ರೈತರೆಲ್ಲರೂ ಒಗ್ಗೂಡಬೇಕು, ರೈತ ಸಂಘಟನೆಗಳು ಪ್ರತಿ ಗ್ರಾಮಗಳಲ್ಲಿ ಆಗಬೇಕು: ಚೂನಪ್ಪ ಪೂಜೇರಿ
All farmers should unite, farmer organizations should be formed in every village: Chunappa Poojeri
ರೈತರೆಲ್ಲರೂ ಒಗ್ಗೂಡಬೇಕು, ರೈತ ಸಂಘಟನೆಗಳು ಪ್ರತಿ ಗ್ರಾಮಗಳಲ್ಲಿ ಆಗಬೇಕು: ಚೂನಪ್ಪ ಪೂಜೇರಿ
ದೇವರ ಹಿಪ್ಪರಗಿ 16: ಈ ನಾಡಿನಲ್ಲಿ ರೈತರ ಹೆಸರಲ್ಲಿ ದಿನನಿತ್ಯ ಸುಲಿಗೆ ಮಾಡಲಾಗುತ್ತಿದೆ, ನಮ್ಮನಾಳುವ ಜನಪ್ರತಿನಿಧಿಗಳು ಕೂಡಾ ಚುನಾವಣಾ ಸಂದರ್ಭದಲ್ಲಿ ನಾವೂ ಕೂಡಾ ರೈತರ ಮಕ್ಕಳು ಎಂದು ಜಾತಿ, ಪಕ್ಷ ಎಂದು ಯಾಮಾರಿಸಿ ಹಣ ಹೆಂಡ ಕೊಟ್ಟು ಆರಿಸಿ ಬಂದ್ದು, ತಾವು ಹೇಳಿರುವ ಎಲ್ಲಾ ಆಶ್ವಾಸನೆಗಳನ್ನ ಮರೆತು ಹಣ ಮಾಡುವುದರಲ್ಲಿ ತೊಡಗುತ್ತಾರೆ, ಆದ್ದರಿಂದ ರೈತರಿಗೆ ನಿಜಾವಾಗಲೂ ನ್ಯಾಯ ಸಿಗಬೇಕಾದರೆ ಎಲ್ಲಾ ರೈತರು ಒಗ್ಗುಡಬೇಕು ಹಾಗೆ ಈ ದೇಶದ ಪ್ರತಿ ಗ್ರಾಮಗಳಲ್ಲಿ ರೈತ ಸಂಘಟನೆಗಳಾಗಬೇಕು ಎಲ್ಲಾ ಮಹಿಳೆಯರು, ಪುರುಷರು ಹಾಗೂ ಯುವಕರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸಂಘಟನೆ ಮಾಡಿದಾಗ ಮಾತ್ರ ರೈತರ ಉದ್ದಾರವಾಗಲಿದೆ ಎಂದು ಚೂನಪ್ಪಾ ಪೂಜೇರಿ ಮಾತನಾಡಿದರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ದೇವರ ಹಿಪ್ಪರಗಿ ತಾಲೂಕಿನ ಹಿಟ್ನಳ್ಳಿ ಗ್ರಾಮ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಅವರು ಮಾತನಾಡಿದರು.
ಕಳೆದ 30 ವರ್ಷಗಳಿಂದ ಕೃಷಿ ಚಟುವಟಿಕೆಗಳ ವೆಚ್ಚುಗಳು ಹತ್ತು ಪಟ್ಟು ಹೆಚ್ಚುತ್ತಲಿವೆ ಆದರೆ ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಯೋಗ್ಯ ಬೆಲೆಗಳಿಲ್ಲದೇ ಮಾಡಿರುವ ಖರ್ಚು ಸಾಲದೇ ಸಾಲದ ಸುಳಿಯಿಂದ ಎದ್ದು ಬರದಾಗದೇ ಪ್ರತಿ ಅರ್ಧಘಂಟೆಗೆ ಒಬ್ಬ ರೈತರು ಆತ್ಮಹತೈ ಮಾಡಿಕೊಳ್ಳುತ್ತಿದ್ದಾರೆ, ಇದು ನಿಲ್ಲ ಬೇಕಾದರೆ ರೈತರೆಲ್ಲರೂ ಒಂದುಗೂಡಬೇಕು ಕೃಷಿಯ ಜೊತೆಗೆ ಉಪ ಕಸಬುಗಳನ್ನು ಮಾಡಿ ದಿನನಿತ್ಯ ಆದಾಯ ಬರುವ ಹಾಗೆ ಮಾಡಿಕೊಳ್ಳಬೇಕು ಅಂದಾಗ ರೈತರು ಸಾಲದಿಂದ ಮುಕ್ತರಾಗುತ್ತಾರೆ, ಅದಕ್ಕಾಗಿ ಯಾವಾಗಲೂ ರೈತ ಸಂಘ ನಿಮ್ಮ ಪರ ಹಗಲು ರಾತ್ರಿ ಕೆಲಸ ಮಾಡಲಿದೆ ಎಂದರು.
