7.45 ಕೋಟಿ ಲಾಭ: ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಪ್ರಗತಿಯತ್ತ
7.45 crore profit: Kuruhinashetti Urban Co-op Credit Society towards progress
ಗುರ್ಲಾಪುರ್ ಸೆ. 3: ಮೂಡಲಗಿ ಪಟ್ಟಣದ ಪ್ರತಿಷ್ಠಿತ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ 2025-26ನೇ ಸಾಲಿನ ಮಾರ್ಚ್ ಅಂತ್ಯಕ್ಕೆ 7.45 ಕೋಟಿ ಲಾಭ ಗಳಿಸಿ ಪ್ರಗತಿಯತ್ತ ಸಾಗುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಸುಭಾಸ ಬೆಳಕೂಡ ಹೇಳಿದರು.
ಸೊಸೈಟಿಯ ಸಭಾಭವನದಲ್ಲಿ ಸೋಮವಾರ ನಡೆದ 31ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಸೊಸೈಟಿ ಈಗಾಗಲೇ 18 ಶಾಖೆಗಳನ್ನು ಹೊಂದಿದ್ದು, ಶೀಘ್ರದಲ್ಲೇ ಇನ್ನೂ ಐದು ಶಾಖೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಷೇರುದಾರರಿಗೆ ಶೇ.17ರಷ್ಟು ಲಾಭಾಂಶ ನೀಡಲಾಗುವುದು. ಮರಣ ಹೊಂದಿದ ಷೇರು ಸದಸ್ಯರ ಕುಟುಂಬಕ್ಕೆ 3,000 ಧನಸಹಾಯ ನೀಡಲಾಗುವುದು ಎಂದು ಅವರು ಹೇಳಿದರು.
ಸೊಸೈಟಿಯ ಉಪಾಧ್ಯಕ್ಷ ಇಸ್ಮಾಯಿಲ್ ಕಳ್ಳಿಮನಿ, ನಿರ್ದೇಶಕರಾದ ಬಸಪ್ಪ ಮುಗಳಖೋಡ, ಲಕ್ಕಪ್ಪ ಪೂಜೇರಿ, ಗೋಡಚೆಪ್ಪ ಮುರುಗೋಡ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ, ರಾಮಪ್ಪ ಬಳೇಗಾರ, ರುಕ್ಮವ್ವ ಪೂಜೇರಿ, ಶಾಂತವ್ವ ಬೋರಗಲ್, ಶ್ಯಾಲನ್ ಕೊಡತೆ, ಉಮಾ ಬೆಳಕೂಡ ಹಾಗೂ ಶಾಖಾ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೋಡಿ ಸ್ವಾಗತಿಸಿದರು. ಸಿ.ಕೆ. ಕೊಡತೆ ವರದಿ ವಾಚಿಸಿದರು. ಶಿವಾನಂದ ಮುರುಗೋಡ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 