ಏಷ್ಯಾ ಚಾಂಪಿಯನ್ಶಿಪ್: ಸೈನಾ ನೆಹ್ವಾಲ್ ಶುಭಾರಂಭ
ವೂಹಾನ್, ಏ 24 ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು 2019ರ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಹ್ಯಾನ್ ಯು ಅವರ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಸೈನಾ ನೆಹ್ವಾಲ್ ಅವರು 12-21, 21-11, 21-17 ಅಂತರದಲ್ಲಿ ಚೀನಾ ಆಟಗಾತರ್ಿಯನ್ನು ಸೋಲಿಸಿದರು. ಆ ಮೂಲಕ ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.
ಪಂದ್ಯದ ಆರಂಭಿಕ ಸೆಟ್ನಲ್ಲಿ ಉತ್ತಮ ಪೈಪೋಟಿ ನೀಡಿದ 19 ವರ್ಷದ ಹ್ಯಾನ್ ಯು, ವಿಶ್ವ ಒಂಬತ್ತನೇ ಶ್ರೇಯಾಂಕದ ಸೈನಾ ನೆಹ್ವಾಲ್ ಅವರನ್ನು 21-12 ಅಂತರದಲ್ಲಿ ಸೋಲಿಸಿದರು. ಬಳಿಕ ಎರಡನೇ ಸೆಟ್ನಲ್ಲಿ ಎಚ್ಚೆತ್ತುಕೊಂಡ ಸೈನಾ, ತಮ್ಮ ಅನುಭವ ಆಟದ ಮೂಲಕ ಚೈನೀಸ್ ಆಟಗಾತರ್ಿಯನ್ನು 21-17 ಅಂತರದಲ್ಲಿ ಮಣ್ಣು ಮುಕ್ಕಿಸಿದರು.
ಅದೇ ಲಯ ಮುಂದುವರಿಸಿದ ಭಾರತದ ಆಟಗಾತರ್ಿ ಮೂರನೇ ಹಾಗೂ ಅಂತಿಮ ಸೆಟ್ನಲ್ಲಿ 21-17 ಅಂತರದಲ್ಲಿ ಗೆದ್ದು ಪಾರಮ್ಯ ಮೆರೆದರು.
" ಅಂಗಳದಲ್ಲಿ ತನ್ನ ತಪ್ಪುಗಳು ಮುಂದುವರಿದಿವೆ. ಪಂದ್ಯದಲ್ಲಿ ನಾನು ಸ್ವಲ್ಪ ಆಸಕ್ತಿ ಹೊಂದಿದ್ದೆ. ಕಳೆದ ವರ್ಷ ಸೈನಾ ನೆಹ್ವಾಲ್ ಅವರನ್ನು ಮಣಿಸಿದ್ದೆ. ಆದರೆ, ಈ ವರ್ಷದಲ್ಲಿ ಅವರ ವಿರುದ್ಧ ಆಡುವುದು ಕಠಿಣವಾಗಿದೆ. ಕೆಲವು ತಂತ್ರಗಳು ಅರಿವಿದ್ದರೂ ನನ್ನ ಆಟವನ್ನು ಬೆನ್ನಟ್ಟಲು ಕಷ್ಟವಾಯಿತು. " ಎಂದು ಪಂದ್ಯದ ಬಳಿಕ ಹ್ಯಾನ್ ಯು ಪ್ರತಿಕ್ರಿಯಿಸಿದರು.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 