“ಹಿರಿಯ ನಾಗರಿಕರ ಕಾನೂನು ಹಕ್ಕುಗಳು ಮತ್ತು ರಕ್ಷಣೆ” ಕುರಿತು ಜಾಗೃತಿ ಕಾರ್ಯಕ್ರಮ

Awareness Program on “Legal Rights and Protection of Senior Citizens”.

“ಹಿರಿಯ ನಾಗರಿಕರ ಕಾನೂನು ಹಕ್ಕುಗಳು ಮತ್ತು ರಕ್ಷಣೆ” ಕುರಿತು ಜಾಗೃತಿ ಕಾರ್ಯಕ್ರಮ

ಬೆಳಗಾವಿ 20 : ಕೆಎಲ್‌ಇ ವೇಣುದ್ವನಿ 90.4 ಏಫ್ ಎಮ್‌. ಸಮುದಾಯ ಬಾನುಲಿ ಕೇಂದ್ರ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ - ಭಾರತ ಸರಕಾರ ಮತ್ತು ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್, ನವದೆಹಲಿ ಹಾಗೂ ಅಪರೇಷನ್ ಮಧತ್ ಬೆಳಗಾವಿ ಇವರ ಸಹಯೋಗದಲ್ಲಿ ಅಟಲ್ ವಯೋ ಅಭ್ಯುದಯ ಯೋಜನೆ ಕುರಿತು ಸರಣಿ ರೇಡಿಯೋ ಕಾರ್ಯಕ್ರಮದಡಿಯಲ್ಲಿ “ನಮ್ಮ  ಹಿರಿಯರು  ನಮ್ಮ  ಗೌರವ” ಎಂಬ ಘೋಷವಾಕ್ಯದಡಿಯಲ್ಲಿ ಗುರುವಾರ ದಿನಾಂಕ 20ನೆ ಫೆಬ್ರುವರಿ 2025 ರಂದು ಬೆಳಗಾವಿ ತಾಲೂಕಿನ ಕಾಳೆನಟ್ಟಿ ಗ್ರಾಮದಲ್ಲಿ “ಹಿರಿಯ ನಾಗರಿಕರ ಕಾನೂನು ಹಕ್ಕುಗಳು ಮತ್ತು ರಕ್ಷಣೆ” ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  

ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವಕೀಲರಾದ ಸುಜಾತಾ ಬಿ. ಗೌಂಡಾಡಕರ್ ಅವರು ಭಾಗವಹಿಸಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಹಿರಿಯ ನಾಗರಿಕರು ನಿರ್ಲಕ್ಷ್ಯಕ್ಕೋಳಗಾಗುತ್ತಿದ್ದಾರೆ ಇದು ಬಹಳ ಬೆಸರದ ಸಂಗತಿ. ಹಿರಿಯ ನಾಗರಿಕರ ಸಹಾಯ ಮತ್ತು ಸುರಕ್ಷತೆಗಾಗಿಯೇ ಅನೇಕ ಕಾನೂನುಗಳಿವೆ ಅವುಗಳ ಬಗ್ಗೆ ಅವರಿಗೆ ಅರಿವಿರಬೇಕು, ಸರ್ಕಾರಗಳು ಹಲವಾರು ಯೋಜನೆಗಳನ್ನು ಹಿರಿಯ ನಾಗರಿಕರಿಗೆ ನೀಡುವ ಮೂಲಕ ಹಿರಿಯ ನಾಗರಿಕರ ಶೋಷಣೆಯನ್ನು ತಪ್ಪಿಸುವ ಕೆಲಸ ಮಾಡುತ್ತಿದೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು.   

ವೇಣುಧ್ವನಿ ಸಮುದಾಯ ಬಾನುಲಿ ರೇಡಿಯೋ ಕೇಂದ್ರದಿಂದ ಹಿರಿಯ ನಾಗರಿಕರಿಗಾಗಿಯೇ ಆರೋಗ್ಯ, ಕಾನೂನು ಹಕ್ಕುಗಳು ಮತ್ತು ಸರ್ಕಾರಿ ಯೋಜನೆಗಳ ಕುರಿತು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಪ್ರಸಾರಮಾಡಲಾಗುತ್ತಿದೆ ಎಂದು ವೇಣುಧ್ವನಿಯ ಕಾರ್ಯಕ್ರಮ ಸಂಯೋಜಕ ಮಂಜುನಾಥ ಬಳ್ಳಾರಿ ತಿಳಿಸಿದು  

ಈ ಸಂದರ್ಭದಲ್ಲಿ ಅಪರೇಷನ್ ಮಧತ್ ಸದಸ್ಯ ರಾಹುಲ ಪಾಟೀಲ, ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷ ಪಿ. ಎಸ್‌. ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.