ಕಾಲು ಬಾಯಿ ರೋಗ ತಡೆಗೆ ಪಶುಲಸಿಕಾ ಅಭಿಯಾನ ಆರಂಭ
Animal vaccination campaign begins to prevent foot-and-mouth disease
ಹನುಮಸಾಗರ 03: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ (ಓಂಆಅಕ) ಅಡಿ 9ನೇ ಹಂತದ ಕಾಲು ಬಾಯಿ ರೋಗ (ಈಒಆ) ಲಸಿಕಾ ಅಭಿಯಾನವು ನವೆಂಬರ್ 3ರಿಂದ ಡಿಸೆಂಬರ್ 2ರವರೆಗೆ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಜಾನುವಾರು ಅಧಿಕಾರಿ ಎಮ್ ಜಿ ಹೊಳೆಆಲೂರ ತಿಳಿಸಿದರು.ಹನುಮಸಾಗರದ ಪಶು ಕೇಂದ್ರದ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕ ಅಭಿಯಾನದಲ್ಲಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದಂತಹ ರುದ್ರಗೌಡ ಗೌಡಪ್ಪನವರು ಉದ್ಘಾಟಿಸಿದರು. ರಾಜ್ಯ ಸರ್ಕಾರದ ಆಶ್ರಯದಲ್ಲಿ ನಡೆಯುತ್ತಿರುವ ಈ ಅಭಿಯಾನವು ಪಶುಗಳ ಆರೋಗ್ಯ ಕಾಪಾಡಿ, ಹಾಲು ಉತ್ಪಾದಕರ ಹಾಗೂ ರೈತರ ಆರ್ಥಿಕ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶ ಹೊಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಮತ್ತು ಪಶುಪಾಲನಾ ಸಚಿವ ಕೆ. ವೆಂಕಟೇಶ್ ಅವರ ಆಶ್ರಯದಲ್ಲಿ ಈ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ ಎಂದು ಜಾನುವಾರು ಅಧಿಕಾರಿ ಎಮ್ ಜಿ ಹೊಳೆಆಲೂರ ತಿಳಿಸಿದರು.
ಅಭಿಯಾನದ ಅವಧಿಯಲ್ಲಿ ಜಿಲ್ಲೆಯಾದ್ಯಂತ ಹಸು, ಎಮ್ಮೆ, ಕುರಿ, ಮೇಕೆ ಮುಂತಾದ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು. ರೈತರು ಹಾಗೂ ಪಶುಪಾಲಕರು ತಮ್ಮ ಹತ್ತಿರದ ಪಶುವೈದ್ಯಕೀಯ ಆಸ್ಪತ್ರೆ, ಪಶು ಚಿಕಿತ್ಸಾ ಕೇಂದ್ರ ಅಥವಾ ಪಶು ಸಹಾಯಕ ಕೇಂದ್ರಗಳಿಗೆ ಸಂಪರ್ಕಿಸಿ ಲಸಿಕೆ ಪಡೆಯಬಹುದು.ಪಶುಗಳಲ್ಲಿ ಕಾಲು ಬಾಯಿ ರೋಗ ತಡೆಗಟ್ಟಲು ಈ ಲಸಿಕೆ ಅತ್ಯಂತ ಪರಿಣಾಮಕಾರಿ ಎಂದು ಇಲಾಖೆಯು ತಿಳಿಸಿದೆ. ರೋಗದಿಂದ ಉಂಟಾಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಮತ್ತು ಹಾಲು ಉತ್ಪಾದನೆಯಲ್ಲಿ ಏರಿಕೆ ತರಲು ಲಸಿಕೆ ಸಹಕಾರಿಯಾಗುತ್ತದೆ. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ರೈತ ಸಂಘ ಘಟಕ ಅಧ್ಯಕ್ಷ ಯಮನೂರ್ಪ ಮಡಿವಾಳರ, ಪಶುವೈದ್ಯ ಪರೀಕ್ಷಕರಾದ ದಂಡಪ್ಪ ಜಾನುವಾರು ಅಧಿಕಾರಿ ಎಮ್ ಜಿ ಹೊಳೆಆಲೂರ ಸಿಬ್ಬಂದಿ ಫೀರಸಾಬ ಹೊಸಮನಿ , ಬೈಫ್ ಸಿಬ್ಬಂದಿ ಮಂಜುನಾಥ ಮಾಳಶೆಟ್ಟಿ, ರೈತರಾದ ಬಸವರಾಜ ಮೊಟಗಿ, ಯಮನಪ್ಪ ಕಬ್ಬರಗಿ, ರಮೇಶ ತಳ್ಳಿಕೇರಿ, ಶಿವುಕುಮಾರ ಚಿನಿವಾಲರ, ಮುತ್ತಣ್ಣ ಹಲಕೂಲಿ, ಯಮನಪ್ಪ ಗಡೇಕಾರ, ಮೈಬೂಬಸಾಬ ಕುಷ್ಟಗಿ, ಪಶು ಸಖಿಯರಾದ ಲಕ್ಷ್ಮೀ ಬಡಿಗೇರ, ದೀಪಾ ಸೂಡಿ ಸೇರಿದಂತೆ ಪ್ರಮುಖ ರೈತರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 