ಹಾವೇರಿ11: ಬೇಸಿಗೆಯ ಕುಡಿಯುವ ನೀರಿನ ಬವಣೆ ನೀಗಿಸಲು ಖಾಸಗಿ ಕೊಳವೆಬಾವಿಗಳನ್ನು ಗುರುತಿಸುವುದು ಹಾಗೂ ಗ್ರಾಮವಾರು ಕೊರೆಸಿರುವ ಕೊಳವೆಬಾವಿಗಳ ಹಾಗೂ ಅಳವಡಿಸಿರುವ ಮೋಟರ್ಗಳ ಸ್ಥಿಗತಿಗಳ ಕುರಿತಂತೆ ಮಾಹಿತಿ ಸಂಗ್ರಹಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ತುಂಗಭದ್ರಾ ನದಿಯಲ್ಲಿ ನೀರಿನ ಹರವು ಕಡಿಮೆಯಾಗಿದೆ. ಬೇಸಿಗೆ ಕಾರಣ ನೀರಿನ ಸಮಸ್ಯೆ ಎದುರಾಗುವ ಮುನ್ನ ಕುಡಿಯುವ ನೀರಿಗಾಗಿ ಜಲಾಶಯದಿಂದ ನೀರು ಹರಿಸುವಂತೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಳ್ಳದಂತೆ ಕ್ರಮವಹಿಸಬೇಕು. ಜಿಲ್ಲೆಯ ಕೆಲವೆಡೆ ವಿದ್ಯುತ್ ಬಾಕಿ ಕಾರಣ ಶುದ್ಧ ನೀರಿನ ಘಟಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಮಾಹಿತಿ ದೊರೆತಿದೆ. ತಕ್ಷಣ ಪರಿಶೀಲನೆನಡೆಸಿ ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಾಟರ್ಮನ್ಗಳ ನಿರ್ಲಕ್ಷ್ಯದಿಂದ ಕೆಲವೆಡೆ ಮೋಟರ್ ಆನ್ಮಾಡಿ ಟ್ಯಾಂಕ್ ತುಂಬಿ ಹೊರಚಲ್ಲಿದರೂ ಆಪ್ ಮಾಡುವುದಿಲ್ಲ. ಇದರಿಂದ ನೀರು ಪೋಲಾಗುವುದಲ್ಲದೆ ವಿದ್ಯುತ್ ವ್ಯರ್ಥವಾಗುತ್ತದೆ, ಮೋಟರ್ಗಳು ಹಾಳಾಗುತ್ತವೆ.
ಈ ಕುರಿತಂತೆ ಎಲ್ಲ ವಾಟರ್ಮನ್ಗಳಿಗೂ ತರಬೇತಿ ಅವಶ್ಯವಾಗಿರುತ್ತದೆ. ತಾಲೂಕುವಾರು ತರಬೇತಿಗಳನ್ನು ಆಯೋಜಿಸಿ ನೀರು ಪೋಲು ಮಾಡುವುದನ್ನು ತಡೆಯುವಂತೆ ಮುಖ್ಯ ಕಾರ್ಯನಿವರ್ಾಹಣಾಧಿಕಾರಗಳಿಗೆ ಸಲಹೆ ನೀಡಿದರು.
ಜಾನುವಾರುಗಳಿಗೆ, ಪಕ್ಷಿಗಳಿಗೆ ಕುಡಿಯುವ ನೀರು ಪೂರೈಸುವ ಕುರಿತಂತೆ ಚಿಕ್ಕ ಚಿಕ್ಕ ತೊಟ್ಟಿಗಳನ್ನು ಅಲ್ಲಲ್ಲಿ ಇರಿಸುವ ಕುರಿತಂತೆ ಕ್ರಮವಹಿಸಬೇಕು. ಈ ತೊಟ್ಟಿಗೆ ಗ್ರಾಮ ಪಂಚಾಯತಿ ವತಿಯಿಂದ ನಿತ್ಯ ನೀರು ತುಂಬಿಸುವ ಕೆಲಸವಾಗಬೇಕು. ಈ ಕುರಿತಂತೆ ಅಧಿಕಾರಿಗಳಿಗೆ ಜಿ.ಪಂ.ಅಧ್ಯಕ್ಷರು ಸೂಚನೆ ನೀಡಿದರು.
