ಜಂತ್ಲಿ ಶಿರೂರ ಗ್ರಾಮದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ
Anti-Dengue Month Celebration in Jantli Shiroor Village
ಜಂತ್ಲಿ ಶಿರೂರ ಗ್ರಾಮದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ
ಗದಗ 02 : ಜು.31ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಜಂತಲಿ ಶಿರೂರ ಗ್ರಾಮದಲ್ಲಿ ಡೆಂಗ್ಯೂ ವಿರೋದಿ ಮಾಸಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯ್ತಿ0ು ಉಪಾಧ್ಯಕ್ಷರಾದ ರವಿ ದೊಡ್ಡಮನಿ ಮಾತನಾಡಿ, ಡೆಂಗ್ಯೂ ರೋಗವು ಪ್ರಸಕ್ತ ದಿನಮಾನದಲ್ಲಿ ಗಂಭೀರ ರೋಗವಾಗಿ ಪರಿಣಮಿಸಿದೆ, ಇದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಮೂಲಕಜನರಿಗೆ ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಮಾತ್ರ ಡೆಂಗ್ಯೂ ನಿಯಂತ್ರಿಸಲು ಸಾಧ್ಯ ಎಂದರು.
ಆರೋಗ್ಯ ನೀರೀಕ್ಷಣಾಧಿಕಾರಿ ಮಲ್ಲಿಕಾರ್ಜುನ. ಎಫ್. ಕಲಕಂಬಿ ಮಾತನಾಡಿ ನೀರಿನ ತಾಣಗಳನ್ನು ಪರೀಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ ಎಂಬ ಘೋಷವಾಕ್ಯದೊಂದಿಗೆ ಈ ಸಾಂಕ್ರಾಮಿಕ ರೋಗವನ್ನು ಎಲ್ಲರೂ ಸೇರಿ ನಿಯಂತ್ರಿಸೋಣ, ಡೆಂಗ್ಯೂ ರೋಗವು, ಈಡೀಸ್ ಈಜಿಪ್ಟೈ ಎಂಬ ಹಗಲು ಹೊತ್ತಿನಲಿ ್ಲಕಚ್ಚುವ ಸೊಳ್ಳೆಯಿಂದ ಹರಡುತ್ತದೆ ಎಂದರು. ಶಾಲಾ ಶಿಕ್ಷಕರೂ ಸಹ ಶಾಲೆಯ ಆವರಣದಲ್ಲಿ ಬಿದ್ದಿರುವ ಘನತ್ಯಾಜ್ಯಗಳನ್ನು ಗ್ರಾ.ಪಂ. ಯಗಮನಕ್ಕೆ ತಂದು ಘನತ್ಯಾಜ್ಯಗಳ ವಿಲೇವಾರಿಮಾಡಿಸಬೆಕು ಮತ್ತು ಶಾಲಾ ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಗೆ ಡೆಂಗ್ಯೂ ಕುರಿತು ಮುಂಜಾಗ್ರತಾ ಕ್ರಮಗಳನ್ನು ತಿಳಿಸಬೇಕು ಎಂದರು. .
ಕಾರ್ಯಕ್ರಮದಲ್ಲಿ ಜಂತಲಿಶಿರೂರ ಗ್ರಾಮಪಂಚಾಯ್ತಿಯ ಅಧ್ಯಕ್ಷರಾದ ಜೈತುನ ಬಿಬಳ್ಳಾರಿಯವರು, ಗ್ರಾ.ಪಂ.ಯ ಸದಸ್ಯರಾದ ಯಲ್ಲಪ್ಪಹೊಂಬಳರವರು, ಶಾಲಾ ಶಿಕ್ಷಕರಾದ ಎಸ್. ಎಮ್. ಮರಿಗೌಡರವರು, ಶ್ರೀಕಾಂತ ಗೌರಿಪುರವರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾದ ಮಮ್ತಾಜ್ ಚಿಂತಗುಂಟಿಯವರು,ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯ್ತಿಯ ನೀರು ಸರಬರಾಜು ಮಾಡುವವರು, ಆಶಾ ಕಾರ್ಯಕರ್ತೆಯರು, ಗ್ರಾಮದ ಗುರುಹಿರಿ0ುರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 