ಧಾರವಾಡ 21: ದೇಶಿಯ ವಸ್ತುಗಳನ್ನು ಉಪಯೋಗಿಸಿ (ನೈಟ್ರಿಫಿಕೇಶನ್ನು) ಸಾರಜನಕವನ್ನು ವ್ಯಯವಾಗುವುದನ್ನು ಕಡಿಮೆಗೊಳಿಸಲು ಯೂರಿಯಾ ಗೊಬ್ಬರವನ್ನು ಬೇವಿನಿಂದ ಲೇಪನ ಮಾಡುವುಲ್ಲಿ ಬಾರತೀಯ ವಿಜ್ಣಾನಿಗಳು ಸಫಲರಾಗಿದ್ದಾರೆ. ಬೇವು ಲೇಪಿತ ದೊಡ್ಡ ಹರಳು ಗಾತ್ರದ ಯೂರಿಯಾದಲ್ಲಿ ಸಣ್ಣ ಹರಳುಗಳ ಯೂರಿಯಾಕ್ಕೆ ಹೋಲಿಸಿದಾಗ ಪೋಷಕಾಂಶಗಳ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಅಂದರೆ. ಒಂದು ಕ್ವಿಂಟಾಲ ಯೂರಿಯಾದಿಂದ 46 ಕಿಲೋ ಸಾರಜನಕವು ಬೆಳೆಗಳಿಗೆ ಲಬ್ಯವಿರುತ್ತದೆ. ಇದು ಸಣ್ಣ ಮತ್ತು ದೊಡ್ಡ ಗಾತ್ರದ ಹರಳುಗಳಿರುವ ಯೂರಿಯಾಗಳೆರಡಕ್ಕೂ ಅನ್ವಯವಾಗುತ್ತದೆ ಎಂದು ಜಂಟಿ ಕೃಷಿ ನಿದರ್ೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇವು ಲೇಪಿತ ಯೂರಿಯಾದ ಲಾಭಗಳು
ದೊಡ್ಡ ಹರಳುಳ್ಳ ಬೇವು ಲೇಪಿತ ಯೂರಿಯಾ ಬಳಸುವುದರಿಂದ ಗೊಬ್ಬರದಲ್ಲಿರುವ ಸಾರಜನಕ ಅಂಶವು ಬೆಳೆಗಳಿಗೆ ನಿಧಾನವಾಗಿ ಹಾಗೂ ಸಂಪೂರ್ಣವಾಗಿ ಲಭ್ಯವಾಗಲಿದೆ. ಈ ರೀತಿ ಧೀರ್ಘಕಾಲದವರಿಗೆ ಸಾರಜನಕವು ಬೆಳೆಗೆ ಸಿಗುವುದರಿಂದ ಬೆಳೆಗಳ ಬೆಳವಣಿಗೆ ಉತ್ತಮಗೂಳ್ಳುವುದಲ್ಲದೆ ಕಾಳುಗಳ ಸಂಖ್ಯೆ ಅಧಿಕಗೊಂಡು ಕಾಳುಗಳು ದೊರೆಯುತ್ತವೆ. ಇದರಿಂದ ಭೆಳೆಗಳಿಗೆ ಪದೇ ಪದೇ ಸಾರಜನಕ ನೀಡುವುದನ್ನು ಕಡಿಮೆಗೊಳಿಸಬಹುದು. ಅದ್ದರಿಂದ ರೈತರು ಹರಳಿನ ಗಾತ್ರದ ಮೇಲೆ ರಸಗೊಬ್ಬರ ಬಳಸುವಲ್ಲಿ ಇರುವ ಹಿಂಜರಿಕೆಯನ್ನು ಬಿಡಬೇಕು.
ಕಡಿಮೆ ಆದ್ರ್ರತೆ: ಸಾಮಾನ್ಯ ಯೂರಿಯಾಗೆ ಹೋಲಿಸಿದರೆ ಬೇವು ಲೇಪಿತ ಯೂರಿಯಾದ ಆದ್ರ್ರತಾ ಗುಣ ಮಟ್ಟ ಕಡಿಮೆ ಇರುವುದರಿಂದ ಚೀಲದಲ್ಲಿಯೇ ಗಟ್ಟಿಯಾಗುವುದಿಲ್ಲ.
ಕಡಿಮೆ ಕರಗುವಿಕೆ: ಮಣ್ಣಿಗೆ ಸೇರಿಸಿದ ಬೇವು ಲೇಪಿತ ಯೂರಿಯಾ ಮಣ್ನಿನ ತೇವಾಂಶದ ಜೊತೆ ಬೇಗ ಕರಗದೇ, ರೂಪಾಂತರ ಹೊಂದದೇ ಬಹಳ ದಿನಗಳವರೆಗೆ ಬೆಳೆಗಳಿಗೆ ದೊರೆಯುತ್ತದೆ.
ಕಡಿಮೆ ಪುಡಿಯಾಗುವಿಕೆ: ಸಾಮಾನ್ಯ ಯೂರಿಯಾವು ಉತ್ಫಾದನೆ ಮತ್ತು ಸಾಗಾಣಿಕೆ ಸಮಯದಲ್ಲಿ ಪುಡಿಯಾಗುವ ಸಾದ್ಯತೆಗಳಿದ್ದು ಜಮೀನಿಗೆ ಹಾಕುವ ಸಮಯದಲ್ಲಿ ಗಾಳಿಗೆ ಹಾರಿಹೋಗಿ ನಷ್ಠವಾಗುವ ಸಾದ್ಯತೆಗಳಿರುತ್ತವೆ. ಈ ಸಮಸ್ಯೆಯು ಬೇವು ಲೇಪಿತ ಯೂರಿಯಾದಲ್ಲಿ ಕಡಿಮೆಯಿರುತ್ತದೆ.
ಬೇವಿನೆಣ್ಣೆಯಲ್ಲಿರುವ ಕ್ರೀಮಿನಾಶಕ ಗುಣದಿಂದ ಮಣ್ಣಿನಲ್ಲಿರುವ ಜಂತು ಹುಳುಗಳು, ಗೆದ್ದಲುಗಳು, ಹಾಗು ಇತರೆ ಮಣ್ಣಿನ ಪೀಡೆಗಳನ್ನು ನಿಯಂತ್ರಿಸಬಹುದು. ಹೀಗಾಗಿ ಬೇವು ಲೇಪಿತ ಯೂರಿಯಾ ರೈತರಿಗೆ ವರದಾನವಾಗಿದ್ದು ಹರಳು ಗಾತ್ರ ದೊಡ್ಡದಾಗಿದ್ದರೂ ನಿಸ್ಸಂಶಯವಾಗಿ ರೈತರು ಇದನ್ನು ಬಳಸಿ ಬೇಸಾಯದ ಖಚರ್ು ಕಡಿತಗೊಳಿಸಿಕೊಳ್ಳುವುದರ ಜೊತೆಗೆ ಉತ್ತಮ ಇಳುವರಿ ಪಡೆಯಬಹುದು ಎಂದು ಜಂಟಿ ನಿದರ್ೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.