ಅಬ್ದುಲ್ ಕಲಾಂ ವಸತಿ ಶಾಲೆಯ ಸಮಸ್ಯೆಗಳಿಗೆ ಸ್ಪಂದಿಸಲು ಮನವಿ

ಅಬ್ದುಲ್ ಕಲಾಂ ವಸತಿ ಶಾಲೆಯ ಸಮಸ್ಯೆಗಳಿಗೆ ಸ್ಪಂದಿಸಲು ಮನವಿ Appeal to respond to the problems of Abdul Kalam residential school

ಅಬ್ದುಲ್ ಕಲಾಂ ವಸತಿ ಶಾಲೆಯ ಸಮಸ್ಯೆಗಳಿಗೆ ಸ್ಪಂದಿಸಲು ಮನವಿ 

ಬಳ್ಳಾರಿ 30 : ನಗರದ ಹೊರ ವಲಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕೆಂದು ತುಂಗಭದ್ರ ರೈತ ಸಂಘ ಮನವಿ ಮಾಡಿದೆ.ಈ ಶಾಲೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅಲ್ಲದೇ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಮತ್ತು ಅವರ ಕುಟುಂಬ ವರ್ಗಗಳು ಸೇರಿ 700ಕ್ಕೂ ಹೆಚ್ಚು ಜನರಿರುತ್ತಾರೆ. ಈ ವಸತಿ ಶಾಲೆಯು ಸರ್ಕಾರದ ಸ್ವಂತ ಕಟ್ಟಡವಾಗಿದ್ದರೂ ಕನಿಷ್ಠ ಮೂಲಭೂತ ಸೌಲಭ್ಯಗಳಾದ ಸಿಹೀನೀರಿನ ವ್ಯವಸ್ಥೆ ಇರುವುದಿಲ್ಲ, ಬದಲಿಗೆ ಎರಡು ಬೋವೆಲ್ಗಳನ್ನು ಕೊರೆಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಫ್ಲೋರೈಡ್ ಯುಕ್ತವಾಗಿರುತ್ತದೆ.  

ಇದರಿಂದ ವಿದ್ಯಾರ್ಥಿಗಳಿಗೆ ಚರ್ಮರೋಗ ಸಮಸ್ಯೆಗಳು, ತುರಿಕೆ, ಕಜ್ಜಿಯಂತಹ ಅಂಟು ರೋಗಗಳು ಬಂದು ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗಿದೆ.ಅ ಇತರೆ ಮೂಲಭೂತ ಸೌಲಭ್ಯಗಳಾದ ಸಿ.ಸಿ.ಕ್ಯಾಮರಾ ವ್ಯವಸ್ಥೆಯಿರುವುದಿಲ್ಲ, ಯುಪಿಎಸ್‌/ಜನರೇಟರ್, ಸೆಪ್ಟಿಕ್ ಟ್ಯಾಂಕ್, ವಾಟರ್ ಟ್ಯಾಂಕ್, ಡೈನಿಂಗ್ ಹಾಲ್, ಬಿಸೀನೀರಿನ ಸೌಲಭ್ಯಕ್ಕೆ ಸೋಲಾರೀ​‍್ಹಟ್ ಪಂಪ್, ವಿದ್ಯುತ್ ವೈರ್ಗಳು ಹಾಳಾಗಿದ್ದು ಹೊಸ ವೈರಿಂಗ್ ವ್ಯವಸ್ಥೆ, ಸ್ಟ್ರೀಟ್ ಲೈಟ್, ಗ್ರಂಥಾಲಯಕ್ಕೆ ಅವಶ್ಯವಿರುವ ಪುಸ್ತಕಗಳ ಕೊರತೆ, ‘ ಬೋಧಕೇತರ ಸಿಬ್ಬಂಧಿಗಳ ಕೊರತೆ, ಕಂಪ್ಯೂಟರ್ಗಳು ಮತ್ತು ಜಿರಾಕ್ಸ್‌ ಯಂತ್ರಗಳ ಕೊರತೆ ಹೀಗೆ ನಾನಾ ರೀತಿಯ ಸಮಸ್ಯೆಗಳಿದ್ದು, ಇವುಗಳನ್ನು ಪರಿಹರಿಸುವಂತೆ ತುಂಗಭದ್ರಾ ರೈತ ಸಂಘದ ಅಧ್ಯಕ ದರೂರು ಪುರುಷೋತ್ತಮಗೌಡ ಮೊದಲಾದವರು ಮನವಿ ಮಾಡಿದ್ದಾರೆ.