ಲೋಕದರ್ಶನ ವರದಿ
ಸಾಣೇಹಳ್ಳಿ09: ಸಳ್ಥೀಯ ರಾಷ್ಟ್ರೀಯ ನಾಟಕೋತ್ಸವದ ನಿಮಿತ್ತ ಶಿವಕುಮಾರ ರಂಗಮಂದಿರದಲ್ಲಿ ಆಯೋಜನೆಗೊಂಡಿದ್ದ `ಧ್ಯಾನ, ಮೌನ, ಪ್ರಾರ್ಥನೆ, ಚಿಂತನಾ' ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ವಚನ ಎಂದರೆ ಪ್ರಮಾಣ, ಸತ್ಯ. 12ನೆಯ ಶತಮಾನದ ಕಲ್ಯಾಣದಲ್ಲಿ ಅನುಭವ ಮಂಟಪವಿತ್ತು. ಅಲ್ಲಿರುವ ಶರಣರೆಲ್ಲರೂ ಅಂತಃಸಾಕ್ಷಿಗೆ ಅನುಗುಣವಾಗಿ ಬದುಕಿದವರು. ಅವರ ಬದುಕಿನ ಸಾರವೇ ವಚನ. ಇವು ಕೇವಲ ರಚನೆಗಳಷ್ಟೇ ಅಲ್ಲ; ಅವುಗಳಲ್ಲಿ ಅನುಭವ ಮತ್ತು ಅನುಭಾವ ಎರಡೂ ಇವೆ. ಈ ವಚನಗಳು ಇಂದಿಗೂ ಮನುಷ್ಯ ಮಾತ್ರರೆಲ್ಲರಿಗೂ ಪ್ರೇರಣೆ ನೀಡುವಂಥವು. ಶರಣರು ಮೊದಲು ತಮ್ಮನ್ನು ತಾವು ನೋಡಿಕೊಳ್ಳುವ ಪ್ರಯತ್ನ ಮಾಡಿದರು. ಶರಣರ ಸಹವಾಸದಿಂದ ನಾವೂ ಶರಣರಾಗಬಹುದು. ವಚನಗಳು ವ್ಯಕ್ತಿಯ ಕಲ್ಯಾಣವನ್ನು, ಲೋಕಕಲ್ಯಾಣವನ್ನೂ ಒಟ್ಟಿಗೆ ಬಯಸುತ್ತವೆ. ಇಂಥ ವಚನಗಳ ಅಧ್ಯಯನ, ಅನುಷ್ಠಾನ ನಮ್ಮದಾಗಬೇಕು ಎಂದರು.
ಪ್ರಾರ್ಥನಾ ಸಭೆಯಲ್ಲಿ `ವಚನ-ಕಲ್ಯಾಣ' ಕುರಿತಂತೆ ಮಾತನಾಡಿದ ಚಿಕ್ಕಮಗಳೂರಿನ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹ ನಿದರ್ೇಶಕರಾದ ಡಾ. ಮಂಜುಳಾ ಹುಲ್ಲಹಳ್ಳಿ ಅವರು ಕಲ್ಯಾಣ ಎನ್ನುವುದೊಂದು ಭಾವ ಪರಿವೇಶ. ಬದುಕಿನಲ್ಲಿ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದಿರು ಹಳಿಯಲು ಬೇಡ, ತನ್ನ ಬಣ್ಣಿಸಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ದಿ' ಎನ್ನುವ ಬಸವಣ್ಣನವರ ಒಂದು ವಚನವನ್ನು ಅಳವಡಿಸಿಕೊಂಡರೆ ಸಾಕು, ವ್ಯಕ್ತಿತ್ವ ಪರಿಪೂರ್ಣವಾಗುವುದು. ಒಂದು ಸಾಧಾರಣ ಪಟ್ಟಣ ಕಲ್ಯಾಣ. ಅದನ್ನು ಇಂದಿಗೂ ಜಗದ್ವಿಖ್ಯಾತವಾಗುವಂತೆ ಮಾಡಿರುವುದು ಶರಣರ ವಚನಗಳು. ಈ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಇಂದು ನಾವು ಮತ್ತೆ ಕಟ್ಟುವ ಕಲ್ಯಾಣ. ಅಂದು ಕಲ್ಯಾಣದಲ್ಲಿ ಬಸವಣ್ಣನವರು ಮಾಡಿದ ಕೆಲಸ ಕಾರ್ಯಗಳನ್ನು ಇಂದು ಸಾಣೇಹಳ್ಳಿಯಲ್ಲಿ ಪಂಡಿತಾರಾಧ್ಯ ಶ್ರೀಗಳು ಮಾಡುತ್ತಿದ್ದಾರೆಎಂದರು.
ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯರಾದ ಹೊನ್ನೇಶಪ್ಪ, ಸಂಗಾಪುರ್, ಶಿವಕುಮಾರ್ ಮೊದಲಾದ ಅಧ್ಯಾಪಕರಿದ್ದರು. ಶಾಲಾ ಕಾಲೇಜಿನ ವಿದ್ಯಾಥರ್ಿಗಳು, ನೌಕರರು, ಗ್ರಾಮಸ್ಥರು, ಕಲಾವಿದರು ಮುಂತಾದವರು ಸಾಮೂಹಿಕ ಪ್ರಾರ್ಥನೆ, ಶಿವಮಂತ್ರಲೇಖನ, ಧ್ಯಾನ, ಮೌನದಲ್ಲಿ ಭಾಗವಹಿಸಿದ್ದರು. ಹೆಚ್ ಎಸ್ ನಾಗರಾಜ್ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.