ನಗರಸಭೆಯಿಂದ ಸ್ವಚ್ಛ ನಿರ್ಮಾಣಕ್ಕಾಗಿ ಜಾಗೃತಿ ಅಭಿಯಾನ
Awareness campaign for clean construction by the Municipal Council
ಸವದತ್ತಿ 25: ನಮ್ಮ ಸವದತ್ತಿ ಪುರಸಭೆಯು ಈಗ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಈ ಬದಲಾವಣೆಗೆ ಪೂರಕವಾಗಿ ನಗರದ ಸ್ವಚ್ಛತೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸೋಣ, ಎಂದು ಕಾಂಗ್ರೆಸ್ ಮುಖಂಡ ಅಶ್ವಥ್ ವೈದ್ಯ ಅವರು ಹೇಳಿದರು.
ಸ್ವಚ್ಛ ಭಾರತ ಮಿಷನ್ 2.0 ಅಡಿಯಲ್ಲಿ ಸವದತ್ತಿ ಯಲ್ಲಮ್ಮ ನಗರಸಭೆಯು ಹಮ್ಮಿಕೊಂಡಿದ್ದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಗರಸಭೆ ಆವರಣದಲ್ಲಿ 5 ವಿಶೇಷ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ತ್ಯಾಜ್ಯ ವಿಂಗಡಣೆ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಪೋಸ್ಟರ್ ಹಾಗೂ ಮಾದರಿಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದರು.
ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಚ್ಛತೆಯ ಪ್ರತಿಜ್ಞೆ ಸ್ವೀಕರಿಸಿದರು. ಮನೆಗಳಲ್ಲಿಯೇ ಒಣ ಮತ್ತು ಒದ್ದೆ ಕಸವನ್ನು ಪ್ರತ್ಯೇಕಿಸುವ ಕುರಿತು ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲಾಯಿತು.
ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದಗಿಮಠ ಅವರು ಮಾತನಾಡಿ "ಸ್ವಚ್ಛತೆ ಎನ್ನುವುದು ಕೇವಲ ಕೆಲಸವಲ್ಲ, ಅದು ನಮ್ಮ ನಿತ್ಯದ ಅಭ್ಯಾಸವಾಗಬೇಕು. ಪ್ರತಿಯೊಬ್ಬ ನಾಗರಿಕನು ತನ್ನ ಪರಿಸರವನ್ನು ಸ್ವಚ್ಛವಾಗಿಡುವ ಹೊಣೆಗಾರಿಕೆ ಹೊಂದಿರಬೇಕು ಎಂದು ಹೇಳಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಹಿರಿಯ ನೀರೀಕ್ಷಕರಾದ ಸಿ.ಎಸ್. ಮಲಣ್ಣಕನವರ, ಕಿರಿಯ ನೀರೀಕ್ಷಕ ರಾಘವೇಂದ್ರ ವಾಡ್ಕರ್, ಕಿರಿಯ ಅಭಿಯಂತರು ಶಂಕರ್ ದಂಡಿನ, ಎಮ್.ಐ.ಪಾಟೀಲ, ಸುಭಾಸ ಅಮಾತೆನವರ, ಕಲಂದರ ಖನಗಾವಿ, ಆರ್. ಐ.ರಾಜಕುಮಾರ, ಎಸ್.ಐ.ಹಾದಿಮನಿ, ಬಿ.ಎನ್.ಪ್ರಭುನವರ, ಅಬ್ದುಲ್
ದಫೇದಾರ, ಮಲಿಕ್ ಚೂರಿಖಾನ, ಮಲ್ಲಿಕಾರ್ಜುನ ಬೀಳಗಿ, ದ್ಯಾಮಣ್ಣ ಸುತ್ತಗಟ್ಟಿ, ಹಾಗೂ ವಿದ್ಯಾರ್ಥಿಗಳು, ಮತ್ತು ಅಧಿಕಾರಿಗಳು, ಮಹಿಳಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 