ಸಾಮೂಹಿಕ ವಿವಾಹ, ಉಪನಯನ ಕಾರ್ಯಕ್ರಮ ಸಮಿತಿಯ ಪದಾಧಿಕಾರಿಗಳ ನೇಮಕ

ಸಾಮೂಹಿಕ ವಿವಾಹ, ಉಪನಯನ ಕಾರ್ಯಕ್ರಮ ಸಮಿತಿಯ ಪದಾಧಿಕಾರಿಗಳ ನೇಮಕ Appointment of Office Bearers of Mass Marriage, Upanayana Program Committee

  

ಸಾಮೂಹಿಕ ವಿವಾಹ, ಉಪನಯನ ಕಾರ್ಯಕ್ರಮ ಸಮಿತಿಯ ಪದಾಧಿಕಾರಿಗಳ ನೇಮಕ 

ಗದಗ 16:- ಅವಳಿ ನಗರವಾದ ಗದಗ ಬೆಟಗೇರಿ ಶಹರದ ಪ್ರತಿಷ್ಠಿತ ಕ್ರಾಂತಿ ಸೇನಾ,  ಶ್ರೀ ಜಗದಂಬಾ ಸೇವಾ ಸಮಿತಿ, ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳ,  ಶ್ರೀ ಬಾಲ ಮಾರುತಿ ಸಮಿತಿ, ಇವುಗಳ ಸಂಯುಕ್ತಾಶ್ರಯದಲ್ಲಿ ಇದೇ  26/11/ 2025 ರಂದು ಜರುಗುವ ಉಚಿತ ಸಾಮೂಹಿಕ ವಿವಾಹ ಹಾಗೂ  ಉಪನಯನ ಕಾರ್ಯಕ್ರಮದ ಅಂಗವಾಗಿ ಗದಗ ನಗರದ ಗಂಗಾಪುರ ಪೇಟೆ  ವ ಖಾನತೋಟ್ ಬಡಾವಣೆಯಲ್ಲಿ ಸತತವಾಗಿ 4ನೇ ವರ್ಷದ  ಸಾಮೂಹಿಕ ವಿವಾಹ ಹಾಗೂ  ಉಪನಯನ ಕಾರ್ಯಕ್ರಮ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. 

ಸಮಿತಿಯ  ಗೌರವಾಧ್ಯಕ್ಷರಾಗಿ ಮಾಧುಸಾ ಹಾದಿಮನಿ, ಅಧ್ಯಕ್ಷರಾಗಿ ಉಮೇಶ್ ಹಬೀಬ್, ಉಪಾಧ್ಯಕ್ಷರಾಗಿ ಹನುಮತಸಾ ಸಿದ್ಲಿಂಗ್, ಗುರು ಬಾಕಳೆ, ಅಕ್ಷತಾ ಪವಾರ್, ಪ್ರಧಾನ ಕಾರ್ಯದರ್ಶಿಗಳಾಗಿ ನಾರಾಯಣ ನಿರಂಜನ,ಸಹ- ಕಾರ್ಯದರ್ಶಿಗಳಾಗಿ ನಾರಾಯಣಸಾ ಖಟವಟೇ, ಗೋದಾವರಿ ಕಬಾಡಿ, ಸಹಕಾರ್ಯದರ್ಶಿ ಶಂಕರಸಾ ಕಲಬುರ್ಗಿ ಸತೀಶ್ ಪೂಜಾರಿ ರಾಜು ಮೆರವಾಡೇ,  ಖಜಾಂಚಿ  ಬಾಬು ಬಾಕಳೆ, ಉಪ ಖಜಾಂಚಿ  ಮಂಜು ಕೆಂದೊಳ್ಳಿ, ಸ್ವಾಗತ ಸಮಿತಿ  ಗುರು ಭಾಂಡಗೆ, ಪ್ರವೀಣ್ ಹಬೀಬ ಇವರುಗಳನ್ನು ಸಮಸ್ತ ಹಿರಿಯರ ಸಮ್ಮುಖದಲ್ಲಿ ಆಯ್ಕೆಮಾಡಲಾಗಿರುತ್ತದೆ.  

ಆಯ್ಕೆಯಾದ ಸಮಸ್ತ ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಹಾಗೂ ಮಾರ್ಗದರ್ಶಕರಾಗಿ ಸಮಾಜದ  ಹಿರಿಯರನ್ನು ಆಯ್ಕೆ  ಮಾಡಲಾಯಿತು ಎಂದು ಪತ್ರಿಕಾ ಪ್ರಕಟಣೆ ಮುಖಾಂತರ  ಸಾಮೂಹಿಕ ವಿವಾಹ ಹಾಗೂ ಉಪನಯನ ಸಮಿತಿಯ ಸಂಸ್ಥಾಪಕರಾದ ಬಾಬು ಬಾಕಳೆ ತಿಳಿಸಿರುತ್ತಾರೆ.