ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದ ಅಂಬೇಡ್ಕರ ಸಂವಿಧಾನ : ಯಾಶೀರಖಾನ

Ambedkar's Constitution which provided equal opportunity to all: Yashir Khana

ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದ ಅಂಬೇಡ್ಕರ ಸಂವಿಧಾನ : ಯಾಶೀರಖಾನ  

ಶಿಗ್ಗಾವಿ 26 : ಸಮಾಜದಲ್ಲಿರುವ ಮೇಲು, ಕೀಳು ಎಂಬ ಬೇದ ಭಾವವನ್ನು ತೋಲಗಿಸಿ, ಸರ್ವರಿಗೂ ಸಮಾನ ಅವಕಾಶವನ್ನು ಕಲ್ಪಿಸಿದ ಬಾಬಾ ಸಾಹೇಬ ಅಂಬೇಡ್ಕರವರ ಸಂವಿಧಾನದಿಂದ ಇಂದು ನಾವೆಲ್ಲರೂ ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಶಾಸಕ ಯಾಶೀರಖಾನ ಪಠಾಣ ಹೇಳಿದರು.  ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಆಯೋಜಿಸಿದ 76 ನೆ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಎಲ್ಲರೂ ನಮ್ಮ ರಾಜಕೀಯವನ್ನು ಬದಿಗಿಟ್ಟು ಸಂವಿಧಾನವನ್ನು ಕಾಪಾಡಿಕೊಳ್ಳುಬೇಕಿದೆ ಅಲ್ಲದೇ ಗಣರಾಜ್ಯೋತ್ಸವವನ್ನು ನಮ್ಮ ದೀಪಾವಳಿ, ರಂಜಾನ್ ಹಬ್ಬಗಳಿಗಿಂತ ಸಂಭ್ರಮದಿಂದ ಆಚರಿಸಬೇಕಿದೆ ಎಂದರು.   ತಹಸೀಲ್ದಾರ ಧನಂಜಯ ಎಂ. ಧ್ವಜಾರೋಹಣ ನೆರವೇರಿಸಿ ಮಾತನಾಡಿ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಶಿಕ್ಷಣ, ಮೂಲಭೂತ ಮತ್ತು ಧಾರ್ಮಿಕ ಹಕ್ಕುಗಳನ್ನು ಭಾರತದ ಸರ್ವೋಚ್ಚ ಕಾನೂನಿನ ಮೂಲಕ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಸಂವಿಧಾನ ಎಂದು ಹೇಳಿದರು. ಕೆ ಎಸ್ ಆರ್ ಪಿ. ಪರೇಡ್ ಕಮಾಂಡರ್ ಚನ್ನಬಸಯ್ಯ ಏಚ್ ಬಿ. ಅವರಿಂದ ಗೌರವ ಧ್ವಜ ವಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಾಲೂಕಿನ ವಿವಿಧ ಮುಖಂಡರನ್ನು ತಾಲೂಕಾಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು.  ಕಾರ್ಯಕ್ರಮದಲ್ಲಿ ಬಿಇಓ ಎಂ ಬಿ ಅಂಬಿಗೇರ, ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ತಾಲೂಕ ಗ್ಯಾರಂಟಿ ಯೋಜನೆ ಅಧ್ಯಕ್ಷ ಎಸ್ ಎಫ್ ಮಣಕಟ್ಟಿ, ತಾಪಂ. ಇಓ. ಕುಮಾರ ಮಣ್ಣವಡ್ಡರ, ನೌಕರರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ ಪುರಸಭೆ ಸದಸ್ಯರಾದ ಶ್ರೀಕಾಂತ ಬುಳ್ಳಕ್ಕನವರ, ಸುಭಾಷ ಚೌಹಾಣ, ರೂಪಾ ಬನ್ನಿಕ್ಕೊಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನುರಾಧಾ ಮಾಳವಾದೆ, ಉಪಾಧ್ಯಕ್ಷೆ ಶಾಂತಾಬಾಯಿ ಸುಬೇದಾರ, ಮಂಜುನಾಥ ಬ್ಯಾಹಟ್ಟಿ, ಸಂಗೀತಾ ವಾಲ್ಮೀಕಿ, ದಯಾನಂದ ಅಕ್ಕಿ, ರಮೇಶ ವನಹಳ್ಳಿ, ಗೌಸಖಾನ್ ಮುನಸಿ, ಮುಸ್ತಾಕ್ ತಹಶೀಲ್ದಾರ, ಮಂಜುನಾಥ ಮಣ್ಣಣ್ಣವರ ಸೇರಿದಂತೆ ತಾಲೂಕಾಡಳಿತದ ಅಧಿಕಾರಿಗಳು. ರೈತ, ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದರು.