ದೇಶಿ ತಳಿಗಳ ಸಂರಕ್ಷಣೆಗೆ ಕೃಷಿ ಇಲಾಖೆ ಉತ್ತೇಜನ
Agriculture Department promotes conservation of indigenous breeds
ಗದಗ, ಸೆ. 29: ರಾಜ್ಯ ಸರ್ಕಾರವು ಕೃಷಿ ಇಲಾಖೆಯ ಮೂಲಕ 2024-25ನೇ ಸಾಲಿನಿಂದ ದೇಶಿ ತಳಿಗಳ ಸಂರಕ್ಷಣೆ ಹಾಗೂ ಉತ್ತೇಜನ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು, ಗದಗ ಜಿಲ್ಲೆಯಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ.
ಆಯಾ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ದೇಶಿ ತಳಿಗಳನ್ನು ಗುರುತಿಸಿ, ಕಣ್ಮರೆಯಾಗುತ್ತಿರುವ ತಳಿಗಳನ್ನು ಸಂರಕ್ಷಿಸಿ, ಅವುಗಳ ಅಭಿವೃದ್ಧಿ ಹಾಗೂ ಬಿಡುಗಡೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರೈತ ಸಮುದಾಯದಲ್ಲಿ ಸಾಂಪ್ರದಾಯಿಕ, ಪಾರಂಪರಿಕ ಹಾಗೂ ಜಾನಪದ ಪ್ರಭೇದಗಳೆಂದು ಕರೆಯಲ್ಪಡುವ ದೇಶಿ ತಳಿಗಳು ಸ್ಥಳೀಯ ಕೃಷಿ ಪದ್ಧತಿಯಿಂದ ಅಭಿವೃದ್ಧಿಗೊಂಡಿವೆ.
ದೇಶಿ ತಳಿಗಳು ನಿರ್ದಿಷ್ಟ ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುವ ಸಾಮರ್ಥ್ಯ ಹೊಂದಿದ್ದು, ಮಣ್ಣಿನಿಂದ ಕಡಿಮೆ ಪ್ರಮಾಣದ ಪೋಷಕಾಂಶ ಪಡೆದುಕೊಂಡರೂ ಉತ್ತಮವಾಗಿ ಬೆಳೆಯುತ್ತವೆ. ರೋಗ ಹಾಗೂ ಬರ ನಿರೋಧಕ ಶಕ್ತಿಯೊಂದಿಗೆ ಕಡಿಮೆ ಕೀಟಬಾಧೆ ಹೊಂದಿರುವ ಇವು ಉತ್ತಮ ಇಳುವರಿ ನೀಡುತ್ತವೆ. ಅಲ್ಲದೆ, ಹೆಚ್ಚಿನ ನಾರಿನಾಂಶ ಹಾಗೂ ಓಷಧೀಯ ಗುಣಗಳನ್ನು ಹೊಂದಿದ್ದು, ಪೌಷ್ಟಿಕಾಂಶದ ಪ್ರಮುಖ ಮೂಲವಾಗಿವೆ.
ಸ್ಥಳೀಯ ಪರಿಸರಕ್ಕೆ ಸೂಕ್ತವಾಗಿರುವುದರಿಂದ ಕೆಲ ರೈತರು ಮಾತ್ರ ದೇಶಿ ತಳಿಗಳ ಕೃಷಿಯನ್ನು ತಲೆತಲಾಂತರಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಕಣ್ಮರೆಯಾಗುತ್ತಿರುವ ಇಂತಹ 52 ದೇಶಿ ತಳಿಗಳನ್ನು ಗುರುತಿಸಿ, ಅಗತ್ಯ ಪ್ರಮಾಣದ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಕೃಷಿ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಬೀಜ ಬ್ಯಾಂಕ್ಗೆ ಕಳುಹಿಸಲಾಗಿದೆ.
ಅಂಗಾರಕ ಸಂಕಷ್ಟಿ : ನೀಲಗಾರ ಗಣೇಶ ದರ್ಶನಕ್ಕೆ ಬೀಗಿ ಬಂದೋಬಸ್ತ್ : ಭಕ್ತರ ಸಂಖ್ಯೆ ಇಳಿಮುಖ
ಹಳೇ ವೈಷಮ್ಯ: ವ್ಯಕ್ತಿಯ ಅಪಹರಣ, ಕೊಲೆ: ನಾಲ್ವರು ಆರೋಪಿಗಳ ಬಂಧನ
ಐವರು ಪೋಲಿಸರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ನಾಗರಿಕರ ಪ್ರತಿಭಟನೆ, ನೀಲಗಾರ ಗಣಪತಿ ದರ್ಶನ ರದ್ದು
ಗಣೇಶ ವಿಸರ್ಜನೆ ವೇಳೆ ದುರಂತ : ಬೆಳಗಾವಿಯ ಯುವಕ ನೀರಲ್ಲಿ ಮುಳುಗಿ ಸಾವು
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ 