ವಿಶ್ವ ವಿಕಲಚೇತನ ದಿನಾಚರಣೆ ನಿಮಿತ್ಯ ಜಾಗೃತಿ ಶಿಬಿರ
Awareness camp on the occasion of World Disability Day
ಯಮಕನಮರಡಿ, 06 : ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಹಾಗೂ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಬೆಳಗಾವಿ ಇವರ ಸಹಯೋಗದಲ್ಲಿ "ವಿಶ್ವ ವಿಕಲಚೇತನ ದಿನಾಚರಣೆ" ನಿಮಿತ್ಯ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಅಂಗವಿಕಲತೆ ಬಗ್ಗೆ ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರದ ನೋಡಲ್ ಅಧಿಕಾರಿಗಳಾದ ಶ್ರೀಮತಿ ಮಂಜುಳಾ ಜಿಮ್ಮನ್ನವರ ಮಾತನಾಡಿ ಅಂಗವಿಕಲತೆಗೆ ಹಾಗೂ ಪರಿಣಾಮಗಳ ಕುರಿತು ವಿವರಿಸಿ ಅಂಗವಿಕಲರಿಗೆ ಇರುವ ಸರ್ಕಾರದ ಯೋಜನೆಗಳ ಕುರಿತು ವಿವರಿಸಿದರು.
ಅದರಂತೆ ಶ್ರೀಮತಿ ಐ.ಎಮ್.ಕುರಬೇಟ ಕ್ಲಿನಿಕಲ್ ಸೈಕಾಲಾಜಿಸ್ಟ ಬಿಮ್ಸ ಆಸ್ಪತ್ರೆ ಬೆಳಗಾವಿ ಇವರು ಮಾತನಾಡಿ ಅಂಗವಿಕಲತೆಯ ಪ್ರಕಾರಗಳ ಕುರಿತು ವಿದ್ಯಾರ್ಥಿಗಳಿಗೆ ಪವರ ಪಾಯಿಂಟ ಪ್ರೆಜೆಂಟೇಶನ್ ಮೂಲಕ ವಿಸ್ತಾರವಾಗಿ ವಿವರಿಸಿದರು.
ಮುಖ್ಯವಾಗಿ ಅಂಗವಿಕಲತೆಗೆ ಸಂಬಂಧಿಕರರಲ್ಲಿ ವಿವಾಹವಾಗುವುದು ದೈಹಿಕ ಅಂಗವಿಕಲತೆಗೆ ಪ್ರಮುಖ ಕಾರಣವಾಗುತ್ತದೆ ಎಂದು ತಿಳಿಸಿ ಎಲ್ಲ ರೀತಿಯ ಅಂಗವಿಕಲತೆಗೆ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಎ.ರಾಮನಕಟ್ಟಿ ವಹಿಸಿದ್ದರು.
ಎನ್.ಎನ್.ಎಸ್. ಕಾರ್ಯಕ್ರಮ ಅಧಿಕಾರಿ .ಬಿ.ಬಿ.ಕೊಡ್ಲಿ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಸ್ವಾಗತ ಕೋರಿದರು. ಶ್ರೀ ಗೋಪಾಲ್ ಚಪಣಿ ಪತ್ರಕರ್ತರು ಉಪಸ್ಥಿತಿ ಇದ್ದರು ಎಸ್.ಆರ್.ತಬರಿ ಕಾರ್ಯಕ್ರಮ ನಿರೂಪಿಸುತ್ತಾ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ಪ್ರಾರಂಭಿಸಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 