ಶತಮಾನ ಪೂರೈಸಿರುವ ಅನಂತಪೂರ ಶಾಲೆ ಅಭಿವೃದ್ಧಿಯಾಗಲಿ

ಸಂಬರಗಿ 26: ದೇಶ ಸ್ವತಂತ್ರ ಆಗುವದಕ್ಕಿಂತ ಮುಂಚಿತವಾಗಿ ಗಡಿ ಗ್ರಾಮದ ಅನಂತಪೂರ ಗ್ರಾಮದಲ್ಲಿ ಕನ್ನಡ ಪ್ರಾಥಮಿಕ ಶಾಲೆ ಸ್ಥಾಪನೆಯಾಗಿ ಈ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾಥರ್ಿಗಳು ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಪ್ರತಿ ವರ್ಷ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು ಆದರೆ  ಇಲ್ಲಿ ಅವಶ್ಯಕತೆ ಇರುವ ಸೌಲಭ್ಯದ ಕೊರತೆ ಇದೆ. ಈ ಶಾಲೆಯು ಯಾವಾಗ ಸ್ಥಾಪನೆಯಾಗಿದೆ ಎಂಬುದು ಪ್ರಶ್ನೆಯಾಗಿದೆ.

ಬ್ರಿಟಿಷ್ ಸರಕಾರದ ಅಧಿಕಾರವಿದ್ದಾಗ ಈ ಗ್ರಾಮಕ್ಕೆ ಮಾಧವರಾವ ಆನಂದರಾವ ರಾಸ್ತೆ ಸರಕಾರ ಅಧಿಪತ್ಯದಲ್ಲಿ ಸುತ್ತ-ಮುತ್ತಲಿನ ಗ್ರಾಮಗಳ ಆಡಳಿತ ನಡೆಯುತ್ತಿತ್ತು. 1896 ರಲ್ಲಿ ಈ ಗ್ರಾಮದ ಜನಸಂಖ್ಯೆ ನೋಡಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯು ಪ್ರಾರಂಭವಾಯಿತು. ಅಂದಿನ ಕಾಲದಲ್ಲಿ ಸುಮಾರಾಗಿ 200 ಮಕ್ಕಳ ಸಂಖ್ಯೆ ಇತ್ತು ಆ ಹೊತ್ತಿಗೆ ಎಲ್ಲಾ ಸೌಲಭ್ಯವನ್ನು ಆಗಿನ ಸಂಸ್ಥಾನಿಕಗಳು ನೀಡುತ್ತಿದ್ದರು. ಆದರೆ ಈಗೀನ ಸಮಯದಲ್ಲಿ ಶಾಲೆಯ ನಾಮ ಫಲಕದಲ್ಲಿ ಶಾಲೆಯ ಸ್ಥಾಪನೆಯ ವರ್ಷ ಕಾಣುತ್ತಿಲ್ಲ. ಆದರೆ 132 ವರ್ಷ ಆಗಿರುವ ಶಾಲೆಗಳಿಗೆ ಇನ್ನೂ ಸಮಸ್ಯೆ ಹೆಚ್ಚಾಗುತ್ತಿದೆ. ಸರಕಾರ ನಿಯಮದ ಪ್ರಕಾರ ಗ್ಪಡಿಭಾಗದ ಕನ್ನಡ ಶಾಲೆಗಳಿಗೆ 35 ಮಕ್ಕಳ ಸಂಖ್ಯೆ ಇದೆ. ಒಬ್ಬ ಶಿಕ್ಷಕ ಸಧ್ಯದಲ್ಲಿ ಈ ಶಾಲೆಗೆ 307 ಮಕ್ಕಳ ಸಂಖ್ಯೆ ಇದ್ದು 9 ಶಿಕ್ಷಕರಿದ್ದಾರೆ. ಅದರಲ್ಲಿ 1 ಮುಖ್ಯಾಧ್ಯಾಪಕರು ಇನ್ನೂಳಿದ ಶಿಕ್ಷಕರು 1 ರಿಂದ 7 ನೇ ತರಗತಿವರಗೆ ಪಾಠ ಮಾಡುತ್ತಿದ್ದಾರೆ. ಇಲ್ಲಿನ ಕೋಣೆಗಳ ಸಂಖ್ಯೆ 11 ಇದ್ದು ಅದರಲ್ಲಿ 5 ಕೋಣೆಗಳು ನೂರು ವರ್ಷದ ಬ್ರಿಟಿಷ್ ಕಾಲದ ಹಳೆಯ ಕೋಣೆಗಳಿವೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪರಿಶೀಲನೆ ಮಾಡಿದರೆ  ಇನ್ನೂ 2 ಕೋಣೆಗಳ ಅವಶ್ಯಕತೆ ಇದ್ದು, ಇನ್ನೂ 5 ತರಗತಿ ಕೋಣೆಗಳು ಹಳೆಯದಾಗಿವೆ. ಗಡಿ ಭಾಗದಲ್ಲಿನ ಕನ್ನಡ ಶಾಲೆಯ ಸಮಸ್ಯೆಗಳನ್ನು ಶೀಘ್ರದಲ್ಲಿ ಪಯರ್ಾಯಗೊಳಿಸಬೇಕೆಂದು ಆದೇಶ ಮಾಡಿದೆ. 132ವರ್ಷ ಈ ಶಾಲೆಗೆ ಆದರೂ ಸಹ ಪಯರ್ಾಯಗೊಳಿಸಿಲ್ಲ. 

ರಾಜ್ಯ ಸರಕಾರ ಪ್ರತಿ ಶಾಲೆಗೆ ಶೌಚಾಲಯ ಕಡ್ಡಾಯ ಮಾಡಿದೆ. ಈ ಶಾಲೆಯ ಶೌಚಾಲಯ ಹಾಳಾಗಿ ಹತ್ತು ವರ್ಷ ಆದರೂ ಸಹ ಇನ್ನೂವರೆಗೆ ಮಕ್ಕಳು ಮೂತ್ರ ವಿಸರ್ಜನೆ ಮಾಡಲು ಬಯಲು ಪ್ರದೇಶಕ್ಕೆ ಹೋಗುವ ಪರಸ್ಥಿತಿ ಎದುರಾಗಿದೆ. ಸರಕಾರ ಕಾಗದದಲ್ಲಿ ಆದೇಶ ಮಾಡಿದೆ. ಆದರೆ ಪ್ರತ್ಯಕ್ಷವಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ನೂರು ವರ್ಷ ಮೇಲ್ಪಾಟ್ಟಾಗಿರುವ ಶಾಲೆಯ ಕಟ್ಟಡಗಳನ್ನು ಹೊಸದಾಗಿ ನಿಮರ್ಿಸಬೇಕು. ಅಂತಹ ಶಾಲೆಗೆ ಸರಕಾರ ಅಭಿವೃದ್ಧಿಗಾಗಿ ಹೆಚು ಅನುದಾನ ನೀಡಬೇಕೆಂದು ಗಡಿ ಕನ್ನಡಿಗರು ಆಗ್ರಹಿಸಿದ್ದಾರೆ.

ಈ ಕುರಿತು ಅಥಣಿ ವಲಯ ಕ್ಷೇತ್ರ ಶಿಕ್ಷಣಾಧಿಖಾರಿ ಸಿ.ಎಸ್. ನೇಮಗೌಡ ಇವರಿಗೆ ಸಂಪಕರ್ಿಸಿದಾಗ ನಾನು ಆಶಾಲೆಗೆ ಭೇಟಿ ನೀಡಿ ಸಮಸ್ಯೆ ಕುರಿತು ಪರಿಶೀಲನೆ ಮಾಡಿ ಶೀಘ್ರದಲ್ಲಿ ಪಯರ್ಾಯಗೊಳಿಸಲಾಗುವುದೆಂದು ಹೇಳಿದರು.