2ನೇ ಹಂತದ ಅನಿರ್ಧಿಷ್ಠ ಮುಷ್ಕರಕ್ಕೆ ಕರೆ ನೀಡಿ ತಹಶೀಲ್ದಾರ ಮೂಲಕ ಮಾನ್ಯ ಕಂದಾಯ ಸಚಿವರಿಗೆ ಮನವಿ
ಬೀಳಗಿ 10 : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವೃಂದವು ಸೋಮವಾರ ತಾಲೂಕಾ ಆಡಳಿತದ ಆವರಣದಲ್ಲಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಈ ಹಿಂದೆ ಮುಷ್ಕರ ಮಾಡಿದಾಗ ಸರಕಾರ ನಮ್ಮ ಬೇಡಿಕೆ ಇಡೇರಿಸುವುದಾಗಿ ಭರವಸೆ ನೀಡಿತ್ತು. ಅವುಗಳನ್ನು ಇದುವರೆಗೆ ಈಡೇರಿಸದ ಕಾರಣ ರಾಜ್ಯವ್ಯಾಪಿ 2ನೇ ಹಂತದ ಅನಿರ್ಧಿಷ್ಠ ಮುಷ್ಕರಕ್ಕೆ ಕರೆ ನೀಡಿ ತಹಶೀಲ್ದಾರ ಮೂಲಕ ಮಾನ್ಯ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿ ಅನಿರ್ಧಿಷ್ಠ ಮುಷ್ಕರ ಮಾಡಲಾಗುತ್ತಿದೆ. ತಾಲೂಕಾ ತಲಾಟಿಗಳ ಸಂಘದ ಅಧ್ಯಕ್ಷ ವಿಶಾಲ ಹಾಸಲಕರ್ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ಸೆ.22.2024 ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಭಾ ಭವನ. ಚಿತ್ರದುರ್ಗದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು, ಹಾಗೂ ಸರ್ವ ಸದಸ್ಯರ ಒಪ್ಪಿಗೆಯಂತೆ ಸರ್ವಾನುಮತದಿಂದ ಸೆ.26 ರಿಂದ ಅ.03.2024 ರವರೆಗೆ ರಾಜ್ಯಾದ್ಯಂತ ಮುಷ್ಕರ ನಡೆಸಿದ ಕಾರಣ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಭರವಸೆ ನೀಡಿದ್ದರು. ಅದರಂತೆ ಸದರಿ ದಿನದಿಂದಲೇ ರಾಜ್ಯವ್ಯಾಪಿ ಮುಷ್ಕರವನ್ನು ಹಿಂಪಡೆಯಲಾಗಿತ್ತು. ತದನಂತರ ಸರಕಾರವು ಈ ವೃಂದದ ನೌಕರರ ಬೇಡಿಕೆಗಳ ವಿಚಾರವಾಗಿ ಯಾವುದೇ ತೃಪ್ತಿಕರ ಕ್ರಮಗಳನ್ನು ಕೈಗೊಂಡಿಲ್ಲ, ಬೇಡಿಕೆಗಳನ್ನು ಈಡೇರಿಸಿಲ್ಲ. ಬದಲಾಗಿ ಮುಷ್ಕರದ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿದೆ. ಮುಷ್ಕರದ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿಗೆ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲು ತೀರ್ಮಾನಿಸಿದ್ದೇವೆ. ಈ ಮುಷ್ಕರಕ್ಕೆ ತಾಲೂಕಾ ಕಂದಾಯ ಇಲಾಖೆ ನೌಕರರ ಸಂಘವು ಬೆಂಬಲ ಸೂಚಿಸಿದೆ. ಎಂದರು. ತಾಲೂಕಾ ತಲಾಟಿಗಳ ಸಂಘದ ಉಪಾಧ್ಯಕ್ಷ ಶಿವಕುಮಾರ್ ಶಿರೋಳ, ಕಾರ್ಯದರ್ಶಿ ಶ್ರೀಶೈಲ್ ನೀವರಗಿ, ಶಪಿ ಮಾಲಿನಮನಿ, ಯಾಸಿನ್ ನೀರಲಗಿ, ರವಿ ಕುಲಕರ್ಣಿ, ರೇಣುಕಾ ಕದಾಂಪೂರ್, ಪುಷ್ಪಾ ಹಿರೇಮಠ, ಸ್ಮೀತಾ ಸೊರಗಾಂವಿ, ರಾಹುಲ್ ಕಲಾದಗಿ, ಅಸಲಾಂ ಇಂಡಿಕರ್ ಇತರರು ಇದ್ದರು.