ಬಸವನ ಕುಡಚಿಯ ಮಹಾಲಕ್ಷ್ಮೀ ನಗರಕ್ಕೆ ಮೂಲ ಸೌಲಭ್ಯ ಕಲ್ಪಿಸಿಕೊಡುವಂತೆ ಶಾಸಕರಿಗೆ ಮನವಿ

ಬಸವನ ಕುಡಚಿಯ ಮಹಾಲಕ್ಷ್ಮೀ ನಗರಕ್ಕೆ ಮೂಲ ಸೌಲಭ್ಯ ಕಲ್ಪಿಸಿಕೊಡುವಂತೆ ಶಾಸಕರಿಗೆ ಮನವಿ Appeal to MLAs to provide basic facilities to Mahalakshmi Nagar, Basavanagudi

ಬೆಳಗಾವಿ 02 :  ಮಹಾನಗರ ಪಾಲಿಕೆಯ ವ್ಯಾಪ್ತಿಯ ಬಸವನ ಕುಡಚಿ ಮಹಾಲಕ್ಷ್ಮೀ ನಗರ  ಹಲವಾರು ವರ್ಷಗಳಿಂದ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಕೂಡಲೇ ಅಲ್ಲಿ ಮೂಲ ಸೌಲಭ್ಯ ಕಲ್ಪಿಸಿಕೊಡುವಂತೆ ಆಗ್ರಹಿಸಿ  ನಗರದ ನಿವಾಸಿಗಳು ಶಾಸಕ ರಾಜು (ಆಫೀಸ್ ) ಸೇಠ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಮಹಾಲಕ್ಷ್ಮೀ ನಗರದಲ್ಲಿರುವ ರಹವಾಸಿಗಳು ಶಾಸಕರ ಕಚೇರಿಗೆ ಭೇಟಿ ನೀಡಿ, ಮನವಿ ಮಾಡಿಕೊಂಡರು. ಈ ನಗರವೂ ಪಾಲಿಕೆಯ ವ್ಯಾಪ್ತಿಯಲ್ಲಿದೆ. ಸುಮಾರು 10 ವರ್ಷಗಳಿಂದ ಇಲ್ಲಿ ನೆಲೆಸಿದ್ದೆವೆ. ಮಹಾಲಕ್ಷ್ಮೀನಗರಕ್ಕೆ ಯಾವುದೇ ಸೌಲಭ್ಯ ದೊರೆತಿಲ್ಲ.

ಇಲ್ಲಿನ ರಸ್ತೆಗಳು ತುಂಬಾ ಹದಗೆಟ್ಟುಹೋಗಿದ್ದು, ಚರಂಡಿ ಸಹ ಹಾಳಾಗಿವೆ. ಇದರಿಂದ ಮಳೆ ಬಂದಾಗ ಚರಂಡಿ ನೀರು ರಸ್ತೆಯ ಮೇಲೆಲ್ಲೆ ಹರಿದು ಜನ ಓಡಾಡುವದು ದುಸ್ತರವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೂಡಲೇ ಚರಂಡಿ ಹಾಗೂ ರಸ್ತೆ ದುರಸ್ತಿ ಮಾಡಿಸಬೇಕು. ಬೀದಿ ದೀಪಗಳ ಕೊರತೆ, ನದಿ ನೀರು ಈ ಭಾಗಕ್ಕೆ ಸರಿಯಾಗಿ ತಲುಪುತ್ತಿಲ್ಲ ಇದರಿಂದ ನಗರ ಜನರಿಗೆ ನೀರಿನ ತೊಂದರೆ ಉಂಟಾಗುತ್ತಿದ್ದು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.  ಮಹಿಳೆಯರು, ವಯಸ್ಕರರು ದಿವ್ಯಾಂಗರು ಮತ್ತು ಕೂಲಿಕಾರರು ಮಧ್ಯಮ ವರ್ಗದ ಕುಟಂಬದವರು ವಾಸವಾಗಿದ್ದೆವೆ.

ಶಾಸಕರು ಈ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.24ಥ7 ಶುದ್ಧ ಕುಡಿಯವ ನೀರು ಪೂರೈಕೆ ಮಾಡಬೇಕು.  ಮಹಾಲಕ್ಷ್ಮೀ ನಗರದಿಂದ ಬೆಳಗಾವಿ ನಗರಕ್ಕೆ  ಸಂಚರಿಸಲು  ಸುಸಜ್ಜಿತವಾದ ರಸ್ತೆ ನಿರ್ಮಾಣ ಮಾಡಬೇಕು. ಮಹಾಲಕ್ಷ್ಮೀ ನಗರದಲ್ಲಿ ವ್ಯಾಪ್ತಿಯಲ್ಲಿ  ಗ್ರಾಮಸ್ಥರು ಶವಸಂಸ್ಕಾರ/ಶವದಹನವನ್ನು ಮಾಡುತ್ತಾರೆ.  ಇದರಿಂದಾಗಿ ಇಲ್ಲಿನ ಶುದ್ಧವಾದ ವಾತಾವರಣ ಕಲುಷಿತಗೊಳ್ಳುತ್ತಿದೆ. ಇದರಿಂದ ಆರೋಗ್ಯದ ಮೇಲೆ ವೃತ್ತಿರಿಕ್ತ ಪರಿಣಾಮ ಉಂಟಾಗುತ್ತಿದ್ದು, ಆದ್ದರಿಂದ ಶವಸಂಸ್ಕಾರ/ಶವದಹನ ಪ್ರದೇಶ ಬೇರೆ ಕಡೆ ಸ್ಥಳಾಂತರಿಸಬೇಕು ಕಳವಳ ವ್ಯಕ್ತಪಡಿಸಿದರು.

ನಿವಾಸಿಗಳ ಹಿತದೃಷ್ಟಿಯಿಂದ ಪ್ರಾಥಮಿಕ ಆರೋಗ್ಯಕೇಂದ್ರ ಸ್ಥಾಪಿಸಬೇಕು. ಇಲ್ಲಿ ಸುಂದರವಾದ ಹೂತೋಟದ ( ವಾಯುವಿಹಾರ ) ನಿರ್ಮಾಣ ಮಾಡಬೇಕಿದೆ.  ಜತೆಗೆ ಬಸವನ ಕುಡಚಿ, ಏಊಃ ಅಠಠಥಿ, ಅಲಾರವಾಡ ನಡುವೆ ಒಂದು ಪೋಲಿಸ ಚೌಕಿ ಸ್ಥಾಪಿಸಬೇಕು.  ಎಲ್ಲಾ ವರ್ಗದ ಜನರ ಅನುಕೂಲಕ್ಕಾಗಿ ಒಂದು ಸಮುದಾಯ ಭವನ ಕಟ್ಟಡ ನಿರ್ಮಾಣ ಮಾಡಬೇಕು. ಮೇಲಾಗಿ ಶೀಘ್ರವೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ  ಬಸವನ ಕುಡಚಿಯ ಮಹಾಲಕ್ಷ್ಮೀ ನಗರದ ನಿವಾಸಿಗಳು ಇತರರು ಇದ್ದರು.