ಎಲ್ಲ ಸಮಾಜದವರು ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಿ : ಡಿವೈಎಸ್‌ಪಿ
All communities should celebrate festivals in harmony: DySP
ಜಮಖಂಡಿ 28 : ನಗರದಲ್ಲಿ ಪ್ರತಿವರ್ಷದಂತೆ ಶಾಂತಿ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸುವಂತೆ ಡಿವೈಎಸ್‌ಪಿ, ಸೈಯದ್ ರೋಶನ್ ಜಮೀರ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರ ಶಹರ ಪೊಲೀಸ್ ಠಾಣೆಯ ಆವರಣದಲ್ಲಿ ಏರಿ್ಡಸಿದ್ದ ಹಿಂದು- ಮುಸ್ಲಿಂ ಮುಖಂಡರ ಶಾಂತಿ ಪಾಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ಶಾಂತಿ, ಸುವ್ಯವಸ್ಥೆಗೆ ಪ್ರತಿಕವಾಗಿದೆ, ಎಲ್ಲ ಸಮಾಜದವರು ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸುವ ಪರಿಪಾಠವನ್ನು ಮುಂದುವರೆಯಿಸಿಕೊಂಡು ಹೋಗಬೇಕು, ಕಿಡಿಗೇಡಿಗಳನ್ನು ಮುಖಂಡರು ನಿಯಂತ್ರಿಸುವ ಮೂಲಕ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಸಿಪಿಐ ಮಲ್ಲಪ್ಪ ಮಡ್ಡಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಹಬ್ಬದ ಆಚರಣೆಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಇಲಾಖೆ ಎಚ್ಚರ ವಹಿಸಿದೆ. ಸಾರ್ವಜನಿಕ ಆಚರಣೆಗಳ ಸಂದರ್ಭದಲ್ಲಿ ಕಾನೂನು ಪಾಲಿಸಬೇಕು, ಅನಗತ್ಯವಾದ ಪ್ರಚೋದನಕಾರಿ ನಡುವಳಿಕೆಯನ್ನು ವ್ಯಕ್ತಪಡಿಸಿದರೇ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಲಾಗುವದು, ಸಮಾಜದ ಮುಖಂರು ಹಾಗೂ ಹಿರಿಯರು ಸಹಕಾರದದಿಂದ ರಂಜಾನ ಮತ್ತು ಹೋಳಿ ಹಬ್ಬವನ್ನು ಆಚರಿಸಬೇಕು ಎಂದರು.
ಪಿಎಸ್‌ಐ ಅನೀಲ ಕುಂಬಾರ ಸ್ವಾಗತಿಸಿ, ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಅಂಜುಮನ್ ಇಸ್ಲಂನ ಅಧ್ಯಕ್ಷ ಡಾ, ತೌಫಿಕ್ ಪಾರ್ಥನಳ್ಳಿ ಮುಖಂಡರಾದ ಸಮೀರ ಕಂಗನೊಳ್ಳಿ, ಜಾಮಾಮಸೀದ ಅಧ್ಯಕ್ಷ ಖಾಜಿ, ಇಲಾಹಿ ಝೆಂಡೆ, ಬಂದೇನವಾಜ ಬೇಪಾರಿ, ರಿಯಾಜ ತೆಲಸಂಗ, ಇಮಾಮ ಸಾಬ ಬಾಗವಾನ, ಅಥಣಿಕರ, ಮುಸ್ತಾಕ ಝಂಡೆ, ರಾಜಾಸಾಬ ಮನಳಿ, ಹಿಂದು ಸಮಾಜದ ಮುಖಂಡರಾದ ರಾಕೇಶ ಲಾಡ್,ಅಜೇಯ ಕಡಪಟ್ಟಿ, ಗಣೇಶ ಶಿರಗಣ್ಣವರ, ಪ್ರದೀಪ ಮೆಟಗುಡ್ಡ, ಶ್ರೀಧರ ಕಂಬಿ, ಯಮುನಪ್ಪ ಮೇತ್ರಿ, ಅಜೇಯ ಪಿಸಾಳ, ರಾಜು ಪಾಟೀಲ ಸೇರಿದಂತೆ ಅನೇಕರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 