ವಿವಿಧ ಇಲಾಖೆಗಳ ಕಟ್ಟಡಗಳನ್ನು ನಿಮರ್ಿಸಲು ನಿಮರ್ಿತಿ ಕೇಂದ್ರ, ಕೆ.ಆರ್.ಐ.ಡಿ.ಎಲ್., ಜಿಲ್ಲಾ ಪಂಚಾಯತ್ ಏಜೆನ್ಸಿಗಳಿಗೆ ನೀಡಲಾಗಿದೆ. ಆದರೆ ಬಹಳಷ್ಟು ಕಟ್ಟಡಗಳ ಪ್ರಗತಿ, ಟೆಂಡರ್ ಪ್ರಕ್ರಿಯೆ ಸಹ ಮುಗಿದಿಲ್ಲ. ಆಥರ್ಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿರುವ ಈ ಅವಧಿಯಲ್ಲಿ ತ್ವರಿತವಾಗಿ ಕಟ್ಟಡಗಳನ್ನು ಪೂರ್ಣಗೊಳಿಸಬೇಕಾಗಿದೆ.
ಕೇವಲ ಏಜೆನ್ಸಿ ನಿಮರ್ಾಣ ಮಾಡುತ್ತಾರೆ ಎಂದು ಸುಮ್ಮನೆ ಕುಳಿತುಕೊಳ್ಳದೆ ಇಲಾಖೆ ಎಲ್ಲ ಅಧಿಕಾರಿಗಳು ಏಜೆನ್ಸಿಗಳ ಮೇಲೆ ಒತ್ತಡ ಹಾಕಿ ಕಾಮಗಾರಿ ಮುಗಿಸಬೇಕು. ಕಟ್ಟಡದ ಹಣ ವ್ಯಪಗತವಾದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲೆಯ ಸ್ವಯಂ ಸೇವಾ ಸಂಘಗಳು ನಿರ್ವಹಿಸುತ್ತಿರುವ ಅನಾಥ ಕುಟೀರಗಳ ಪೈಕಿ ಕೆಲ ಸಂಸ್ಥೆಗಳಲ್ಲಿ ಹಾಜರಾತಿ ಕಡಿಮೆ ಇದ್ದರೂ ಸುಳ್ಳು ಹಾಜರಾತಿ ತೋರಿಸಿ ಅನುದಾನ ಪಡೆಯುತ್ತಿರುವ ದೂರುಗಳು ಬಂದಿವೆ. ಈ ಕುರಿತಂತೆ ಖುದ್ದಾಗಿ ಪರಿಶೀಲನೆ ನಡೆಸಿ ಅನುದಾನ ದುರ್ಬಳಕೆಯಾಗದಂತೆ ಕ್ರಮವಹಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗಿರುತ್ತಿರುವ ಆಹಾರ ಪದಾರ್ಥ ಕಳಪೆಯಾಗಿವೆ ಎಂಬ ದೂರುಗಳು ನಿರಂತರವಾಗಿ ಬರುತ್ತಿವೆ. ಈ ಕುರಿತಂತೆ ಸಮರ್ಪಕವಾಗಿ ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ನನ್ನ ಎದುರಿಗೆ ಕಳಪೆ ಆಹಾರದ ಆಹಾರಗಳ ಮಾದರಿಗಳನ್ನು ತಂದು ತೋರಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಕೆ.ಲೀಲಾವತಿ, ಪ್ರಭಾರ ಉಪ ಕಾರ್ಯದಶರ್ಿ ಮಂಜುನಾಥ್, ಸಿ.ಪಿ.ಓ. ಮೀಸೆ, ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಾರುತಿ ರಾಠೋಡ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಮೇಶ ದುಗ್ಗತ್ತಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ನೀಲಮ್ಮ ಚವ್ಹಾಣ ಉಪಸ್ಥಿತರಿದ್ದರು.