ವಿಜಯಪುರದಲ್ಲಿ ವೃಕ್ಷಥಾನ್ ರಂಗುರಂಗಿನ ಸಾಂಸ್ಕೃತಿಕ ಓಟದಲ್ಲಿ ಕಲಾತಂಡಗಳು
Art groups participate in the colorful cultural run of Vrikshathan in Vijayapura
ವಿಜಯಪುರ 01: ವೃಕ್ಷಥಾನ್ ರಂಗುರಂಗಿನ ಸಾಂಸ್ಕೃತಿಕ ಓಟ, ಇದು ಬರಿ ಓಟವಲ್ಲ- ಸಂಸ್ಕೃತಿಯ ಅನಾವರಣ. ಓಟಗಾರರಿಗೆ ಸ್ಪೂರ್ತಿ ತುಂಬಲು ಮಾರ್ಗದಲ್ಲಿ ಕಲಾ ತಂಡಗಳ ನಿಯೋಜನೆ
1. ಡಾ. ಬಿ. ಆರ್. ಅಂಬೇಡ್ಕರ್ ಒಳ ಆವರಣ- ವೃಕ್ಷಥಾನ ವತಿಯಿಂದ ಪುಣೆಯ ಆಸ್ಟಿನ್ ಅವರಿಂದ ಜುಂಬಾ ಡ್ಯಾನ್ಸ್.
2. ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದ ಓಟದ ಪ್ರಾರಂಭಿಕ ಸ್ಥಳ- ಉದ್ಯಮಿ ಅನಿಲ ಧಾರವಾಡಕರ ಹಾಗೂ ಶ್ರೀಕಾಂತ ಮಂತ್ರಿ ಅವರ ವತಿಯಿಂದ ಇಬ್ಬರು ಕಲಾವಿದರಿಂದ ಕಹಳೆ ವಾದನ ಮತ್ತು ಕಾಖಂಡಕಿಯ 8 ಕಲಾವಿದರಿಂದ ಕರಡಿ ಮಜಲ್.
3. ಕನಕದಾಸ ವೃತ್ತ - ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 14 ಕಲಾವಿದರಿಂದ ಗೊಂಬೆ ಕುಣಿತ.
4. ಆಸಾರ ಮಹಲ್ ಮುಂಭಾಗ- ಮಹಿಳಾ ವಿಶ್ವವಿದ್ಯಾಲಯ ವತಿಯಿಂದ ವಿವಿಯ 40 ವಿದ್ಯಾರ್ಥಿನಿಯರಿಂದ ಬ್ಯಾಂಡ್ ವಾದನ.
5. ದರ್ಬಾರ ಹೈಸ್ಕೂಲ್ ಮೈದಾನದ ಮುಂಭಾಗ- ಪರಿಸರ ಪ್ರೇಮಿ ಸನ್ನಿ ಗವಿಮಠ ವತಿಯಿಂದ 14 ಯುವತಿಯರಿಂದ ಚಿಯರ್ ಅಪ್ ನೃತ್ಯ.
6. ಕಲ್ಯಾಣಶೆಟ್ಟಿ ವೃತ್ತ(ಗೋಳಗುಮ್ಮಟ ರಸ್ತೆ)- ಶೋಭಾ ನರ್ಸಿಂಗ್ ಹೋಂ, ಡಾ. ಶಂಕರಗೌಡ ಪಾಟೀಲ ವತಿಯಿಂದ 10 ಜನರ ತಂಡದಿಂದ ತಾಶಾ(ಬ್ಯಾಂಜೋ) ವಾದನ.
7. ಗೋಳಗುಮ್ಮಟ ಆವರಣ- ಮಾಜಿ ಉಪಮೇಯರ್ ದಿನೇಶ ಹಳ್ಳಿ ಅವರ ವತಿಯಿಂದ ಕೇರಳದ 35 ಜನ ಮಹಿಳಾ ಕಲಾವಿದರಿಂದ ಫ್ಲವರ್ ಡ್ಯಾನ್, ಮೈಲಾರಲಿಂಗೇಶ್ವರ ಕೊರವ ಕುಣಿತ, ಹಾಗೂ ಶೃಂಗಾರ ನೃತ್ಯ.
8. ಬಸವೇಶ್ವರ ವೃತ್ತ- ಅರುಣ ಹುಂಡೆಕಾರ ಅವರ ಸ್ಪೂರ್ತಿ ಫೌಂಡೇಶನ್ ವತಿಯಿಂದ ಖಾನಾಪುರ ಎಸ್. ಕೆ. ಶ್ರೀ ಹೆಬ್ಬಳ್ಳೆಮ್ಮಾ ಗೊಂಬೆ ಕುಣಿತ ತಂಡ ಮತ್ತು ಕೊಣ್ಣೂರಿನ ರಾಯಣ್ಣ ಮಹಿಳಾ ಡೊಳ್ಳಿನ ಕಲಾ ತಂಡಗಳಿಂದ ಪ್ರದರ್ಶನ.
9. ಗಾಂಧಿವೃತ್ತ- ಡಾ. ಪ್ರಭುಗೌಡ ಪಾಟೀಲ ಅವರ ಅನುಗೃಹ ಆಸ್ಪತ್ರೆ ವತಿಯಿಂದ ಶಿರಸಿಯ ಸ್ಮಾರ್ಟ್ ಡ್ಯಾನ್ಸ್ ಅಕಾಡೆಮಿಯ 10 ಕಲಾವಿದರಿಂದ ಚಿಯರ್ ಅಪ್ ನೃತ್ಯ.
