'ಸತ್ತೆ ಪೆ ಸತ್ತಾ' ರಿಮೇಕ್ ನಲ್ಲಿ ಅಕ್ಷಯ್


ಮುಂಬಯಿ, ಏ 17 ಹಿಂದಿಯ 'ಸತ್ತೆ ಪೆ ಸತ್ತಾ' ಈಗಾಗಲೇ ಪ್ರೇಕ್ಷಕರ ಮನ ರಂಜಿಸುವಲ್ಲಿ ಯಶಸ್ವಿಯಾಗಿದೆ. ಈಗ ಇದೇ ಚಿತ್ರದ ಅವತರಣಿಕೆ ಸಿದ್ಧಗೊಳ್ಳುತ್ತಿದ್ದು ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯಿಸುವ ಸಾಧ್ಯತೆ ಇದೆ. 1982ರಲ್ಲಿ ತೆರೆಕಂಡ 'ಸತ್ತೆ ಪೆ ಸತ್ತಾ' ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂಡ್ರೀಮ್ ಗಲರ್್ ಹೇಮಾ ಮಾಲಿನಿ ನಟಿಸಿದ್ದರು. ಈಗ ಅವತರಣಿಕೆ ಚಿತ್ರ ಹೊರತರುವ ಜವಾಬ್ದಾರಿ ನಿದರ್ೆಶಕರಾದ ಫರಾ ಖಾನ್ ಹಾಗೂ ರೋಹಿತ್ ಶೆಟ್ಟಿ ಹೊತ್ತುಕೊಂಡಿದ್ದಾರೆ. ಚಿತ್ರದ ಮುಖ್ಯ ಪಾತ್ರಕ್ಕಾಗಿ ಈಗಾಗಲೇ ಅಕ್ಷಯ್ ಕುಮಾರ್ ಅವರಿಗೆ ಆಫರ್ ನೀಡಲಾಗಿದೆಯಂತೆ. ಇನ್ನು, ಹೇಮಾ ಮಾಲಿನಿ ಪಾತ್ರಕ್ಕೆ ಕನ್ನಡತಿ ದೀಪಿಕಾ ಪಡುಕೋಣೆ ಅವರನ್ನು ಕರೆ ತರುವ ಆಲೋಚನೆ ಇದೆಯಂತೆ.  ಸದ್ಯ ಅಕ್ಷಯ್ ಕುಮಾರ್ ರೋಹಿತ್ ಶೆಟ್ಟಿ ನಿದರ್ೆಶಿಸುತ್ತಿರುವ 'ಸೂರ್ಯವಂಶಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಫರಾ ಖಾನ್ ಅವರೊಂದಿಗೆ 'ತೀಸ್ ಮಾರ್ ಖಾನ್' ಚಿತ್ರದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ. 
ಅವತರಣಿಕೆ ಚಿತ್ರದಲ್ಲಿಯೂ ಅಮಿತಾಭ್ ಬಚ್ಚನ್ ಹಾಗೂ ಹೇಮಾ ಮಾಲಿನಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಮಾತುಗಳು ಬಿಟೌನ್ ನಿಂದ ಕೇಳಿಬರುತ್ತಿವೆ. 
  'ಸತ್ತೆ ಪೆ ಸತ್ತಾ', ಅಮೆರಿಕದ ಮ್ಯೂಜಿಕಲ್ 'ಸೇವನ್ ಬ್ರೈಡ್ಸ್ ಫಾರ್ ಸೇವನ್ ಬ್ರದರ್ಸ' ಚಿತ್ರದ ರಿಮೇಕ್ ಆಗಿದ್ದು, ರಾಜ್ ಎನ್ ಸಿಪ್ಪಿ ನಿದರ್ೆಶಿಸಿದ್ದರು. ಇಂದಿಗೂ ಪ್ರೇಕ್ಷಕರು ಈ ಚಿತ್ರವನ್ನು ತುಂಬಾ ಇಷ್ಟಪಡುತ್ತಾರೆ.