ಅಂಬಿಗರ ಚೌಡಯ್ಯನವರ ನಿಷ್ಟುರವಾದಿ ವಚನಕಾರರಾಗಿದ್ದರು : ಶಾಸಕ ಬಸವರಾಜ ಶಿವಣ್ಣನವರ

Ambigara Choudaiah's Nisthuravadi Vachanavara : MLA Basavaraja Shivananavara

ಅಂಬಿಗರ ಚೌಡಯ್ಯನವರ ನಿಷ್ಟುರವಾದಿ ವಚನಕಾರರಾಗಿದ್ದರು : ಶಾಸಕ ಬಸವರಾಜ ಶಿವಣ್ಣನವರ 

ಬ್ಯಾಡಗಿ 13: ಅಂಬಿಗರ ಚೌಡಯ್ಯ ನಿಷ್ಠುರವಾದಿ ವಚನಕಾರರಾಗಿದ್ದು, 12ನೇ ಶತಮಾನದ ಅನುಭವ ಮಂಟಪದಲ್ಲಿ ಮೊದಲ ಪಂಕ್ತಿಯಲ್ಲಿ ಇದ್ದವರು. ಇವರ ಅಚಾರ-ವಿಚಾರ, ತತ್ವಾದರ್ಶಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ವಚನಕಾರರು ಸಮಾಜದ ಅವ್ಯವಸ್ಥೆಯ ವಿರುದ್ಧ ವಚನ ಸಾಹಿತ್ಯದ ಮೂಲಕ ನೇರ ನುಡಿಯಲ್ಲಿ ಹೋರಾಟ ನಡೆಸಿದ್ದಾರೆ. ಇವರ ವಿಚಾರಧಾರೆಗಳು ಮುಂದಿನ ಪೀಳಿಗೆಗೂ ತಲುಪಿಸುವಂತಾಗಬೇಕು’ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ತಾಲೂಕಿನ ಮಾಸಣಗಿ ಗ್ರಾಮದಲ್ಲಿ ತಾಲೂಕು ಮಟ್ಟದ 905 ನೇ ನಿಜಶರಣರ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಹಾಗೂ  ವೇದ ವ್ಯಾಸ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ  ಉದ್ಘಾಟಿಸಿ  ಮಾತನಾಡಿದ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದವರು ಎಲ್ಲ ವಚನಕಾರರನ್ನು ಗಮನಿಸುತ್ತಾ ಬಂದರೆ ಅಂಬಿಗರ ಚೌಡಯ್ಯ ಅವರ ನಡೆ, ನುಡಿ ವಿಶಿಷ್ಟವಾಗಿರುವುದನ್ನು ಕಾಣಬಹುದು. ಯಾವುದೇ ಒಂದು ವಿಷಯವನ್ನು ನಿಷ್ಠುರವಾಗಿ ಸತ್ಯದ ಹಾದಿಯಲ್ಲಿ ಅಂಬಿಗರ ಚೌಡಯ್ಯ ಅವರು ಹೇಳುತ್ತಿದ್ದರು. ಇರುವುದನ್ನು ಇದ್ದ ಹಾಗೆ ಹೇಳುವ ವಿಶೇಷ ವ್ಯಕ್ತಿತ್ವ ಚೌಡಯ್ಯರವರದ್ದಾಗಿತ್ತು. ಪ್ರತಿಯೊಬ್ಬ ವಚನಕಾರರು ತಮ್ಮ ವಚನದ ಕೊನೆಯ ಸಾಲಿನಲ್ಲಿ ಅವರ ಆರಾಧ್ಯ ದೈವದ ನಾಮವನ್ನು ಬಳಸುತ್ತಿದ್ದರು. ಆದರೆ ಇವರು ತಾವು ಮಾಡಿದ ವೃತ್ತಿಯನ್ನು ಅಂಕಿತ ನಾಮವನ್ನಾಗಿ ಬಳಸುತ್ತಿದ್ದರು’  ಚೌಡಯ್ಯನವರ ಜಾತಿ ಪದ ತೆಗೆದು ಹಾಕಿ ಗಂಡು ಹೆಣ್ಣು ಅಷ್ಟೇ ಜಾತಿ ಅಂತ ಹೇಳಿದ ಶರಣರು ಅಂತಹ ಆದರ್ಶಗಳನ್ನು ನಾವು ಬೆಳೆಸಿಕೊಳ್ಳುವ ಕೆಲಸ ಇದಿನ ಯುವಕರು ಮಾಡಬೇಕು ಎಂದು ಹೇಳಿದರು.ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ ಚೌಡಯ್ಯ ಸಮಾಜದಲ್ಲಿ ನಡೆಯುತ್ತಿದ್ದ ಮೂಢನಂಬಿಕೆಗಳನ್ನು ತಿದ್ದುವಂತಹ ಕೆಲಸ ಮಾಡಿದ್ದರು. ಕನ್ನಡ ಸಾಹಿತ್ಯದಲ್ಲಿ ಕಂಡು ಬಂದಂತಹ ಇಬ್ಬರು ದಿಟ್ಟತನ ವಚನಕಾರರೆಂದರೆ ಸಿಡಿಲ ನುಡಿ ಸರ್ವಜ್ಙ ಮತ್ತು ಅಂಬಿಗರ ಚೌಡಯ್ಯ’ ಮನುಕುಲದ ಉದ್ಧಾರಕ್ಕೆ ಈಗಲೂ ಪೀಠದ ಶ್ರೀ ಗಳು ಶ್ರಮಿಸಿದವರು ಸಮಾಜದ ಏಳಿಗೆಗೆ ಶಿಕ್ಷಣ ಅವಶ್ಯಕತೆ ಇದೆ ಪ್ರತಿಯೊಬ್ಬ ಸಮಾಜದವರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಯುವಕರು ಅಂಬಿಗರ ಚೌಡಯ್ಯರ ಆದರ್ಶಗಳನ್ನು ಪಾಲಿಸಿ ಸಮಾಜವನ್ನು ಮುಂದೆ ಎಲ್ಲ ರಂಗದಲ್ಲಿ ಬಿಂಬವಿಸುವಂತೆ ಬಿಂಬಿಸುವ ಕೆಲಸವನ್ನು ಪ್ರತಿಯೊಬ್ಬ ಸಮಾಜದವರು ಮಾಡಬೇಕು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾಜಿ ಸಚಿವ ಪ್ರಮೋದ ಮಧ್ವರಾಜ್ ಮಾತನಾಡಿ 12 ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರ ಕಾಲದಲ್ಲಿ ಕಲ್ಯಾಣ ಕ್ರಾಂತಿಯಲ್ಲಿ ಅಂಬಿಗರ ಚೌಡಯ್ಯನವರ ಭಾಗವಹಿಸಿದ್ದರು ಅದು ನಮ್ಮ ಹೆಮ್ಮೆ ನೆರೆ ಹಾಗಿ ನಿಷ್ಠುರವಾಗಿ ಮಾತನಾಡುವ ಗುಣ ಹೊಂದಿದವರು ನಮ್ಮ ಸಮಾಜದವರಾಗಿದೆ.ನಮ್ಮ ಸಮಾಜದಲ್ಲಿ  ಧಾರ್ಮಿಕ ಕ್ರಾಂತಿ ಹಾಗೂ ಸಾಮಾಜಿಕವಾಗಿ ಕ್ರಾಂತಿ ರಾಜಕೀಯ ಕ್ರಾಂತಿ ಆಗುವ ಅವಶ್ಯಕತೆ ಇದೆ ದೇಶದಲ್ಲಿ 38 ಹೆಸರುಗಳು ಹೊಂದಿದೆ ಸಮಾಜ ನಮ್ಮದಾಗಿದೆ.ಯುವಕರನ್ನು ಹಾಗೂ ಮಹಿಳೆಯರ ಸಂಘಟನೆ ಯಿಂದ ಸಮಾಜದ ಏಳಿಗೆ ಯಾಗಲು ಸಾಧ್ಯ.ಎಂದು ಹೇಳಿದರು.ಈ ಸಂದರ್ಭದಲ್ಲಿ ಜಗದ್ಗುರು ಶಾಂತಭಿಷ್ಮಯ ಚೌಡಯ್ಯ ಸ್ವಾಮಿಗಳು.ಶ್ರಿ ಕೃಷ್ಣ ಯಾದವ್ ಸ್ವಾಮಿಗಳು. ಚಿತ್ರದುರ್ಗದ ಶ್ರೀ ಕೃಷ್ಣ ದಯಾನಂದ ಶ್ರೀಗಳು. ಹಾವೇರಿ ಹೊಸಮಠದ ಬಸವಲಿಂಗ ಶ್ರೀಗಳು ಸದಾನಂದಯ್ಯ ಹಿರೇಮಠ ದಿವ್ಯ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಮಂಜುನಾಥ್ ಭೋವಿ.ಬಸವರಾಜ ಬನ್ನಿಹಟ್ಟ. ಚಂದ್ರು ಮುಳುಗುಂದ. ಜಿತೇಂದ್ರ ಸುಣಗಾರ್ .ಸುರೇಶ ಯತ್ನಳ್ಳಿ.ನಾಗರಾಜ ಆನ್ವೇರಿ.ಶಿವಬಸಪ್ಪ ಕುಳೇನೂರ..ಎಸ್ ಎನ್ ಬಾರ್ಕಿ. ಶಿವಣ್ಣ ಕುಮ್ಮೂರ. ಹನುಮಂತಪ್ಪ ನಾಯಕ. ನೀಲಗಿರಿಯಪ್ಪ ಕಾಕೋಳ ಹಾಗೂ ಜಿಲ್ಲೆಯ ಎಲ್ಲಾ ಸಮಾಜದ ಮುಖಂಡರು ಹಾಗೂ ಊರು ನಾಗರೀಕರು ಉಪಸ್ಥಿತರಿದ್ದರು.