ಜಾತಿ ವ್ಯವಸ್ಥೆ ನಿರ್ಮೂಲನೆಗೆ ಅಂಬೇಡ್ಕರ ಅವರ ಪಾತ್ರ ಬಹು ಮುಖ್ಯವಾಗಿದೆ: ಎಂವಿ ಗುಂಡಪ್ಪಗೋಳ

Ambedkar's role is very important in the abolition of the caste system: MV Gundappagol

ಜಾತಿ ವ್ಯವಸ್ಥೆ ನಿರ್ಮೂಲನೆಗೆ ಅಂಬೇಡ್ಕರ ಅವರ ಪಾತ್ರ ಬಹು ಮುಖ್ಯವಾಗಿದೆ: ಎಂವಿ ಗುಂಡಪ್ಪಗೋಳ 

ಯರಗಟ್ಟಿ, 15 : ದೇಶದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಅಂಬೇಡ್ಕರ ಅವರ ಪಾತ್ರ ಬಹು ಮುಖ್ಯವಾಗಿದೆ ಎಂದು ತಹಶೀಲ್ದಾರ ಎಂವಿ ಗುಂಡಪ್ಪಗೋಳ ಹೇಳಿದರು. ಸ್ಥಳೀಯ ತಹಶೀಲ್ದಾರ ಕಚೇರಿಯ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್‌.ಅಂಬೇಡ್ಕರ ಅವರ 134ನೇ ಜಯಂತಿ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಹಾನ್ ಮಾನವತಾವಾದಿಯಾಗಿರುವ ಅಂಬೇಡ್ಕರ ಅವರು ದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದರು ಎಂದರು. ಮಹಾನ್ ನಾಯಕನ ಆದರ್ಶಗಳನ್ನು ಯುವ ಜನಾಂಗ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾರ್ಥಕಗೊಳಿಸಿಕೊಳ್ಳುವಂತೆ ಕರೆ ನೀಡಿದರು.      ದಲಿತ ಮುಖಂಡರಾದ ಭಾಸ್ಕರ ಹಿರೇಮೆತ್ರಿ ಮಾತನಾಡಿ, ಜಗತ್ತಿನಲ್ಲಿಯೇ ಅತ್ಯುತ್ತಮ ಸಂವಿಧಾನವನ್ನು ನೀಡಿದ ಕೀರ್ತಿ ಡಾ.ಬಿ.ಆರ್‌.ಅಂಬೇಡ್ಕರ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಪಂ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಮುಖ್ಯ ವೈದ್ಯಾಧಿಕಾರಿ ಡಾ. ಬಿ. ಎಸ್‌. ಬಳ್ಳೂರ, ನಿಕಟಪೂರ್ವ ಪ. ಪಂ. ಮುಖ್ಯಾಧಿಕಾರಿ ಡಿ.ಎನ್‌. ತಹಶೀಲ್ದಾರ, ಪಶು ವೈದ್ಯಾಧಿಕಾರಿ ಎಂ. ವಿ. ಪಾಟೀಲ, ಕೃಷಿ ಅಧಿಕಾರಿ ಎಂ. ಜಿ. ಕಳಸಪ್ಪನವರ, ಕಂದಾಯ ನೀರೀಕ್ಷಕ ವಾಯ್ ಎಫ್‌. ಮುರ್ತೇನ್ನವರ, ಗ್ರಾಮ ಆಡಳಿತ ಅಧಿಕಾರಿ ಎಲ್‌. ಬಿ. ದಳವಾಯಿ ಕುಮಾರ ಹಿರೇಮಠ, ಸಂತೋಷ ಚನ್ನಮೇತ್ರಿ, ವಿಲ್ಸನ್ ಸೊಪ್ಪಡ್ಲ, ಬಾಬು ಚನ್ನಮೆತ್ರಿ, ಬಸವರಾಜ ಚನ್ನಮೇತ್ರಿ, ಲಕ್ಕಪ್ಪ ಹುಣಶೀಕಟ್ಟಿ, ಸುರೇಶ ಭಜಂತ್ರಿ, ಲಕ್ಕಪ್ಪ ಜಗದಾರ, ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಸೇರಿದಂತೆ ಅನೇಕ ಇದ್ದರು.14 ಯರಗಟ್ಟಿ 1ಪೋಟೊ ಶೀರ್ಷಿಕೆಯರಗಟ್ಟಿ ತಹಶೀಲ್ದಾರ ಕಚೇರಿ ಸಭಾ ಭವನದಲ್ಲಿ ಡಾ.ಬಿ.ಆರ್‌.ಅಂಭೇಡ್ಕರ ಜಯಂತಿ ಆಚರಿಸಲಾಯಿತು.