ಅಖಂಡ ಕರ್ನಾಟಕ ಕನಕ ಸಾರಿಗೆ ನೌಕರರ ಸಂಘ ಹಾಗೂ ಶ್ರೀ ರೇವಣಸಿದ್ದೇಶ್ವರ ಮಹಾಮಠ ಜಂಟಿಯಾಗಿ ಸಹಕಾರ ಪತ್ತಿನ ಸಂಘ ಹಾಗೂ ಸಮಾಜದ ಸಂಘಟನಾ ಮಹಾಸಭೆ
ಧಾರವಾಡ/ಹುಬ್ಬಳ್ಳಿ 27: ಕುರುಬ ಸಮುದಾಯವು ಅತೀ ಪ್ರಾಚೀನ ಧರ್ಮವಾಗಿದ್ದು ಕಲೆ ಸಂಸ್ಕೃತಿ ಕಾಯಕ ಧಾರ್ಮಿಕ ಸಾಹಿತ್ಯಕ ಶೈಕ್ಷಣಿಕ ಜನಪದೀಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದೆ.ಸಾಮಾಜಿಕವಾಗಿ ಸಧೃಢಗೊಳಿಸಲು ಅಗತ್ಯವಿದ್ದು ಅದಕ್ಕಾಗಿ ಸಾರಿಗೆ ಕುರುಬ ನೌಕರರು ಹೆಚ್ಚು ಶ್ರಮಿಸಿದ್ದು ಸಹಕಾರ ರಂಗದಲ್ಲಿ ಕೊಡುಗೆ ನೀಡಿದ ಸಹಕಾರ ಪಿತಾಮಹ ಸಿದ್ದನಗೌಡ ಪಾಟೀಲರ ಸ್ಪೂರ್ತಿಯಿಂದ ಸಹಕಾರ ಪತ್ತಿನ ಸಂಘ ಸ್ಥಾಪಿಸುತ್ತಿದ್ದು ನನಗಂತೂ ಅತ್ಯಂತ ಸಂತಸ ತಂದಿದೆ ಎಂದು ಮನಸೂರ ರೇವಣಸಿದ್ದೇಶ್ವರ ಮಹಾಮಠದ ಪೀಠಾಧ್ಯಕ್ಷ ಪರಮಪೂಜ್ಯ ಡಾ:ಬಸವರಾಜ ದೇವರು ಶ್ರೀಗಳು ಇಲ್ಲಿ ನುಡಿದರು.
ಮನಸೂರ ಮಹಾಮಠದ ಯಾತ್ರಿನಿವಾಸದ ಸಭಾಂಗಣದಲ್ಲಿ ಅಖಂಡ ಕರ್ನಾಟಕ ರಸ್ತೆ ಸಾರಿಗೆಯ 4 ನಿಗಮಗಳ ಕನಕ ನೌಕರರ ಸಮೂಹ ವೇದಿಕೆ ಹಾಗೂ ರೇವಣಸಿದ್ದೇಶ್ವರ ಮಹಾಮಠದ ಜಂಟಿಯಾಗಿ ಏರಿ್ಡಸಿದ ಚಿಂತನ ಮಹಾಸಭೆಯನ್ನು ಕನಕಜ್ಯೋತಿ ಹೊತ್ತಿಸಿ ಮಾತನಾಡಿದ ಶ್ರೀಗಳು ಸಂಘಟನೆ ಬಹಳ ಮುಖ್ಯವಾಗಿ ಒಗ್ಗಟ್ಟಿನಿಂದ ಸಹಕಾರ ಪತ್ತಿನ ಸಂಘ ಸ್ಥಾಪಿಸಿ ನೂರಾರು ಶಾಖೆಗಳನ್ನು ಹೊಂದಿ ಕುರುಬ ನೌಕರರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿ ನಿಮ್ಮೊಂದಿಗೆ ಸದಾ ನಾನು ಇದ್ದೇನೆ ನಿಮ್ಮೆಲ್ಲರ ಶ್ರೇಯೋಭಿವೃದ್ಧಿಗೆ ದುಡಿಯುತ್ತೇನೆ ಎಂದು ಶ್ರೀಗಳು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಿ ಆರ್ ಕಿರಣಗಿ ಅವರು ಮಾತನಾಡಿ ನಮ್ಮ ಮುಂದೆ ಗುರುಗಳಿದ್ದಾರೆ ಅವರ ಆಶೀರ್ವಾದ ಇದೆ ನಾವು ನೀವುಗಳು