ಭರತೇಶ ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟ

Annual sports event at Bharatesh Mahavidyalaya

ಭರತೇಶ ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟ  

ಬೆಳಗಾವಿ 28: ಇಲ್ಲಿಯ ಭರತೇಶ ಪಿಯು  ಕಾಲೇಜು ಮತ್ತು ಭರತೇಶ ವಾಣಿಜ್ಯ ಮಹಾವಿದ್ಯಾಲಯದ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟಗಳು ಇತ್ತಿಚಿಗೆ ನಡೆದವು. 

ಈ ಕ್ರೀಡಾಕೂಟವನ್ನು ಬೆಳಗಾವಿ ವಿಭಾಗದ ಜುಡೋ ತರಬೇತಿದಾರ ರೋಹಿಣಿ ಪಾಟೀಲ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಯಲ್ಲಿ ಕ್ರೀಡಯಲ್ಲಿ ಭಾಗವಹಿಸಬೇಕು. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢತೆ ಸಿಗುತ್ತದೆ. ಹಾಗಾಗಿ ಎಲ್ಲರೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಅವರು ತಿಳಿಸಿದರು. ಈ ಎರಡು ದಿನಗಳ ಕ್ರೀಡಾಕೂಟದಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ್ದರು.  

ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಹೀರಾಚಂದ ಕಲಮನಿ, ಸ್ವಾತಿ ಉಪಾಧ್ಯೆ, ಶಾಲಿನಿ ಚೌಗುಲೆ, ಪ್ರಾಚಾರ್ಯ ಸುನಿತಾ ದೇಶಪಾಂಡೆ  ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಅರ್ಚನಾ ನಾಲಬಂದ ನಿರೂಪಿಸಿ, ವಂದಿಸಿದರು.