ಅನುಗ್ರಹ ಕಣ್ಣಿನ ಆಸ್ಪರ್ತೆಯ ಮುಖ್ಯಸ್ಥರಾದ ಡಾ. ಪ್ರಭುಗೌಡ ಪಾಟೀಲ ಅವರು ಮಾತನಾಡುತ್ತಾ ಈ ದೇಶದಲ್ಲಿ ಪ್ರತಿಯೊಬ್ಬರು ತುತ್ತು ಅನ್ನ ತಿನ್ನುವ ಮುಂಚೆ ಅನ್ನದಾತನನ್ನು ನೆನೆಯಬೇಕು, ಈ ನಾಡಿನಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಬೆವರು ಸುರಿಸಿ ಈ ದೇಶದ ಭದ್ರತೆಗಗಿ ಅನ್ನವನ್ನು ಬೆಳೆಯುತ್ತಿರುವ ರೈತರನ್ನು ಪೂಜಿಸಬೇಕು, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಹೋಗಲಾಡಿಸಬೇಕಾದರೆ ಸಂಘಟಿತರಾಗಬೇಕು ಎಂದರು.
ದೇವರ ಹಿಪ್ಪರಗಿಯ ತಹಶಿಲ್ದಾರರಾದ ಪ್ರಕಾಶ ಸಿಂದಗಿ ಅವರು ಮಾತನಾಡುತ್ತಾ ಈ ದೇಶದ ಬಹುತೆಕ 70 ಅ ಜನ ರೈತರಿದ್ದು, ದೇಶದ ಆರ್ಥಿಕತೆಯ ಮೂಲಭೂನಾದಿ ರೈತರಾಗಿದ್ದು ಅಂತಹ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ರೈತರಿಗೆ ಅನ್ಯಾಯ ಆಗಬಾರದು ಎಂದರೆ ಈ ರೀತಿಯ ಸಂಘಗಳನ್ನು ಮಾಡಿ ಜಾಗೃತಿ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಮಾಡಬೇಕು, ಜೊತೆಗೆ ನಮ್ಮ ಇಲಾಖೆಯಿಂದ ನಾವೂ ಕೂಡಾ ಸದಾ ರೈತರ ಪರವಾಗಿ ಸೇವೆ ಸಲ್ಲಿಸಲು ಸಿದ್ದರಿದ್ದೇವೆ ಎಂದರು.
