ಹದಿಹರೆಯದ ಯುವತಿಯರ ಮಾನಸಿಕ-ದೈಹಿಕ ಆರೋಗ್ಯದ ಜಾಗೃತೆ ಅತ್ಯವಶ್ಯ: ಡಾ. ಕುಲಕರ್ಣಿ
Awareness of mental and physical health of adolescent girls is essential: Dr. Kulkarni
ಧಾರವಾಡ 22: ದಿ. 21ರಂದು ನಗರದ ಟೋಲನಾಕಾದ ಅರ್ಜುನ ಪ.ಪೂ. ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಂಸ್ಕಾರ ಭಾರತಿ ಹಾಗೂ ಅರ್ಜುನ ಪ.ಪೂ. ಮಹಾವಿದ್ಯಾಲಯದ ಸಹಯೋಗದಲ್ಲಿ “ಹದಿಹರೆಯದ ಯುವತಿಯರಿಗಾಗಿ ಆಪ್ತ ಸಮಾಲೋಚನೆ” ಕಾರ್ಯಕ್ರಮವನ್ನು ಏರಿ್ಡಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಧಾನ ಕಾರ್ಯದರ್ಶಿಗಳಾದ ಡಾ.ಶಶಿಧರ ನರೇಂದ್ರ ಅವರು ಮಾತನಾಡುತ್ತ, ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ. ಎಂಬ ಗಾದೆ ಮಾತುಗಳು ಇಂದಿನ ದಿನಮಾನಕ್ಕೆ ಅತ್ಯಂತ ಅವಶ್ಯಕ ಎಂಬಂತಾಗಿದೆ. ಅದರಲ್ಲೂ ಓದು...ಓದು..ಓದು..ಅಂಕ..ಅಂಕ..ಅಂಕ..ಎಂಬ ಧಾವಂತದಲ್ಲಿ ಕರಿಯರ್ ಎಂಬ ಭ್ರಮೆಯಲ್ಲಿ... ವಸತಿ ಸಹಿತ ಶಾಲೆ ಕಾಲೇಜುಗಳು ವಿದ್ಯಾರ್ಥಿಗಳಿಗೆ ಅನಿವಾರ್ಯ ಎಂಬಂತಾಗಿರುವಾಗ ವಿದ್ಯಾರ್ಥಿಗಳ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯಗಳು ಏರುಪೇರಾಗುತ್ತಿವೆ. ಇಂದು ಹದಿಹರೆಯದ ಯುವತಿಯರಿಗೆ ತಜ್ಞವೈದ್ಯರಿಂದ ಆಪ್ತ ಸಮಾಲೋಚನೆ ಅತ್ಯಗತ್ಯವಾಗಿದೆ ಎಂದರು.
ಧಾರವಾಡ ಖ್ಯಾತ ಸ್ತ್ರೀರೋಗ ತಜ್ಞೆ ಹಾಗೂ ಸಂಸ್ಕಾರ ಭಾರತಿ, ಧಾರವಾಡ ಅಧ್ಯಕ್ಷರಾದ ಡಾ. ಸೌಭಾಗ್ಯ ಕುಲಕರ್ಣಿ ಅವರು ಹದಿಹರೆಯದ ಯುವತಿಯರ ಮಾನಸಿಕ ಸಮಸ್ಯೆಗಳು ಕುರಿತು ಆಪ್ತ ಸಮಾಲೋಚನ ನಡೆಸಿದರು. ವಸತಿಶಾಲೆಯ ಸುಮಾರು ನೂರು ವಿದ್ಯಾರ್ಥಿನಿಯರು ಪಾಲ್ಗೊಂಡು ಲಾಭ ಪಡೆದುಕೊಂಡರು. ಜೊತೆಗೆ ಡಾ.ಸೌಭಾಗ್ಯ ಕುಲಕರ್ಣಿ ಅವರು ವಿದ್ಯಾರ್ಥಿನಿಯರಿಗೆ ಸ್ತ್ರೀರೋಗಕ್ಕೆ ಸಂಬಂಧಿಸಿದಂತೆ ಉಚಿತ ಸಂದರ್ಶನವನ್ನು ಕಲ್ಪಿಸಿದ್ದಲ್ಲದೆ, ತಮ್ಮ ಪ್ರಶಾಂತ ನಸಿಂರ್ಗ ಹೋಮ ಮೂಲಕ ಆರೋಗ್ಯ ವಿಷಯಕ್ಕೆ ಅರ್ಜುನ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯವನ್ನು ದತ್ತು ತೆಗೆದುಕೊಳ್ಳುವುದಾಗಿ ತಿಳಿಸಿದರು. ಪ್ರತಿ ಎರಡು ತಿಂಗಳಿಗೊಮ್ಮೆ ಕಾಲೇಜಿಗೆ ಭೇಟಿ ನೀಡಿ ಉಚಿತವಾಗಿ ವಿದ್ಯಾರ್ಥಿನಿಯರ ಆರೋಗ್ಯ ತಪಾಸಿಸುವುದಾಗಿ ತಿಳಿಸಿದರು. ಅರ್ಜುನ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ನಿರ್ದೇಶಕ ಶಿವರಾಜ ಸುಲಾಖೆ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಪ್ರೊ.ಸಂತೋಷ ಹಂಚಾಟೆ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸಂತೋಷ ಭಟ್ ಉಪಸ್ಥಿತರಿದ್ದರು. ಸಂಸ್ಕಾರ ಭಾರತಿಯ ಸಾಧನಾ ಮಿರಜಕರ ಮತ್ತು ವೈಶಾಲಿ ರಸಾಳಕರ ವಿದ್ಯಾರ್ಥಿನಿಯರೊಂದಿಗೆ ಆಪ್ತ ಸಂಯೋಜಕಿಯರಾಗಿ ಕಾರ್ಯನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 