ಕ್ರೀಡಾಪಟುವಿಗೆ ಆರೋಗ್ಯ ಮತ್ತು ಮನಸ್ಸು ಕೆಲಸ ಮಾಡಿದಾಗ ಯಶಸ್ಸು ಸಾಧ್ಯ
An athlete can succeed when his health and mind are working
ಸವದತ್ತಿ
: ಒಬ್ಬ ಕ್ರೀಡಾಪಟುವಿಗೆ ದೇಹ ಮತ್ತು ಮನಸ್ಸು
ಒಮ್ಮತದಿಂದ ಕೆಲಸ ಮಾಡಿದಾಗ ಮಾತ್ರ
ಯಶಸ್ಸು ಸಿಗಲು ಸಾಧ್ಯ. ಕಬಡ್ಡಿ,
ಖೋಖೋ, ವಾಲಿಬಾಲ್, ಫುಟ್ಬಾಲ್, ಕ್ರಿಕೆಟ್
ನಂತಹ ಆಟಗಳು
ದೈಹಿಕ ಶ್ರಮವನ್ನು ಹೆಚ್ಚಾಗಿ ಬಯಸುತ್ತವೆ. ಹೀಗಾಗಿ ಕ್ರೀಡಾಪಟುಗಳು ತಮ್ಮ
ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಅನಿವಾರ್ಯ ಎಂದು ಮಹಾವಿದ್ಯಾಲಯದ
ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಉಮೇಶ್
ಬಾಳಿ ಹೇಳಿದರು. ಅವರು ಇಲ್ಲಿನ ಕೆ.ಎಲ್.ಇ. ಸಂಸ್ಥೆಯ
ಎಸ್. ವ್ಹಿ. ಎಸ್. ಬೆಳ್ಳುಬ್ಬಿ
ಮಹಾವಿದ್ಯಾಲಯ ಮತ್ತು ಬೆಳಗಾವಿಯ ರಾಣಿ
ಚನ್ನಮ್ಮ ವಿಶ್ವವಿದ್ಯಾಲಯ ಇವುಗಳ ಸಹಯೋಗದಲ್ಲಿ ಏರ್ಪಡಿಸಿದ್ದ
ಏಕ ವಲಯ ಅಂತರ್ ಕಾಲೇಜುಗಳ
ಎರಡು ದಿನಗಳ ಮಹಿಳೆಯರ ಖೋಖೋ
ಆಯ್ಕೆ ಪ್ರಕ್ರಿಯೆ ಮತ್ತು ಪಂದ್ಯಾವಳಿಯ ಸಮಾರೋಪ
ಸಮಾರಂಭದಲ್ಲಿ ಮಾತನಾಡಿದರು.
ಖೋಖೋ
ಆಯ್ಕೆ ಪ್ರಕ್ರಿಯೆಯಲ್ಲಿ ಬೆಳಗಾವಿಯ ಬಿ.ಕೆ.ಕಾಲೇಜು
ಪ್ರಥಮ, ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯ
ದ್ವಿತೀಯ ಮತ್ತು ರಾಮದುರ್ಗದ ಐ.ಎಸ್.ಯಾದವಾಡ ಸರಕಾರಿ
ಪ್ರಥಮ ದರ್ಜೆ ಕಾಲೇಜು ತೃತೀಯ
ಸ್ಥಾನ ಪಡೆದುಕೊಂಡವು. ಈ ವೇಳೆ ಪ್ರಾಚಾರ್ಯ
ಡಾ. ಎನ್.ಆರ್.ಸವತಿಕರ,
ಪೂರ್ಣಿಮಾ ಹುಡೇದ, ಕಾಶವ್ವ ನಾಯ್ಕರ್,
ಪ್ರೊ. ಕೆ. ರಾಮರೆಡ್ಡಿ, ವಿ.ಎಸ್.ಮೀಶಿ, ಡಾ.ಗೀತಾ ಮಲ್ಲಾಪುರ, ಪ್ರೊ.ಶಿವಾನಂದ ಹೊಳಿ, ಬೆಳಗಾವಿ
ಮತ್ತು ವಿಜಯಪುರ ಜಿಲ್ಲೆಗಳ 26 ಕಾಲೇಜಿನಿಂದ
ಆಗಮಿಸಿದ 74 ಸ್ಪರ್ಧಿಗಳು, ದೈಹಿಕ ಶಿಕ್ಷಣ ನಿರ್ದೇಶಕರು,
ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎ.ಎಫ್.ಬದಾಮಿ, ವಿ.ಎಸ್.ಮೀಶಿ, ಡಾ.ಎನ್.ಎ.ಕೌಜಗೇರಿ,
ಎ.ಎ.ಹಳ್ಳೂರ,
ಸ್ನೇಹಾ ಗಂಗಲ, ಕಿರಣಕುಮಾರ್ ಲಮಾಣಿ,
ಪಿ.ಎಫ್.ಹಾದಿಮನಿ, ಎಂ.ಎನ್.ಸಂಗೊಳ್ಳಿ, ಕೆ.ಬಿ.ನರಗುಂದ, ಎಸ್.ಜೆ.ಮಜ್ಜಗಿ, ಅಶೋಕ
ಪಮ್ಮಾರ, ಬಿ.ಬಿ.ಕಬಾಡಗಿ,
ಡಾ.ಎಚ್.ಎನ್.ಲೋಕೇಶ್,
ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 