ಈ ವೇಳೆ ದಿವ್ಯಸಾನಿಧ್ಯವನ್ನು ಮುಳಸಾವಳಗಿಯ ಸಿದ್ಧಾರೂಡ ಮಠದ ದಯಾನಂದ ಸ್ವಾಮಿಜಿ, ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ ಪಡಸಲಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಕುಬಕಡ್ಡಿ, ರಾಜ್ಯ ಕಾರ್ಯಾಧ್ಯಕ್ಷರಾದ ರಾಜು ಪವಾರ, ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ, ಮಹಿಳಾ ತಾಲೂಕಾ ಅಧ್ಯಕ್ಷರಾದ ಚನ್ನಮ್ಮ ಮೇತ್ರಿ ಮಾತನಾಡುತ್ತಾ ರೈತರೆಲ್ಲರೂ ಹೆಚ್ಚು ಹೆಚ್ಚು ಕಾರ್ಯಪ್ರವೃತ್ತರಾಗಬೇಕು, ಸಮಘಟಿತರಾಗಬೇಕು, ಜಾಗೃತಿ ಕಾರ್ಯಕ್ರಮ, ತರಬೇತಿ ಶಿಬಿರ ಮಾಡುತ್ತಾ ಹೊಸ ಹೊಸ ತಂತ್ರಜ್ಞಾನಗಳ ಮಾಹಿತಿ ಪಡೆದುಕೊಂಡು ಸರಕಾರದ ಎಲ್ಲಾ ಯೋಜನೆಗಳನ್ನು ರೈತರ ಮನೆಗೆ ತಲುಪಿಸಲು ರೈತ ಸಂಘಟನೆ ಅವಶ್ಯಕ ಎಂದರು
ಈ ಸಂದರ್ಭದಲ್ಲಿ ಮುದ್ದು ಮಕ್ಕಳಿಂದ ರೈತಗೀತೆಯಾದ ನೇಗಿಲಯೋಗಿ ಗಾಯನಕ್ಕೆ ನೃತ್ಯ ಮಾಡಿದರು, ಇದೇ ವೇಳೆ ನೂರಾರು ರೈತ ಸಂಘದ ಪದಾಧಿಕಾರಿಗಳಿಗೆ ಶಾಲುದೀಕ್ಷೆ ಮಾಡಿ ಗುರುತಿನ ಚೀಟಿ ವಿತರಣೆ ಮಾಡಲಾಯಿತು.
ಈ ವೇಳೆ ಹಿಟ್ನಳ್ಳಿಯ ಈರಯ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು, ಕೃಷಿ ಅಧಿಕಾರಿಗಳು ಶರಣಗೌಡ ಬಿರಾದಾರ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಹಂದ್ರಾಳ, ಗ್ರಾ.ಪಂ ಅಧ್ಯಕ್ಷರಾದ ರತ್ಮಮ್ಮ ಮಾದರ, ಪಿ.ಕೆ.ಪಿ.ಎಸ್ ಅಧ್ಯಕ್ಷರಾದ ಬಗು ಶಂಕರ ರಾಠೋಡ ಕಾಶಿನಾಥ ಬಿರಾದಾರ, ಚಂದ್ರಕಾಂತ ಕುಂಬಾರ ವೇದಿಕೆ ಹಂಚಿಕೊಂಡಿದ್ದರು.
ಈ ವೇಳೆ ಮುಖಂಡರಾದ ಚಂದ್ರಕಾಂತ ಪ್ಯಾಟಿ, ರಾಮನಗೌಡ ಪಾಟೀಲ, ದೇವರ ಹಿಪ್ಪರಗಿ ಅಧ್ಯಕ್ಷರಾದ ಈರ್ಪ ಕುಳೆಕುಮಟಗಿ, ಶಿವಾನಂದಯ್ಯ ಹಿರೇಮಠ, ಶಾನೂರ ನಂದರಗಿ, ಅನಮೇಶ ಜಮಖಂಡಿ, ಆತ್ಮಾನಂದ ಭೈರೋಡಗಿ, ಸಂಪತ್ ಜಮಾದಾರ, ಶಕೀರಾ ಹೆಬ್ಬಾಳ, ಸುನಂದಾ ಸೊನ್ನಳ್ಳಿ, ರಾಮಸಿಂಗ ರಜಪೂತ, ಬಸಗೊಂಡಪ್ಪ ತೇಲಿ, ಮಲ್ಲನಗೌಡ ಬಿರಾದಾರ, ಲಕ್ಕಪ್ಪ ಹೂಗಾರ, ಶಾಂತಯ್ಯ ಹಿರೇಮಠ, ಭೀಮನಘಡ ಬಿರಾದಾರ, ಮಲ್ಲಪ್ಪ ಸುಂಬಡ, ಚಿದಾನಂದ ಮೋಪಗಾರ, ಬಸವರಾಜ ಜೋಗುರ, ಶಿದ್ದಪದಪ ಪೂಜಾರಿ,ಮೈಬೂಬ ಪಟೇಲ, ಮಜಬ್ಬ ಗುಡ್ಡಳ್ಳಿ, ಬೀಬಿಜಾನ ಬಿರಾದಾರ, ಸೇರಿದಂತೆ ಹಿಟ್ನಳ್ಳಿ ಗ್ರಾಮದ ಅನೇಕ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 