ಮುಂದೆ ಬರಬೇಕು ಇಂತಹ ಪುಣ್ಯ ಕ್ಷೇತ್ರಗಳಲ್ಲಿ ಸಭೆ ಮಾಡಿದ್ದು ಸಾರ್ಥಕವಾಗುತ್ತದೆ. ತಂದೆ ತಾಯಿ ಮತ್ತು ಸಮಾಜದ ಋಣ ತೀರಿಸಬೇಕು ಎಂದು ಕಿವಿ ಮಾತು ಹೇಳಿದರು. ಎಸ್ ಎಚ್ ಜೋಗಿನ ಮಾತನಾಡಿ ಮೊದಲು ನಾವು ನೀವುಗಳು ದುಶ್ಚಟಗಳಿಗೆ ಬಲಿಯಾಗದೆ ನಮ್ಮ ಸಮಾಜದ ಸಲುವಾಗಿ ಶ್ರಮಿಸಬೇಕು ಮುಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗ ಕೊಡಿಸೋಣ ಎಂದು ಅಭಿಪ್ರಾಯಪಟ್ಟರು.ಸಹಕಾರ ಪತ್ತಿನ ಸಂಘದ ಉದ್ದೇಶಗಳು: ನಮ್ಮ ಸಮಾಜದ ನೌಕರರಿಗೆ ಮತ್ತು ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸೌಲಭ್ಯ ಒದಗಿಸುವುದು, ಸಮಾಜದ ನೌಕರರನ್ನು ಒಗ್ಗೂಡಿಸುವುದು, ಕುಟುಂಬದ ಆರ್ಥಿಕವಾಗಿ ಸಧೃಢಗೊಳಿಸುವುದು, ಸಮಾಜದ ನಿವೃತ್ತ ನೌಕರರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿವುದು, ಕರ್ತವ್ಯ ನಿರತ ಸಮಾಜದ ನೌಕರರು ಆಕಸ್ಮಿಕ ಮರಣ ಹೊಂದಿದರೆ ಮರಣ ಪರಿಹಾರ ನಿಧಿ, ಸಮಾಜದ ಮಹಿಳೆಯರ ಮಹಿಳಾ ಸಬಲೀಕರಣ, ಪ್ರತಿಭಾನ್ವಿತ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕುಟುಂಬದ ಸದಸ್ಯರಿಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಸಂದರ್ಭದಲ್ಲಿ ಅವರಿಗೆ ಧನ ಸಹಾಯ ಇಷ್ಟೆಲ್ಲ ಇದರ ಬಗ್ಗೆ ಪ್ರಾಸ್ತಾವಿಕವಾಗಿ ಹಾಲೇಶ ಪಿ ಸಿ ದಾವಣಗೆರೆ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಯಕ್ಕಡಿ ವಹಿಸಿದ್ದರು. ರೇಣುಕಾ ಬೀಳಗಿ ವಂದಿಸಿದರು. ಪ್ರಾರಂಭಕ್ಕೆ ಕನಕದಾಸರ ಹಾಗೂ ರೇವಣಸಿದ್ದೇಶ್ವರರ ಭಾವಚಿತ್ರಕ್ಕೆ ಪೂಜ್ಯರಿಂದ ಪುಷ್ಪಾರ್ಚನೆ ಮಾಡಲಾಯಿತು. ಮಹಾಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಮುಂದೆ ಅನ್ನಮಹಾ ಪ್ರಸಾದ ನಡೆಯಿತು.