ಆಹೇರಿ ಗಂಗಾಧರ ಮುತ್ಯಾನ ಭವ್ಯ ಜಾತ್ರೆ 151 ಹಂಡೆಯ ಬಜ್ಜಿ ಪಲ್ಯೆ: ಚರಗ ಚೆಲ್ಲಿ ರೈತನ ಸಿರಿ ಸಮೃದ್ಧಿಗೆ ಪ್ರಾರ್ಥನೆ
Aheri Gangadhar Mutyana Bhavi Yatra 151 pots of bajji palye: Charaga chelli prays for the prosperit
ಸಿಂದಗಿ 16: ತಾಲೂಕಿನ ಆಹೇರಿ ಗ್ರಾಮದಲ್ಲಿರುವ ಗಂಗಾಧರ ಮುತ್ಯಾನ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷ ಭಕ್ತರ ದರುಶನದಿಂದ ಜಾತ್ರೆ ಭವ್ಯವಾಗಿ ಜರುಗಿತು. ಸಿಂದಗಿ ತಾಲೂಕಿನ ಆಹೇರಿ ಗ್ರಾಮದಲ್ಲಿರುವ ಗಂಗಾಧರೇಶ್ವರ ದೇವಾಲಯಕ್ಕೆ ಪಲ್ಲಕ್ಕಿಯನ್ನು ಜಯಘೋಷಗಳನ್ನು ಕೂಗುತ್ತಾ ಸ್ವಾಗತ ಮಾಡಿಕೊಳ್ಳಲಾಯಿತು. ನಂತರ ಅಗ್ಗಿ ಹಾಯುವ ಕಾರ್ಯ ನಡೆಯಿತು. ದೇವಸ್ಥಾನದ ಆವರಣದಲ್ಲಿ ಚರಗ ಚೆಲ್ಲಿ ರೈತನ ಸಿರಿ ಸಮೃದ್ಧಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಈ ಬಾರಿ 151 ಹಂಡೆಯ ಬಜ್ಜಿ ಪಲ್ಯೆ ಮಾಡಲಾಯಿತು.
ಗುರು ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾದ ಭಕ್ತರು. ಈ ಜಾತ್ರೆಯ ವಿಶೇಷವೆನೆಂದರೆ ವಿವಿಧ ದಾನ್ಯಗಳಿಂದ ತಯ್ಯಾರಿಸಿದ ಭಜ್ಜಿ ಪಲ್ಯೆ ಮತ್ತು ರೊಟ್ಟಿಗೆ ಭಕ್ತರೆಲ್ಲರೂ ಬಾಯಿ ಚಪ್ಪರಿಸಿ ಪ್ರಸಾದ ರೂಪದಲ್ಲಿ ಸ್ವೀಕರಿಸಿ ಮಲ್ಲಯ್ಯನ ಏಳ ಕೋಟೆ ಏಳ ಕೋಟೆಯ ಉಗೆ ಎಂದು ಗಂಗಾಧರೇಶ್ವರ ಕೃಪೆಗೆ ಪಾತ್ರರಾಗುತ್ತಾರೆ. ಕಮಿಟಿಯ ಭಾಗಪ್ಪಗೌಡ ಪಾಟೀಲ, ಶಾಂತಗೌಡ ಬಿರಾದಾರ, ಗಂಗಾಧರ ಚಿಂಚೊಳ್ಳಿ, ಸಿದ್ದು ಚಿಂಚೊಳ್ಳಿ, ರಮಜಾನಸಾಬ ದುಮ್ಮದ್ರಿ, ಗೌಡಪ್ಪಗೌಡ ಪಾಟೀಲ, ಬಸಣ್ಣಸಾಹು ಕಡಗಂಚಿ, ಗಂಗಣ್ಣ ಕಡಗಂಚಿ, ಸಿದ್ದಣ್ಣ.ಬಿ.ಕಡಗಂಚಿ ಸೇರಿದಂತೆ ಇತರರು ಜಾತ್ರೆಯ ನೇತೃತ್ವವನ್ನು ವಹಿಸಿಕೊಂಡಿದ್ದರು.
ಜಾತ್ರಾ ಮಹೋತ್ಸವದಲ್ಲಿ ಆಸಂಗಿಹಾಳ ಶ್ರೀಮಠದ ಶಂಕರಾನಂದ ಮಹಾರಾಜರು, ಸೊನ್ನದ ಶ್ರೀಮಠದ ಡಾ.ಶಿವಾನಂದ ಸ್ವಾಮೀಜಿ, ಶಾಸಕ ಅಶೊಕ ಮನಗೂಳಿ, ಮಾಜಿ ಶಾಸಕ ರಮೇಶ ಭೂನಸೂರ, ಬ್ಲಾಕ್ ಕಾಂಗ್ರೆಸ್ ಪುರಸಭೆ ಮಾಜಿ ಅಧ್ಯಕ್ಷ ಶಾಂತವೀರ ಬಿರಾದಾರ, ತಾಲೂಕಾಧ್ಯಕ್ಷ ಸುರೇಶ ಪೂಜಾರಿ, ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಕಾನಿಪ ನಿಕಟಪೂರ್ವ ಅಧ್ಯಕ್ಷ ಆನಂದ ಶಾಬಾದಿ, ಕಾನಿಪ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಪೀರೂ ಕೆರೂರ, ಶರಣಗೌಡ ಬಿರಾದಾರ ಬೆನಕೊಟಗಿ, ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಯಶವಂತ್ರಾಯಗೌಡ ರೋಗಿ, ಪಂಡಿತ ಯಂಪುರೆ, ಕಸಾಪ ತಾಲೂಕಾದ್ಯಕ್ಷ ವಾಯ್.ಸಿ.ಮಯೂರ, ಮಲ್ಲಿಕಾರ್ಜುನ ಅಲ್ಲಾಪುರ, ಸೇರಿದಂತೆ ವಿವಿಧ ತಾಲೂಕಿನ, ಜಿಲ್ಲೆಯ ಮತ್ತು ರಾಜ್ಯದ ಭಕ್ತರು ಭಾಗವಹಿಸಿ ಗುರುವಿನ ದರುಶನ ಪಡೆದು ಕೃತಾರ್ತರಾದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 