಯರು ಆರೋಗ್ಯ ಕಡೆ ಗಮಸಹರಿಬೇಕು ವ್ಯಾಯಮ, ಆಹಾರದ ಕಡೆ ಲಕ್ಷವಹಿಸಿ ಸಮರ್ಕ ನಿದ್ರೆ ಮತ್ತು ವಿಶಾಂತಿ ತೆಗೆದುಕೊಳ್ಳಲು ಸಲಹೆ ನೀಡಿದರು. ಅಸೊಶಿಯೆಟ್ ಪ್ರೋಫೆಸರ್ ಡಾ. ರಾಜಶೇಖರ ಜಕಾತಿ ಮಾತನಾಡಿ ಆರೋಗ್ಯವೇ ಜೀವನದ ಮೂಲ ದೈನಂದಿನ ಜೀವನದಲ್ಲಿ ಸಮಾತೋಲಿತ ಆಹಾರ ಸೇವಿಸಿ ದುಶ್ಬಟಗಳಿಂದ ದೂರವಿರಲು ಸಲಹೆ ನೀಡಿದರು.
ರಚನಾ ಶರೀರ ವಿಭಾಗದ ಡಾ. ಕೀರ್ತಿ ಚೌಗಲಾ ಸ್ವಸ್ಥವೃತ್ ವಿಭಾಗದ ಡಾ. ಲೇಖನಿ ಸಿರಿಗೌಡ ಮಾತನಾಡಿದರು. ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕಿ ಶೀಮತಿ ಸುರೇಖಾ ಪಾಟೀಲ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಶೀಮತಿ ದ್ರಾಕ್ಷಾಯಣಿ ಮಠಪತಿ ಸ್ವಾಗತಿಸಿದರು ಶೀಮತಿ ಸುಗಂಧಾ ಅಲ್ಲಟ್ಟಿ. ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 