ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಸಕಲ ಸಿದ್ಧತೆ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಸಕಲ ಸಿದ್ಧತೆ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ 20 :ಕರ್ನಾಟಕದ ವಿಧಾನಮಂಡಲದ ಚಳಿಗಾಲದ ಅಧಿವೇಶನಡಿ.9ರಿಂದ 20ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದ್ದು, ಈ ಅಧಿವೇಶನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದಅವರು, ಕುಂದಾನಗರಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನ ಹಾಗೂ ವಿಧಾನಮಂಡಲದಜಂಟಿಅಧಿವೇಶನಕ್ಕೆಅಮೇರಿಕಾ ಮಾಜಿಅಧ್ಯಕ್ಷ ಬರಾಕ್‌ಓಬಾಮಾಅಗಮಿಸುತ್ತಿರುವ ಹಿನ್ನಲೆಯಲ್ಲಿ ಪೇಟಿಂಗ್ ಹಾಗೂ ಕ್ಲಿನಿಂಗ್‌ಗೆ ಹೆಚ್ಚು ಹಣ ನೀಡಲಾಗುತ್ತಿದೆಎಂದರು.ಬಾಣಂತಿ ಸಾವು :ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯಕ್ರಮ: ಬೆಳಗಾವಿಯ ಪ್ರತಿಷ್ಠಿತ ಬಿಮ್ಸ್‌ಆಸ್ಪತ್ರೆಯಲ್ಲಿ ಇದೀಗ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಈ ಪ್ರಕರಣವನ್ನುಗಂಭೀರವಾಗಿ ಪರಿಗಣಿಸಲಾಗಿದೆ. ಮೂರುಜನರ ನೇತೃತ್ವದಲ್ಲಿಕಮಿಟಿ ಮಾಡಿತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥ ವೈದ್ಯರ ವಿರುದ್ದ ಪೊಲೀಸ್‌ಕೇಸ್ ದಾಖಲಿಸಿ ನಿರ್ದಾಕ್ಷಿಣ್ಯಕ್ರಮಜರುಗಿಸಲಾಗುವುದುಎಂದರು.ಅದೇರೀತಿಈಗಾಗಲೇ ಜಿಲ್ಲೆ ಸೇರಿದಂತೆಇಡಿರಾಜ್ಯದಲ್ಲಿ ಮಳೆ ಅಬ್ಬರ ನಿಂತಿದ್ದು, ರಸ್ತೆಗಳಲ್ಲಿ ಬಿದ್ದಗುಂಡಿ ಮುಚ್ಚುವ ಕಾರ್ಯ ಶರವೇಗದಲ್ಲಿ ನಡೆಯುತ್ತಿದೆ.ಮಳೆ ಈ ವರ್ಷ ಹೆಚ್ಚು ಸುರಿದಿರುವದರಿಂದಜಿಲ್ಲೆ ಸೇರಿದಂತೆರಾಜ್ಯಾದ್ಯಂತ ರಸ್ತೆಗಳು ಅಲ್ಲಲ್ಲಿ ಹಾಳಾಗಿದೆ.ಈ ಹಾಳಾಗಿರುವ ರಸ್ತೆ ಹಾಗೂ ರಸ್ತೆಗಳಲ್ಲಿ ಬಿದ್ದಗುಂಡಿ ಮುಚ್ಚುವ ಕಾರ್ಯಕ್ಕೆ ಡಿ. 15 ಕೊನೆ ಅವಧಿ ನೀಡಲಾಗಿದೆ.ಈ ರಸ್ತೆಕಾಮಗಾರಿಗೆ ಈಗಾಗಲೇ ಹಣವನ್ನು ನೀಡಲಾಗಿದ್ದು, ಈ ಕಾರ್ಯ ಮುಗಿದ ನಂತರಇನ್ನು ಹೆಚ್ಚಿನ ಹಣನೀಡಲಾಗುವುದುಎಂದು ಹೇಳಿದರು.