ರಾಷ್ಟ್ರಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಅಗತ್ಯ: ಅಜಯ್ ಮಿಶ್ರಾ

ಧಾರವಾಡ 24: ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ವಿಜೇತ ಸ್ಪರ್ಧೆ ಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಮೊದಲು ಉತ್ತಮವಾದ ತರಬೇತಿ ಮತ್ತು ಚೆನ್ನಾಗಿ ಅಭ್ಯಾಸ ಮಾಡಿ ಕರ್ನಾ ಟಕ ರಾಜ್ಯದ ಹೆಸರು ತರಬೇಕೆಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಅಜಯ್ ಮಿಶ್ರಾ ಹೇಳಿದರು. 

ಅವರು ಇಂದು ಧಾರವಾಡ ನಗರದ ಆರ್.ಎನ್.ಶಟ್ಟಿ ಕ್ರೀಡಾಂಗಣದಲ್ಲಿ ರಾಜ್ಯ ಅರಣ್ಯ ಇಲಾಖೆ ಆಯೋಜಿಸಿರುವ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಆಯ್ಕೆಯಾದ ಕ್ರೀಡಾಪಟುಗಳು ಉತ್ತಮವಾದ ತರಬೇತಿ ಪಡಯುವ ಮೂಲಕ ರಾಷ್ಟ್ರಮಟ್ಟದಲ್ಲಿಯೂ ಸಹ ಉತ್ಸಾಹದಿಂದ ಭಾಗವಹಿಸಿ ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಕೀತರ್ಿ ತರಬೇಕೆಂದು ವಿಜೇತ ಕ್ರೀಡಾಪಟುಗಳಿಗೆ ತಿಳಿಸಿದರು. 

ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಪುನೀತ್ ಪಾಠಕ್ ಮಾತನಾಡಿ, ಈ ವರ್ಷದ ಕ್ರೀಡಾಕೂಟವನ್ನು ನಿಷ್ಪಕ್ಷಪಾತವಾಗಿ ಹಾಗೂ ಬಹಳ ಕಾಳಜಿಯಿಂದ ನಿರ್ವಹಿಸಿದ್ದಾರೆ. ಧಾರವಾಡದಲ್ಲಿ ನಡೆದ ಕ್ರೀಡಾಕೂಟವು ಮುಂದಿನ ಕ್ರೀಡಾಕೂಟಕ್ಕೆ ಮಾದರಿಯಾಗಿದೆ ಎಂದು ಹೇಳಿದರು. 

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪ್ರಚಾರ ಮತ್ತು ಐಸಿಟಿ) ಸಿವರಾಜ್ ಸಿಂಗ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುರುಷ ವಿಭಾಗದ ಕಬ್ಬಡ್ಡಿ ಸ್ಪರ್ಧೆ ಯಲ್ಲಿ ಮಗಳೂರು ವೃತ್ತ ಪ್ರಥಮ ಸ್ಥಾನ, ಧಾರವಾಡ ವೃತ್ತ ದ್ವಿತೀಯ ಸ್ಥಾನ ಹಾಗೂ ಮಹಿಳೆಯರ ವಿಭಾಗದ ಕಬ್ಬಡ್ಡಿ ಸ್ಪರ್ಧೆ ಯಲ್ಲಿ ಬೆಂಗಳೂರು ವೃತ್ತ ಪ್ರಥಮ ಸ್ಥಾನ, ಗುಂಗರಗಟ್ಟಿಯ ಅರಣ್ಯ ಅಕಾಡೆಮಿ ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು. ಹಗ್ಗ ಜಗ್ಗಾಟ ಸ್ಪರ್ಧೆ ಯಲ್ಲಿ ಮಂಗಳೂರು ವೃತ್ತ ಪ್ರಥಮ ಸ್ಥಾನ ಹಾಗೂ ಚಾಮರಾಜನಗರ ವೃತ್ತ ದ್ವಿತೀಯ ಸ್ಥಾನ ಪಡೆಯಿತು. 

ವಿವಿಧ ಸ್ಪರ್ಧೆ ಗಳಲ್ಲಿ ಭಾಗವಹಿಸಿ ವ್ಯಯಕ್ತಿಕವಾಗಿ ಬಹುಮಾನ ಗಳಿಸಿದ ವಿಜೇತರಿಗೆ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಿ, ಶುಭ ಕೋರಲಾಯಿತು. 

ಕ್ರೀಡಾಕೂಟದ ಸಮಗ್ರ ವಿರಾಗ್ರಣಿ ಸ್ಥಾನವನ್ನು ಕೆನರಾ ವೃತ್ತದ ತಂಡವು ಪಡೆದುಕೊಂಡಿತು. ಧಾರವಾಡ ಗುಂಗರಗಟ್ಟಿ ಅರಣ್ಯ ಅಕಾಡಮಿಯ ತಂಡವು ರನ್ನರ್ ಅಫ್ ಗಳಿಸಿತು. ಹಾಗೂ ಬೆಂಗಳೂರಿನ ಪಿ.ಎಂ. ಸರಿತಾ ಅವರಿಗೆ ಅತ್ಯುತ್ತಮ ಮಹಿಳಾ ಕ್ರೀಡಾಪಟು ಹಾಗೂ ಧಾರವಾಡದ ಎನ್.ಬಿ. ಉಳಾಗಡ್ಡಿ ಅವರಿಗೆ ಅತ್ಯುತ್ತಮ ಪುರುಷ ಕ್ರೀಡಾಪಟು ಬಹುಮಾನ ನೀಡಲಾಯಿತು.  

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕರ್ನಾ ಟಕ ಅರಣ್ಯ ಕ್ರೀಡಾ ಮಂಡಳಿ ಸದಸ್ಯ ಕಾರ್ಯದರ್ಶಿ  ಜಿ.ಎಸ್.ಯಾದವ್, ಧಾರವಾಡ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಆರ್.ಚವ್ಹಾಣ್, ಗೀತಾಂಜಲಿ, ಮನೋಜ್ ಕುಮಾರ್ ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಕ್ರೀಡಾಪಟುಗಳು ಭಾಗವಹಿಸಿದ್ದರು. 

ಹಾವೇರಿ ಡಿಸಿಎಫ್ ಕ್ರಾಂತಿ ಸ್ವಾಗತಿಸಿದರು. ರವಿ ಕುಲಕಣರ್ಿ ಕಾರ್ಯಕ್ರಮ ನಿರೂಪಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶಕುಮಾರ್ ವಂದಿಸಿದರು.