ಅಂಜುಟಗಿ: ದುಡಿಯೋಣ ಬಾ ಅಭಿಯಾನ ಜಾಗೃತಿ
ಇಂಡಿ 27: ತಾಲೂಕಿನ ಅಂಜುಟಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಶು ಪಾಲನಾ ಕೇಂದ್ರದಲ್ಲಿ ದುಡಿಯೋಣ ಬಾ ಅಭಿಯಾನಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಚಾಲನೆ ನೀಡಿದರು.
ತಾಲೂಕ ಪಂಚಾಯತ ಇಂಡಿ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮದಡಿ ಐಇಸಿ ಸಂಯೋಜಕರು ಮಾತನಾಡಿ ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಉದ್ಯೋಗ ಗ್ರಾಮ ಪಂಚಾಯಿತಿ ವತಿಯಿಂದ ಒದಗಿಸಲಾಗುತ್ತಿದ್ದು, ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕೆಲಸದ ಬೇಡಿಕೆ ಸಲ್ಲಿಸಬೇಕು. ಹಾಗೂ ಜಾಬ್ ಕಾರ್ಡ್‌ಗಳನ್ನು ಆಕ್ಟಿವ್ ಇದ್ದ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ನಿಮ್ಮೂರಲ್ಲೇ ಉದ್ಯೋಗ ಚೀಟಿ ಹೊಂದಿದವರು 100 ದಿನ ಕೂಲಿ ಕೆಲಸ ಪಡೆಯಬಹುದಾಗಿದೆ. ಹಾಗೂ ಪುರುಷರಿಗೆ ಹಾಗೂ ಮಹಿಳೆಯರಿಗೆ ದಿನಕ್ಕೆ 349 ರೂಪಾಯಿ ಸಮಾನ ಕೂಲಿ ನೀಡಲಾಗುವುದು ಎಂದು ತಿಳಿಸಿದರು.
6 ತಿಂಗಳಿಂದ 3 ವರ್ಷದ ಒಳಗಿನ ಮಕ್ಕಳ ಆರೈಕೆಗೆ ಕೂಸಿನ ಮನೆ ತೆರೆಯಲಾಗಿದ್ದು ಎಲ್ಲ ಕೂಲಿಕಾರರು ಇದರ ಪ್ರಯೋಜನ ಪಡೆಯಲು ತಿಳಿಸಲಾಯಿತು. ಹಾಗೂ ಕೂಸಿನ ಮನೆಯಲ್ಲಿ ಮಕ್ಕಳ ಆರೈಕೆ ಕುರಿತು ಹಾಗೂ ಹಿರಿಯ ಕೂಲಿಕಾರರಿಗೆ ಕಾಮಗಾರಿ ಸ್ಥಳದಲ್ಲಿ ಸಿಗುವ ಸೌಲಭ್ಯ ಗಳ ಬಗ್ಗೆ ಮಾಹಿತಿ ನೀಡಲಾಯಿತು. ನಮೂನೆ 6 ನೀಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ತಿಳಿಸಲಾಯಿತು.
24 ಜನ ಕೂಲಿಕಾರರು ಕೆಲಸದ ಬೇಡಿಕೆ ಸಲ್ಲಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು, ನರೇಗಾ ಕೂಲಿಕಾರರು, ಬಿ ಎಪ್ ಟಿ ಸೈಯದ್, ಗ್ರಾಮ ಕಾಯಕ ಮಿತ್ರರು ಸೋನಾಲಿ ಬ, ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಹಾಜರಿದ್ದರು.