ಕಲಾವಿದ ಶರಣು, ಹೊಸಮನಿಗೆ ಸನ್ಮಾನ
Artist Sharanu, Hosmani honored
ಕಲಾವಿದ ಶರಣು, ಹೊಸಮನಿಗೆ ಸನ್ಮಾನ
ಸಿಂದಗಿ 31; ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಉಪಾಧ್ಯಕ್ಷ ಎಂ.ಎ.ಸಿಂದಗಿಕರ, ಜಿಲ್ಲಾಧ್ಯಕ್ಷ ಖಾಜು ಹೊಸಮನಿ ಅವರ ಆದೇಶದನ್ವಯ ಸಿಂದಗಿ ತಾಲೂಕಿನ ಮಾಡಬಾಳ ಗ್ರಾಮದ ಜಾನಪದ, ಭಕ್ತಿಗೀತೆ, ವ್ಯಕ್ತಿಗೀತೆಗಳ ನೂರಾರು ಗೀತೆಗಳ ಸಾಹಿತ್ಯವನ್ನ ರಚಿಸಿ ಹಲವಾರು ಹಾಡುಗಳನ್ನ ಸ್ವತಃ ಹಾಡಿದ ಕಲಾವಿದ ಶರಣು ಹೊಸಮನಿ ಇವರನ್ನು ತಾಲೂಕಾ ದಲಿತಸೇನೆಯ ಪ್ರಧಾನ ಕಾರ್ಯದರ್ಶಿಯಾಗಿ ಸರ್ವ ಸದಸ್ಯರ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲೂಕಾಧ್ಯಕ್ಷ ಮಹೇಶ ಜಾಬನವರ ತಿಳಿಸಿ ನಂತರ ಅವರನ್ನು ತಾಲೂಕಾ ದಲಿತ ಸೇನೆ ವತಿಯಿಂದ ಸನ್ಮಾನಿಸಲಾಯಿತು,
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲಾವಿದ ಶರಣು, ವೃತ್ತಿಯಲ್ಲಿ ಸರ್ವಪ್ರಯಾಣಿಕರನ್ನ ಹೊತ್ತೊಯ್ಯುವ ಟಂ ಟಂ ನಡೆಸುತ್ತಿರುವ ನನಗೆ, ಸಾಹಿತ್ಯದಲ್ಲಾಗಲಿ, ಸಂಘಟನೆಯಲ್ಲಾಗಲಿ ಸರ್ವರೊಂದಿಗೆ ವಿಶ್ವಾಸದಿಂದ, ನ್ಯಾಯಯುತವಾಗಿ ಕೆಲಸ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಕಾರ್ಯಕರ್ತರು, ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಪದಾಧಿಕಾರಿಗಳು, ಅಭಿಮಾನಿಗಳು ಬಾಗವಹಿಸಿದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 