10. ಶಿವಾಜಿ ಚೌಕ್- ಶ್ರೀರಾಮನವಮಿ ಉತ್ಸವ ಸಮಿತಿ (ಉಮೇಶ ವಂದಾಲ) ಅವರ ವತಿಯಿಂದ ಆರು ಕಲಾವಿದರಿಂದ ಹಲಗೆವಾದನ.
11. ವಾಟರ್ ಟ್ಯಾಂಕ್- ಎಪಿ ಗ್ರುಪ್ ನ ವತಿಯಿಂದ 10 ಕಲಾವಿದರಿಂದ ಚೀಯರ್ ಅಪ್ ನೃತ್ಯ.
12. ಇಬ್ರಾಹಿಂ ರೋಜಾ ಮುಂಭಾಗ- ಈದ್ಗಾ ಸಮಿತಿ ವತಿಯಿಂದ ಹಂಸ ಧ್ವನಿ 8 ಕಲಾವಿದರಿಂದ ಗಿಟಾರ್ ವಾದನ ಮತ್ತು ದೇಶಭಕ್ತಿ ಗೀತೆ.
13. ಸೈನಿಕ ಶಾಲೆಯ ಆವರಣ- ಸೈನಿಕ ಶಾಲೆಯ ವತಿಯಿಂದ ದೇಶ ಭಕ್ತಿ ಗೀತೆ ಧ್ವನಿ ಸುರುಳಿ.
14. ಸವಿ ವಾಟರ್ ಸರ್ಕಲ್ (ಬಿ.ಎಂ.ಪಾಟೀಲ ರಸ್ತೆ)- ಸೋಮು ಜೇವೂರ ಅವರ ಸವಿ ವಾಟರ್ ಗ್ರುಪ್ ವತಿಯಿಂದ 10 ಕಲಾವಿದರಿಂದ ಬ್ಯಾಂಜೊ ವಾದನ ಮತ್ತು ಪುಷ್ಪಗಳ ಮೂಲಕ ಚಿಯರ್ ಅಪ್.
15. ಬಂಜಾರಾ ಕ್ರಾಸ್- ಬಾಬಾ ಸ್ಟಿಲ್ ಮತ್ತು ಓಂ ಟ್ರೇಡರ್ ಬಾಬು ಚವ್ಹಾಣ ಅವರ ವತಿಯಿಂದ 14 ಕಲಾವಿದರಿಂದ ಬಂಜಾರಾ ನೃತ್ಯ ಪ್ರದರ್ಶನ.
16. ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜು ಆವರಣ (ಬಿ.ಎಂ.ಪಾಟೀಲ ರಸ್ತೆ)-10 ಜನ ಬಿ.ಎಲ್.ಡಿ.ಇ ವೈದ್ಯಕೀಯ ವಿದ್ಯಾರ್ಥಿಗಳಿಂದ ಚಿಯರ್ ಅಪ್ ನೃತ್ಯ ಹಾಗೂ ರಂಗೋಲಿ.
17. ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜು ಮುಂಭಾಗ- ಹ್ಯಾಪಿಕೇಕ್ ತುಷಾರ್ ಗ್ರುಪ್ ನಿಂದ ಡಿಜೆ ಸೌಂಡ್.
18. ಜ್ಞಾನ ಯೋಗಾಶ್ರಮದ ಆವರಣ- ಜ್ಞಾನಯೋಗಾಶ್ರಮದಿಂದ ಸಂತನೆಂದರೆ ಯಾರು ಧ್ವನಿ ಸುರುಳಿ ಪ್ರಸಾರ.
19. ಶ್ರೀ ಸಿದ್ದೇಶ್ವರ ಪೆಟ್ರೋಲಿಯಂ(ಬಿ.ಎಲ್.ಡಿ.ಇ ರಸ್ತೆ)- ಸಚೀನ ಕಲ್ಲೂರ ವತಿಯಿಂದ 6 ಕಲಾವಿದರಿಂದ ನವಿಲು ಕುಣಿತ.
20. ಶ್ರೀ ಸಿದ್ಧೇಶ್ವರ ದೇವಸ್ಥಾನ ಆವರಣ- ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ವತಿಯಿಂದ 10 ಕಲಾವಿದರಿಂದ ಡೊಳ್ಳು ಕುಣಿತ.
21. ಬಾರಾ ಕಮಾನ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 5 ಕಲಾವಿದರಿಂದ ಕೊಳಲು ವಾದನ.
ಈ ಪತ್ರಿಕಾಗೋಷ್ಠಿಯಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ, ಉಪಾಧ್ಯಕ್ಷ ಶಿವನಗೌಡ ಪಾಟೀಲ, ಸದಸ್ಯರಾದ ಸೋಮು ಮಠ, ಅಮಿತ ಬಿರಾದಾರ ಹಾಗೂ ವೃಕ್ಷಥಾನ್ ನೋಂದಣಿ ಸಮಿತಿಯ ವಿನಯ ಕಂಚ್ಯಾಣಿ ಉಪಸ್ಥಿತರಿದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 