ವಿಜಯಪುರದ ಕೇಂದ್ರೀಯ ವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟ ವಿದ್ಯಾರ್ಥಿಗಳು ಆಟೋಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು- ಟಿ.ಭೂಬಾಲನ್
ವಿಜಯಪುರ 18: ನಗರದ ಟಕ್ಕೆ ರಸ್ತೆಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಬುಧವಾರ ರಂದು ನಡೆದ ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಕ್ರೀಡಾ ಚಟುವಟಿಕೆಗಳ ಅತಿ ಮಹತ್ವವಾಗಿದೆ. ಶಾರೀರಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದು ಅತೀ ಅವಶ್ಯವಾಗಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೆಕು ಎಂದು ಹೇಳಿದರು. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಸಾಮೂಹಿಕ ಕವಾಯತನ್ನು ವೀಕ್ಷಕಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ಹಾಗೂ ಪಾಲಕರು ಭಾಗವಹಿಸಿ ಶಾಲಾ ಕ್ರೀಡಾಂಗಣದಲ್ಲಿ ಕ್ರೀಡಾ ಹಬ್ಬವನ್ನು ಆಚರಿಸಿದರು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತ ಮಕ್ಕಳಿಗೆ ಜಿಲ್ಲಾಧಿಕಾರಿಗಳು ಬಹುಮಾನ ವಿತರಿಸಿದರು.
ಶಾಲೆಯ ಇಂಗ್ಲೀಷ್ ವಿಷಯ ಶಿಕ್ಷಕರಾದ ಅನಿತಾ ಜೋಸೆಫ್ ನಿರೂಪಿಸಿದರು. ಹಿರಿಯ ಉಪನ್ಯಾಸಕರಾದ ಶ್ರೀಮತಿ ಅನಾಮಿಕ ಕುಮಾರಿ ವಂದಿಸಿದರು. ಸಿಮ್ರಾನ್ ಕ್ರೀಡಾ ವರದಿ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಅಂಚೆ ಇಲಾಖೆಯ ಜಿಲ್ಲಾ ಅಧೀಕ್ಷಕರಾದ ಕುಮಾರಸ್ವಾಮಿ, ಶಾಲೆಯ ಪ್ರಾಚಾರ್ಯರಾದ ಜುನ್ನಾ ರಾಮ, ಶಾಲಾ ಶಿಕ್ಷಕರಾದ ಶ್ರೀಮತಿ ಸೀಮಾ, ಶಂಕರ ಶಾಸ್ತ್ರೀ, ಸೌರಭ, ರಮೇಶ ಚವಾಣ, ಶ್ರೀಮತಿ ಸುವರ್ಣಾ ಸೀಳಿನ್, ಸಾಯಿತೇಜಸ್ವಿನಿ, ದಾದಾಸೋ, ವಿಠ್ಠಲ ಚಟ್ಟರಕಿ, ಸಂತೋಷ್ ಹಲವಾಯಿ ಹಾಗೂ ಸೋಮೇಶ್ ಅಲಗುಂಡಗಿ ಉಪಸ್ಥಿತರಿದ್ದರು.