ಕಾಲುವೆ ಒಡೆದವರ ವಿರುದ್ಧ ಸೂಕ್ತ ಕಾನೂನು ಕ್ರಮ
Appropriate legal action against those who breached the canal
ಕಾಲುವೆ ಒಡೆದವರ ವಿರುದ್ಧ ಸೂಕ್ತ ಕಾನೂನು ಕ್ರಮ
ತಾಂಬಾ 31: ಕಾಲುವೆ ಒಡೆದು ನೀರು ವ್ಯರ್ಥ ಮಾಡುವದು, ಇನ್ನೊಬ್ಬ ರೈತನ ಬೆಳೆ ಹಾನಿಗೆ ಕಾರಣರಾದ ದುರುಳರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ನೀರಾವರಿ ಇಲಾಖೆಯ ಆಲಮೇಲ ವಲಯದ ಕೃುಷ್ಣಾಭಾಗ್ಯ ಜಲ ನಿಗಮದ ಕಾರ್ಯನಿರ್ವಾಹಕ ಅಭಿಯಂತರರಾದ ಎಮ್.ಡಿ.ಪಾರುಕ ಅವರು ಎಚ್ಚರಿಕೆ ನೀಡಿದರು.
42ಡಿಸ್ಟ್ರೀಬೂಟರ್ ಕಾಲುವೆ ಹಾಗೂ ಉಪಕಾಲುವೆಗಳಿಗೆ ದಿಢೀರನೆ ಭೇಟಿ ನೀಡಿ ಮಾತನಾಡಿದ ಅವರು ಅನಗತ್ಯವಾಗಿ ಯಾರಾದರು ಕಾಲುವೆ ಒಡೆದರೆ ಅಂತವರಿಗೆ ಸೂಕ್ತವಾದ ಕಾನೂನು ಕ್ರಮ ಮೂಲಾಜಿಲ್ಲದೆ ಕೈಗೊಳ್ಳಲಾಗುವದು. ಮುಂದಿನ ದಿನಗಳಲ್ಲಿ ಕಾಲುವೆ ಸಿಲ್ಡ್ ತಗೆಯೂವ ವ್ಯವಸ್ಥೆಯನ್ನು ಮಾಡಲಾಗುವದು. 42ಡಿಸ್ಟ್ರೀಬೂಟರ್ ಕಾಲೂವೆಯನ್ನು ರೈತರು ಅಲ್ಲಲ್ಲಿ ಒಡೆದಿದ್ದು ಅದನ್ನು ಪ್ಯಾಚ್ವರ್ಕ ಮಾಡಲಾಗುವದು. ಇನ್ನೂ ಹಲವಾರು ದಿನ ಎಲ್ಲ ಉಪಕಾಲೂವೆಗಳನ್ನು ವಿಕ್ಷೀಸಿ ದುರಸ್ಥಿ ಮಾಡಲಾಗುವದು. ಎಲ್ಲ ರೈತರು ಕಾಲುವೆಗಳಿಗೆ ಹಾನಿ ಮಾಡದೆ ಇದರ ಸದುಪಯೋಗ ಪಡಿಸಿಕೋಳ್ಳಬೇಕು ಇದಕ್ಕೆ ವಿರುದ್ಧವಾಗಿ ನಡೆದರೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ರೈತ ಮುಖಂಡರಾದ ಮಹಾಂತೇಶ ಅಲೇಗಾವಿ, ಮುತ್ತಣ್ಣ ಹದರಿ, ಸಿದ್ದನಗೌಡ ಶಿರಕನಹಳ್ಳಿ ಸೇರಿದಂತೆ ಮತ್ತಿತರರು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 