ಕಾರವಾರ ಜೈಲ್ ನಲ್ಲಿ ಸಿಬ್ಬಂದಿ ಮತ್ತು ಖೈದಿಗಳ ಮಧ್ಯೆ ವಾಗ್ವಾದ: ಸ್ಥಳಾಂತರಕ್ಕೆ ಡಿಐಜಿಗೆ ಪತ್ರ - ಎಸ್ಪಿ
Argument between staff and prisoners in Karwar Jail: Letter to DIG for transfer - SP
ಕಾರವಾರ 10: ಕಾರವಾರ ಜೈಲ್ ನಲ್ಲಿ ಸಿಬ್ಬಂದಿ ಮತ್ತು ಖೈದಿಗಳ ಮಧ್ಯೆ ವಾಗ್ವಾದ ನಡೆದಿದ್ದು, ಗಲಾಟೆ ಮಾಡಿದ ವಿಚಾರಣಾಧೀನ ಖೈದಿಗಳ ಸ್ಥಳಾಂತರಕ್ಕೆ ಕಾರಾಗೃಹವ ಡಿಐಜಿಗೆ ಪತ್ರ ಬರೆಯಲಾಗಿದೆ ಎಂದು ಉ.ಕ.ಜಿಲ್ಲಾ ಎಸ್ಪಿ ದೀಪನ್ ತಿಳಿಸಿದ್ದಾರೆ .ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಂಗಳವಾರ ರಾತ್ರಿ ಮೂವರು ವಿಚಾರಣಾಧೀನ ಖೈದಿಗಳ ಮಧ್ಯೆ ವಾಗ್ವಾದ ನಡೆದಿದೆ. ಯಾವುದೇ ಹಲ್ಲೆ ಘಟನೆ ಆಗಿಲ್ಲ ಎಂದರು. ರಾತ್ರಿ ನಗರಠಾಣೆಗೆ ಜೈಲಿನಿಂದ ಪೋನ್ ಬಂದಿದೆ . ತಕ್ಷಣ ಪೊಲೀಸರು ಧಾವಿಸಿದ್ದಾರೆ. ಗಲಾಟೆ ಮಾಡಿದ ಮೂವರು ಮಂಗಳೂರು ಮೂಲದವರು. ವಾರದ ಹಿಂದೆ ಜೈಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಇಬ್ಬರ ಸಹಚರರು.
ನಿನ್ನೆ ಗಲಾಟೆ ಮಾಡಿದವರಲ್ಲಿ ಇಬ್ಬರ ಮೇಲೆ ಎನ್ ಡಿಪಿಎಸ್ ಮಾಧಕವಸ್ತು ಸೇವನೆ ಕೇಸ್ ಇದೆ. ಒಬ್ಬನ ಮೇಲೆ 307 ಕೇಸ್ ಇದೆ. ಜೈಲಿನಲ್ಲಿ ಸಿಬ್ಬ ಕೊರತೆ ಇದೆ. ಖೈದಿಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಗಲಾಟೆ ಮಾಡುವ ಖೈದಿಗಳ ಸ್ಥಳಾಂತರಕ್ಕೆ ಪತ್ರ ಬರೆಯಲಾಗಿದೆ ಎಂದು ಎಸ್ಪಿ ದೀಪನ್ ವಿವರಿಸಿದರು. ಕಾರಾಗೃಹಕ್ಕೆ ಡಿವೈಎಸ್ಪಿ ಗೀರೀಶ್ ಭೇಟಿ ಕೊಟ್ಟಿದ್ದಾರೆ. ಅಲ್ಲಿ ನಡೆದ ಘಟನೆ ಬಗ್ಗೆ ಪ್ರಕರಣ ದಾಖಲಾಗಲಿದೆ ಎಂದರು. ಈಚೆಗೆ ಮೂರು ತಿಂಗಳ ಹಿಂದೆ ಮಂಗಳೂರು ಜೈಲ್ ನಿಂದ ಗಲಾಟೆ ಮಾಡಿದ ಕಾರಣಕ್ಕೆ ಕಾರವಾರ ಕಾರಾಗೃಹಕ್ಕೆ ಏಳು ಜನ ವಿಚಾರಣಾಧೀನ ಖೈದಿಗಳನ್ನು ಸ್ಥಳಾಂತರಿಸಲಾಗಿತ್ತು ಎಂದು ಎಸ್ಪಿ ದೀಪನ್ ಹೇಳಿದರು. ಆದರೆ ಕಾರವಾರ ಕೇಂದ್ರ ಕಾರಾಗೃಹದಲ್ಲಿ ಸಹ ಗಲಾಟೆ ಮಾಡಿದ ಇವರನ್ನು ಬೇರೆಡೆಗೆ ಸ್ಥಳಾಂತರಿಸುವ ಚಿಂತನೆ ಇದೆ.ಈ ಬಗ್ಗೆ ಕಾರಾಗೃಹ ವಿಭಾಗದ ಡಿಐಜಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 