ಗ್ಯಾರಂಟಿಯಿಂದ ವಂಚಿತಳಾದ ವಯೋವೃದ್ದೆಗೆ ನೆರವಾದ ಪ್ರಾಧಿಕಾರ

ಗ್ಯಾರಂಟಿಯಿಂದ ವಂಚಿತಳಾದ ವಯೋವೃದ್ದೆಗೆ ನೆರವಾದ ಪ್ರಾಧಿಕಾರ Authority to help the elderly deprived of guarantees

ಗ್ಯಾರಂಟಿಯಿಂದ ವಂಚಿತಳಾದ ವಯೋವೃದ್ದೆಗೆ ನೆರವಾದ ಪ್ರಾಧಿಕಾರ 

ಗದಗ 05 :- ನಗರದ 21 ನೇ ವಾರ್ಡಿನ ಎಲಿಗಾರ ಪ್ಲಾಟ್ ಬಡಾವಣೆಯ ನಿವಾಸಿಗಳಾದ ಕಡು ಬಡತನದ ವಯೋವೃದ್ಧ ಮಹಿಳೆಯಾದ ಯಲ್ಲಮ್ಮ ನಾಗಪ್ಪ ನಾವಳ್ಳಿಯವರಿಗೆ ಆಡಳಿತಾರೂಢ ಕಾಂಗ್ರೇಸ್ ಸರಕಾರದ ಮಹಾತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಯಾದ ಗ್ರಹಲಕ್ಷ್ಮೀ ಯೋಜನೆಯ ಮಾಸಿಕ 2000/-ಪಡೆಯುವುದರಿಂದ ವಂಚಿತಳಾದುದನ್ನು ಮನಗಂಡು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿಯ ಅಧ್ಯಕ್ಷರಾದ ಬಿ ಬಿ ಅಸೂಟಿ ಹಾಗೂ ಸದಸ್ಯರನ್ನೊಳಗೊಂಡ ತಂಡದವರಿಂದ ಫಲಾನುಭವಿಯು ಯೋಜನೆಯಿಂದ ವಂಚಿತರಾಗಲು ಮೂಲ ಹಿನ್ನೆಲೆಯನ್ನು ಅರಿತು ಅದಕ್ಕೆ ಸೂಕ್ತವಾದ ಪರಿಹಾರವನ್ನು ಒದಗಿಸಿ ಕೊಡುವಲ್ಲಿ ಯಶಸ್ವಿಯಾಗಿರುತ್ತಾರೆ. 

ಘನ್ ರಾಜ್ಯ ಸರಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳ ಮೇಲುಸ್ತುವಾರಿಗಾಗಿಯೇ ರಚನೆಯಾದ ಕರ್ನಾಟಕ ರಾಜ್ಯ  ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಬಿ ಬಿ ಅಸೂಟಿಯವರನ್ನು ಸಂಪರ್ಕಿಸಲಾಗಿ ಅವರು ತುಂಬುತ್ಸಾಹದೊಂದಿಗೆ ಕಾರ್ಯಪ್ರವೃತ್ತರಾಗಿ ಸಮಿತಿಯ ಸದಸ್ಯರನ್ನು ಒಳಗೊಂಡ ತಂಡದವರಾದ  ಸಾವಿತ್ರಿ ಹೂಗಾರ,ಹಾಗೂ ವಿಜಯಕುಮಾರ ಬೆಳ್ಳೂಬ್ಬಿ ಇವರಿರ್ವರು ಕೂಡಿಕೊಂಡು ವಯೋವೃದ್ದೆಯ ಸೊಸೆಯನ್ನು ಸಂಪರ್ಕಿಸಿ ವಿಚಾರಿಸಲಾಗಿ ಅವರು ತಮ್ಮ ಮನೆತನದ ಆರ್ಥಿಕ ಅಡಚಣೆಯಿಂದಾಗಿ ಹೀಗಾಗಿರುತ್ತದೆ. ಗ್ರಹಲಕ್ಷ್ಮೀ ಗ್ಯಾರಂಟಿ ಇಲ್ಲಿಯವರೆಗಿನ ಹಣ ರೂಪಾಯಿ 40000/- ಅದರಲ್ಲಿ 20000/- ಕೊಡುವುದಾಗಿ ಒಪ್ಪಿಕೊಂಡ ಪ್ರಯುಕ್ತ ಆ ಹಣವನ್ನು ಇದೇ ದಿನಾಂಕ 02/09/2025 ರಂದು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ಸಮಿತಿಯ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ವಯೋವೃದ್ದೆಯಾದ ಯಲ್ಲಮ್ಮ ಗಂಗಪ್ಪ ನಾವಳ್ಳಿಯವರಿಗೆ ನೀಡಲಾಯಿತು.  

ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರಾದ ನೀಲಮ್ಮ ಬೋಳನವರ. ಹೇಮಂತಗೌಡ ಪಾಟೀಲ್ , ಪಿ. ಬಿ ಅಗಳವಾಡಿ ,  ದೀಪಕ್ ಜಿ, ಲಮಾಣಿ , ಫಕ್ರುಸಾಬ ಚಿಕ್ಕಮಣ್ಣೂರ, ಸದಸ್ಯರಾದ ಸಂಗನಗೌಡ ಜಿ ಪಾಟೀಲ, ವಿವೇಕ ಯಾವಗಲ್, ಶೋಕ ಮಂದಾಲಿ, ಶರಣಪ್ಪ ಬೆಟಗೇರಿ , .ಶಿವನಗೌಡ ಪಾಟೀಲ, ಶರೀಫ್ ಬೆಳೆಯಲಿ, ನಾಗರಾಜ ಶಿವಪ್ಪ ಮಡಿವಾಳರ , ದೇವಪ್ಪ ಮೋರನಾಳ, ಪುಲಕೇಶಗೌಡ ಪಾಟೀಲ ಇನ್ನಿತರರು ಉಪಸ್ಥಿತರಿದ್ದರು.