ಲೋಕದರ್ಶನ ವರದಿ
ಶಿಗ್ಗಾವಿ : ಸಂವಿಧಾನದ ಮುಂದೆ ಎಲ್ಲರೂ ಸಮಾನರು, ಇಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ ಮನುಷ್ಯ ಉಸಿರು ಪಡೆದು ಹುಟ್ಟಿ ಹೆಸರು ಮಾಡಿ ಉಸಿರು ಹೋದರೂ ಹೆಸರು ಉಳಿಯುವಂತೆ ಬದುಕಬೇಕು ಎಂದು ಧಾರವಾಡದ ಡಾ. ಬಿ ಆರ್ ಅಂಬೇಡ್ಕರ ಪ್ರಗತಿ ಸಂಸ್ಥೆಯ ಪ್ರಧಾನ ಕಾರ್ಯದಶರ್ಿ ಲಕ್ಷ್ಮಣ ಬಕಾಯಿ ಹೇಳಿದರು.
ಪಟ್ಟಣದ ಸಂಗನಬಸವ ಮಂಗಲ ಭನವದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್, ಪುರಸಭೆ ಶಿಗ್ಗಾವಿ, ಬಂಕಾಪೂರ ಪುರಸಭೆ, ತಾಲೂಕಾ ಮೈಸೂರ ಹುಲಿ ಹಜರತ್ ಟಿಪ್ಪು ಸುಲ್ತಾನ ಅಭಿಮಾನಿ ಬಳಗ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರ ಹುಲಿ ಹಜರತ್ ಟಿಪ್ಪು ಸುಲ್ತಾನರವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಟಿಪ್ಪು ಸುಲ್ತಾನ ನಾಡಿಗಾಗಿ ತನ್ನ ಹೆತ್ತ ಮಕ್ಕಳನ್ನೆ ಬ್ರೀಟಿಷರಿಗೆ ಒತ್ತೆ ಇಟ್ಟವನು ಶ್ರೀರಂಗಪಟ್ಟಣದಂತಹ ದೇವಸ್ಥಾನಗಳನ್ನು ಕಟ್ಟಿಸಿದವನು ಆಡಳಿತ ವ್ಯವಸ್ಥೆಯನ್ನು ಸುಧಾರಿಸಿದವನು ನಾಡಿಗೆ ರೇಷ್ಮೆಯನ್ನು ಪರಿಚಯಿಸಿದವನು ಸಂಸ್ಕ್ರತೀಕ ಸಂಘಟನೆಗೆ ಒತ್ತು ನೀಡಿದವರು ಮ್ಯಾನ ಆಪ್ ಮಶೀನ್ ಮೂಲ ಸೂತ್ರಧಾರ ಟಿಪ್ಪು ಸುಲ್ತಾನ ಎಂದರೆ ತಪ್ಪಾಗಲಾರದು, ತನ್ನ ಆಡಳಿತದಲ್ಲಿ 156 ದೇವಾಲಯಗಳಿಗೆ ಆಥರ್ಿಕ ಸಹಾಯ ನೀಡಿ ನಿರ್ವಹಣೆ ಮಾಡಿದ ಏಕೈಕ ವ್ಯಕ್ತಿ ಟಿಪ್ಪು ಸುಲ್ತಾನ ಎಂದ ಅವರು, ನಾವು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಇಲ್ಲಿ ಎಲ್ಲರೂ ಸಮಾನರು ಅವರಿಗೆ ಅವರದ್ದೇಯಾದ ಹಕ್ಕುಗಳು ಇರುತ್ತವೆ, ಆದ್ದರಿಂದ ಹೊಂದಾಣಿಕೆಯಿಂದ ಭಾವ್ಯಕ್ಯತೆಯಿಂದ ನಾವೆಲ್ಲರೂ ಬದುಕಬೇಕಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಕರೀಂ ಮೊಗಲಲ್ಲಿ ಮಾತನಾಡಿ ಅಭಿಮಾನ ಎನ್ನುವುದು ನಿರಂತರವಾಗಿರಬೇಕು ಟಿಪ್ಪು ಸುಲ್ತಾನ ಅವರ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳಿವಡಿಸಿಕೊಳ್ಳಬೇಕು.
ಟಿಪ್ಪು ಸುಲ್ತಾನರವರ ಜಯಂತಿಯನ್ನು ಸಕರ್ಾರ ಜನಪರವಾದ ಯೋಜನೆಗಳನ್ನು ನೀಡಬೇಕು. ಜಯಂತಿ ವಿರೋದದಿಂದ ನೊವಾಗಿದೆ ಆದರೆ ಅವರವರ ವ್ಯಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಸತ್ಯ ತಿಳಿಯಬೇಕಾಗಿದೆ ನಾಡಿಗೆ ಸುಲ್ತಾನರ ಕೊಡುಗೆ ಅಪಾರವಾಗಿದೆ ನಾವು ಇಂದು ಶಾಂತಿ ಸೌಹಾರ್ದದದಿಂದ ಬಾಳಿ ಬದುಕಬೇಕಿದೆ ಎಂದರು.
