ದಾಂಡೇಲಿಯಲ್ಲಿ ಗಾಂಜಾ ಮಾರುವವರ , ಸೇದುವವರ ವಿರುದ್ದ ಸಮರ ಜಾಗ್ರತಿ ಕಾರ್ಯಕ್ರಮ
Awareness program against marijuana sellers and smokers in Dandeli
ದಾಂಡೇಲಿ - ಮಾ. 3 : ದಾಂಡೇಲಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿ ಮತ್ತು ಯುವಜನರಲ್ಲಿ ಗಾಂಜಾ ಘಮಲು ಹಿಗಂಭೀರ ಸಾಮಾಜಿಕ ಆತಂಕವನ್ನು ತಂದೊಡ್ಡಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ, ಯುವಜನರಲ್ಲಿ ಗಾಂಜಾ ಸೇವನೆ ಹೆಚ್ಚುತ್ತಿರುವದು ಶಿಕ್ಷಣವಲಯ ಹಾಗೂ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಪೂರ್ಣ ಅರಿವು ಇಲ್ಲದ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳು ಸ್ನೇಹ ಬಳಗ ಪ್ರಭಾವ, ಕುತೂಹಲ ಅಥವಾ ಒತ್ತಡದಿಂದ ಗಾಂಜಾ ಮತ್ತಿತರ ಅಮಲು ಪದಾರ್ಥಗಳತ್ತ ಆಕರ್ಷಿತರಾಗುತ್ತಿದ್ದಾರೆ. ಸ್ಥಳೀಯ ಪೋಲಿಸ್ ಇಲಾಖೆ ಗಾಂಜಾ ಮಾರುವವರ ವಿರುದ್ದ, ಸೇದುವವರ ವಿರುದ್ದ ಸಮರವನ್ನೇ ಸಾರಿದ್ದು ಹಲವಾರು ಪ್ರಕರಣಗಳನ್ನು ಎನ್.ಡಿ.ಪಿ.ಎಸ್ ಕಾಯಿದೆಯಡಿ ದಾಖಲಿಸಿದ್ದಾರೆ.
ದಾಂಡೇಲಿ ಉಪ ವಲಯದ ಬಹುತೇಕ ಪೋಲಿಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವದು ಗಮನಾರ್ಹ ಜೊತೆಗೆ ಶಾಲಾ ಕಾಲೇಜುಗಳ ಮಟ್ಟದಲ್ಲಿ ಮಾದಕ ವಸ್ತುಗಳ ವಿರುದ್ದ ಜಾಗ್ರತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆದರೂ ವಿದ್ಯಾರ್ಥಿಗಳು, ಯುವಜನರು ಈ ವ್ಯಸನಕ್ಕೆ ತುತ್ತಾಗಿರುವದನ್ನು ಕಾಣಬಹುದು ಯುವಜನರು ದೇಶದ ಭವಿಷ್ಯ. ಗಾಂಜಾ ಘಮಲು- ತಾತ್ಕಾಲಿಕ ಮೋಜು ಎಂದು ಭಾವಿಸಿದರೂ, ಅದು ಭವಿಷ್ಯವನ್ನು ಹಾಳು ಮಾಡುವ ಅಪಾಯಕಾರಿ ಮಾರ್ಗವಾಗಿದೆ.ಕಳ್ಳ ದಂಧೆಯಲ್ಲಿ ಗಾಂಜಾ ಮಾರುವವರನ್ನು ಪೋಲಿಸರು ಹೆಡೆಮುರಿ ಕಟ್ಟಲು ಸತತ ಪರಿಶ್ರಮ ನಡೆಸಿದ್ದರೂ ಪೋಲಿಸರನ್ನೇ ಯಾಮಾರಿಸಿ ದಂಧೆ ನಡೆಸಿದ್ದಾರೆನ್ನಲಾಗಿದೆ. ಜಿಲ್ಲೆಯಾದ್ಯಂತ ಈ ಜಾಲ ಹರಡಿ ಎನ್ನುವ ಮಾಹಿತಿ ಇದೆ. ಪೋಲಿಸ್ ಇಲಾಖೆ ಅಲ್ಲಲ್ಲಿ ಹಿಡಿದು ಎನ್.ಡಿ.ಪಿ.ಎಸ್. ಕಾಯಿದೆಯಡಿ ಪ್ರಕರಣ ದಾಖಲಿಸುತ್ತಲೇ ಇದೆ. ದೇಶದಲ್ಲಿ ಗಾಂಜಾ ಬೆಳೆಸುವದು, ಮಾರಾಟ ಮಾಡುವದು ಮತ್ತು ಬಳಕೆ ಮಾಡುವದು ಅಪರಾಧವಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 