ತಾಲೂಕಿನ ಇನಾಂ ಹಂಚಿನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ
ಬೀಳಗಿ 03 : ವಿಧಾನ ಪರಿಷತ್ತ ಸದಸ್ಯ ಹನುಮಂತ್ ನಿರಾಣಿ ಮಾತನಾಡಿ. ರೈತರ ಸಾವಲಂಬಿ ಬದುಕಿಗೆ ಸಹಕಾರಿ ಸಂಘಗಳ ಪಾತ್ರ ಮುಖ್ಯವಾಗಿದೆ. ರೈತರ ಆರ್ಥಿಕ ವರಮಾನ ಹೆಚ್ಚಿಸಿಕೊಳ್ಳಲು ಸರಕಾರಿ ಸಂಘಗಳಲ್ಲಿ ಸಿಗುತ್ತಿರುವ ಸೌಲಭ್ಯಗಳನ್ನು ಪಡೆದುಕೊಂಡು ಕೃಷಿ ಚಟುವಟಿಕೆಗಳಿಗೆ ಆರ್ಥಿಕವಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಕಷ್ಟು ರೀತಿಯಲ್ಲಿ ಸಹಾಯ ಸಹಕಾರ ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಸಹಕಾರಿ ಸಂಘಗಳಿಂದ ದೊರೆಯುತ್ತಿರುವುದು ಎಂದು ಬಣ್ಣಿಸಿದ ಅವರು ಸಹಕಾರಿ ಸಂಘಗಳಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ ಸರ್ಕಾರದ ಹತ್ತು ಹಲವಾರು ಸವಲತ್ತುಗಳು ರೈತರಿಗೆ ಮುಟ್ಟುಸುವುದರಿಂದ ಸಹಕಾರಿ ಸಂಘಗಳ ವರಮಾನ ಹೆಚ್ಚಿಸಲು ಕಾರಣವಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಸಿದ್ದು ಗೌಡ ಕುಮಾರ್. ಈರ್ಪ ಕೋಟಿ. ಹನುಮಂತ ಲೆಂಕೆನ್ನವರ್. ವೆಂಕಣ್ಣ ದೇಸಾಯಿ. ಲಕ್ಷ್ಮಣ್ ದೊಡ್ಡಮನಿ.ಸಿದ್ದಣ್ಣ ನಾಯ್ಕರ್ . ಬಸಪ್ಪ ಕೋಲಾರ್. ಗುಂಡಪ್ಪ ಬಬಲೇಶ್ವರ . ಪುಂಡ್ಲಿಕಪ್ಪ ಗಾಣಿಗೇರ್. ವೇದಿಕೆ ಮೇಲೆ ಉಪಸ್ಥಿತರಿದ್ದರು.