ಎ.ಪಿ.ಎಮ್.ಸಿ ಅಧ್ಯಕ್ಷೆ ಪ್ರೇಮಾ ಪಾಟೀಲ್ ಮಾತನಾಡಿ ಟಿಪ್ಪು ಸುಲ್ತಾನ ಒಂದೆ ಸಮುದಾಯಕ್ಕೆ ಸಿಮೀತರಾದವರಲ್ಲ, ಅವರು ಹಿಂದು ದೇವಾಲಯಗಳನ್ನು ಕಟ್ಟಿಸಿದವರು ಅವರ ಜಯಂತಿ ಮಾಡುತ್ತಿರುವುದು ಸಂತಸದ ವಿಷಯ ಸಕರ್ಾರಕ್ಕೆ ಅಭಿನಂದನೆಗಳು ಎಂದರು.
ಕೆ.ಪಿ.ಸಿ.ಸಿ ರಾಜ್ಯ ಪ್ರಧಾನ ಕಾರ್ಯದಶರ್ಿ ಪ್ರಕಾಶ ಹಾದಿಮನಿ ಮಾತನಾಡಿದರು, ಕಾರ್ಯಕ್ರಮದಲ್ಲಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹಾಗೂ ಹುಬ್ಬಳ್ಳಿ ಸಜ್ಜಾದ ನಸೀನ್ ಆಸ್ತಾನಾ-ವ-ಖಾದ್ರಿಯಾ ಅಲ್ಹಾಜ ಪೀರ ಸಯ್ಯದ ಮಹಮ್ಮದತಾಜಿದ್ದೀನ ಖಾದ್ರಿ ಸಾನಿದ್ಯ ವಹಿಸಿ ಆಶಿರ್ವಚಿಸಿದರು.
ಜಿ.ಪಂ ಉಪಾಧ್ಯಕ್ಷಿಣಿ ದೀಪಾ ಅತ್ತಿಗೇರಿ, ಸದಸ್ಯ ಬಸನಗೌಡ ದೇಸಾಯಿ, ತಾ.ಪಂ ಅಧ್ಯಕ್ಷಿಣಿ ಪಾರವ್ವ ಆರೇರ ಸದಸ್ಯರಾದ ಶ್ರೀಕಾಂತ ಪೂಜಾರ, ಪುರಸಭೆ ಸದಸ್ಯರಾದ ಗೌಸಖಾ ಮುನಸಿ, ಶಬ್ಬೀರ ಮಕಾಂನದಾರ, ಎಮ್,ಎಮ್, ಮುಲ್ಲಾ, ಶ್ರೀಕಾಂತ ಮಾಣೀಕ್, ಅಬ್ದುಲಸತ್ತಾರ ವದರ್ಿ, ಖಾಜಾಮೊಯಿದ್ದಿನ ರಿತ್ತಿ, ಎ.ಪಿ.ಎಮ್.ಸಿ ಉಪಾದ್ಯಕ್ಷ ಹನುಮರೆಡ್ಡಿ ನಡುವಿನಮನಿ, ಮುಖಂಡರಾದ ಎನ್.ಎಮ್.ವೆಂಕೋಜಿ, ವಿರೇಶ ಆಜೂರ, ಗುಡ್ಡಪ್ಪ ಜಲ್ದಿ, ಮಂಜುನಾಥ ಮಣ್ಣಣ್ಣನವರ, ಫಕ್ಕಿರಪ್ಪ ಕುಂದೂರ, ಮಂಜುನಾಥ ತಿಮ್ಮಾಪೂರ, ಬಸೀರಸಾಬ ಯೆಲ್ಲೂರ, ರಿಯಾಜಅಹ್ಮದ ಹಮ್ಮಗಿ, ಜಾಫರಸಾಬ ಭಾಗವಾನ, ನಾಗರಾಜ ಹಾವೇರಿ, ಸಾಧಿಕ ಮಲ್ಲೂರ, ವಕೀಲರಾದ ಸಲೀಂ ಪರೋಖಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಟಿಪ್ಪು ಸುಲ್ತಾನ ಅಭೀಮಾನಿ ಬಳಗದವರು ಅಂಜುಮನ್ ಸಂಸ್ಥೆಯ ಪಧಾಧಿಕಾರಿಗಳು ಇನ್ನೂ ಅನೇಕರು ಉಪಸ್ಥಿತರಿದ್ದರು.