ಸಂಬರಗಿ 20: ಕಳೆದ ಆರು ತಿಂಗಳಿಂದ ಹರಿಯುತ್ತಿರುವ ಅಗ್ರಾಣಿ ನದಿಗೆ ಬರುವ ನೀರು ಸ್ಥಗಿತಗೊಂಡಿರುವ ಕಾರಣ ಅಗ್ರಾಣಿ ನದಿ ಬತ್ತಿ ಹೋಗಿದ್ದು, ರೈತರಿಗೆ ಫೆಬ್ರುವರಿಯಲ್ಲಿ ರೈತರಿಗೆ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಿಸಬೇಕಾಗಿದೆ. ರೈತರು ನೀರಿನ ಅಭಾವದಿಂದ ಚಿಂತಾಗ್ರಸ್ಥರಾಗಿದ್ದಾರೆ.
ಕಳೆದ 30 ವರ್ಷದ ನಂತರ ಮಹಾರಾಷ್ಟ್ರದ ತಾಕಾರಿ ಮಹಿಷಾಳ ಕಾಲುವೆ ನೀರನ್ನು ಕರ್ನಾಟಕ ಗಡಿಯ ಕೆಲವೆ ಅಂತರದಲ್ಲಿ ನೀರು ಹರಿಯುತ್ತಿದ್ದು, ಆ ನೀರನ್ನು ಮಾನವಿಯತೆ ದೃಷ್ಟಿಯಿಂದ ಅಗ್ರಾಣಿ ನದಿಗೆ 6 ತಿಂಗಳು ನೀರು ಹರಿದಿದೆ. ಆ ವೇಳೆ ಹಿಂಗಾರಿ ಹಾಗೂ ಮುಂಗಾರಿ ಬೆಳೆಗೆ ಅನುಕೂಲವಾಗಿತ್ತು. ಸಧ್ಯದ ಪರಿಸ್ಥಿತಿಯಲ್ಲಿ ಅಗ್ರಾಣಿ ನದಿ ಪೂರ್ಣ ಬತ್ತಿ ಹೋಗಿದ್ದ ಕಾರಣ ಜಾನುವಾರುಗಳಿಗೆ ಟ್ಯಾಂಕರ್ ಮುಖಾಂತರ ನೀರು ಸರಬರಜು ಮಾಡಬೇಕೆಂದು ರೈತರು ಅಗ್ರಹಿಸಿದ್ದಾರೆ.
ಅಗ್ರಾಣಿ ನದಿ ಮಹಾರಾಷ್ಟ್ರ ಗಡಿಯಿಂದ ಕರ್ನಾಟಕ ಕೃಷ್ಣಾ ನದಿಯವರೆಗೆ 55 ಕಿ.ಮೀ. ನದಿ ಹರಿದಿದ್ದು, ಮಹಾರಾಷ್ಟ್ರ ಸರಕಾರ ಮಾನವಿಯತೆ ದೃಷ್ಠಿಯಿಂದ ಕುಡಿಯಲು ಅಗ್ರಾಣಿ ನದಿಗೆ ನೀರು ಬಿಡುತ್ತಾರೆ. ಈ ವರ್ಷ ಸಹ ನೀರು ಬಿಡಬೇಕೆಂದು ಅಗ್ರಾಣಿ ನದಿ ತೀರದ ರೈತರು ಮಹಾರಾಷ್ಟ್ರ ಸರಕಾರಕ್ಕೆ ವಿನಂತಿ ಮೂಲಕ ತಿಳಿಸಿದ್ದಾರೆ.
ಅಗ್ರಾಣಿ ನದಿ ತೀರದಲ್ಲಿ ಖೋತವಾಡಿ, ಪಾಂಡೆಗಾಂವ, ಖಿಳೇಗಾಂವ, ಶಿರೂರ, ಸಂಬರಗಿ, ಆಜೂರ, ನಾಗನೂರ ಪಿ.ಎ, ತಾಂವಶಿ, ಕಲ್ಲೋತ್ತಿ, ಶಿವನೂರ, ಮಾಯನಟ್ಟಿ, ಅಬ್ಬಿಹಾಳ ಈ ಗ್ರಾಮಗಳು ಬರುತ್ತವೆ. ಈ ಗ್ರಾಮದಲ್ಲಿ ಫೆಬ್ರುವರಿದಿಂದ ನೀರಿನ ಸಮಸ್ಯೆ ಎದ್ದು ಕಾಣುತ್ತದೆ. ಕೆಲವು ಗ್ರಾಮದಲ್ಲಿ ಜಲಜೀವನ ಮಶೀನ್ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದ್ದಾರೆ. ನೀರು ಇಲ್ಲದೆ ಆ ಮಶಿನ್‌ಗಳು ತುಕ್ಕು ಹಿಡಿಯುವ ಸ್ಥಿತಿಯಲ್ಲಿ ಬಂದಿವೆ. ಸರಕರ ಈ ಕಡೆಗೆ ಗಮನ ಹರಿಸಿ ಗಡಿ ಭಾಗದ ಗ್ರಾಮಗಳ ಸಮಸ್ಯೆಗಳನ್ನು ಪರ್ಯಾಯಗೊಳಿಸಬೇಕೆಂದು ರೈತರು ಅಗ್ರಹಿಸಿದ್ದಾರೆ.
ಈ ಕುರಿತು ಇವರನ್ನು ಸಂಪರ್ಕಿಸಿದಾಗ ಕಳೆದ ವರ್ಷ ಫೆಬ್ರುವರಿ ಕೊನೆಯ ವಾರದಲ್ಲಿ ಮಾನವೀಯತೆಯ ದೃಷ್ಠಿಯಿಂದ ತಾಕಾರಿ ಮಹಿಷಾಳ ಕಾಲುವೆ ನೀರನ್ನು ಅಗ್ರಾಣಿ ನದಿಗೆ ಬಿಟ್ಟು ಜಾನುವಾರುಗಳ ನೀರಿನ ಸಮಸ್ಯೆಯನ್ನು ನೀಗಿಸಿದ್ದರು. ಗಡಿ ಭಾಗದಿಂದ ಶೀಘ್ರ ಸಾಂಗಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ಮಹಾರಾಷ್ಟ್ರದ ನೀರಾವರಿ ಸಚಿವರಿಗೆ ನೀರಿಗಾಗಿ ಮನವಿ ನೀಡಲಾಗುವುದು.