ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಅಮೀರ್ ಹಮ್ಜಾ ನದಾಫ್ ಆಯ್ಕೆ
Amir Hamza Nadaf selected for Karunada Padma Shri award
ಕೊಪ್ಪಳ 25: ಕರ್ಮ ಭೂಮಿ ಕನ್ನಡ ಸಂಘ ಬಿಚೋಲಿಯಂ ಗೋವಾ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಇವುಗಳ ವತಿಯಿಂದ ಕೊಡ ಮಾಡುವ ಪ್ರತಿಷ್ಠಿತ ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಕೊಪ್ಪಳ ನಗರದ ನಿವಾಸಿ, ಕೊಪ್ಪಳ ಜಿಲ್ಲೆಯ ಸಮಾಜ ಸೇವಕ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ನಿವೃತ್ತಿ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ,ಏ, ನದಾಫ್ ರವರು ಆಯ್ಕೆಗೊಂಡಿದ್ದಾರೆ,ಬರುವ ಡಿಸೆಂಬರ್ 7 ರಂದು ಪಕ್ಕದ ಗೋವಾ ರಾಜ್ಯದ ಬಿಚೋಲಿಯಂ ನಗರದ ಶ್ರೀ ಹೀರಾ ಬಾಯಿ ಮೆಮೋರಿಯಲ್ ಹಾಲ್ ನಲ್ಲಿ 16 ನೇ ಬಾರಿಗೆ ಜರುಗಲಿರುವ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದಲ್ಲಿ ಕೊಪ್ಪಳ ನಗರದ ನಿವಾಸಿ, ಕೊಪ್ಪಳ ಜಿಲ್ಲೆಯ ಸಮಾಜ ಸೇವಕ ನಿವೃತ್ತ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ,ಏ , ನದಾಫ್‌ಅವರ ಉತ್ತಮ ವೃತ್ತಿ ಶಿಕ್ಷಣ ಸೇವೆ ಮತ್ತು ಸಮಾಜ ಸೇವೆ ಗಾಗಿ ಅವರನ್ನು ಸದರಿ ಪ್ರಶಸ್ತಿಗೆ ಆಯ್ಕೆ ಮಾಡಿ ಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಘಟಕ ,ಕರ್ನಾಟಕ ಜಾಗೃತಿ ವೇದಿಕೆಯ ಸಂಚಾಲಕ ಮಹೇಶ್ ಬಾಬು ಸುರುವೇ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಸದರಿಯವರಿಗೆ ಈ ಹಿಂದೆಯೂ ಸಹ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ನಾಗರಿಕರ ವೇದಿಕೆ ವತಿಯಿಂದ ಕೊಡ ಮಾಡುವ ಕೊಪ್ಪಳ ಐಸಿರಿ ಡಾಕ್ಟರ್ ಸಿದ್ದಯ್ಯ ಪುರಾಣಿ ಸ್ಮಾರಕ ಪ್ರಶಸ್ತಿ ಗೋವಾದಲ್ಲಿ ಕದಂಬ ಪ್ರಶಸ್ತಿ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳು ಸಹ ಅವರ ಉತ್ತಮ ವೃತ್ತಿ ಶಿಕ್ಷಣ ಸೇವೆ ಮತ್ತು ಸಮಾಜ ಸೇವೆಗಾಗಿ ಪ್ರಶಸ್ತಿ ನೀಡಿ ಸತ್ಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ, ಕೊಪ್ಪಳ ನಗರದ ನಿವಾಸಿ, ಕೊಪ್ಪಳ ಜಿಲ್ಲೆಯ ಸಮಾಜ ಸೇವಕ ಹಾಗೂ ನಿವೃತ್ತ ವೃತ್ತಿ ಶಿಕ್ಷಕರಾದ ಅಮೀರ್ ಹಮ್ಜಾ ,ಏ, ನದಾಫ್ ರವರಿಗೆ ಗೋವಾ ಕನ್ನಡಿಗರ ಸಮ್ಮೇಳನದಲ್ಲಿ ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಇಲ್ಲಿನ ಅವರ ಸ್ನೇಹಿತರ ಬಳಗ ಮತ್ತು ಅಭಿಮಾನಿ ಬಳಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 