ಮುಂಬೈ, ಮೇ 8 ಬಾಲಿವುಡ್ ನಿರ್ದೇಶಕ ಅನುರಾಗ ಬಾಸು ಅವರು ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ ಅಭಿನಯದ ಚಿತ್ರ ನಿಮರ್ಿಸಲು ಉತ್ಸುಕರಾಗಿದ್ದಾರೆ. ಅನುರಾಗ್ ಬಾಸು ಅವರು 2007ರಲ್ಲಿ ತೆರೆಕಂಡಿದ್ದ "ಲೈಫ್ ಇನ್ ಎ ಮೆಟ್ರೊ" ಚಿತ್ರದ ಎರಡನೇ ಭಾಗ ಮಾಡಲು ಮುಂದಾಗಿದ್ದಾರೆ. ಇದರ ಜೊತೆಗೆ ಇನ್ನೊಂದು ಚಿತ್ರ ನಿಮರ್ಿಸಲು ಅನುರಾಗ್ ಸಿದ್ಧತೆ ನಡೆಸಿದ್ದಾರೆ. ಚಿತ್ರದ ಶೀರ್ಷಿಕೆ "ಇಮಲಿ" ಇದ್ದು, ಮೊದಲು ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಕಂಗನಾ ಈ ಚಿತ್ರದಿಂದ ದೂರ ಉಳಿದಿದ್ದು, ನಿದರ್ೆಶಕ ಅನುರಾಗ್ ಬಾಸು ಅವರು ಪ್ರಮುಖ ಅಭಿನೇತ್ರಿಯ ಶೋಧದಲ್ಲಿದ್ದಾರೆ. ಈ ಚಿತ್ರದಲ್ಲಿ ಡಿಂಪಲ್ ಗಲರ್್ ದೀಪಿಕಾ ಪಡುಕೋಣೆ ಅಭಿನಯಿಸುವ ಸಾಧ್ಯತೆ ಇದೆ.
ಇತ್ತೀಚಿಗಷ್ಟೆ ಅನುರಾಗ್ ಅವರು ದೀಪಿಕಾ ಅವರನ್ನು ಸಂಪಕರ್ಿಸಿ ಈ ಕುರಿತು ಮಾತನಾಡಿದ್ದಾರೆ. ದೀಪಿಕಾ ಇದಕ್ಕೆ ಒಪ್ಪಿಗೆ ನೀಡುವ ಸೂಚನೆ ನೀಡಿದ್ದಾರೆ. ಆದರೆ, ಅನುರಾಗ್ ಇದನ್ನು ದೃಢಪಡಿಸಿಲ್ಲ. ಸದ್ಯ, ದೀಪಿಕಾ ತಮ್ಮ "ಛಪಾಕ್" ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ.