ಸೇವಾಲಾಲರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ : ಅಜ್ಜಂಪೀರ ಖಾದ್ರಿ

Adopt Seva Lal's ideals in life : Ajjampira Qadri

ಸೇವಾಲಾಲರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ  : ಅಜ್ಜಂಪೀರ ಖಾದ್ರಿ  

  ಶಿಗ್ಗಾವಿ 15: ಸೇವಾಲಾಲರು ತಮ್ಮ ಪವಾಡಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುತ್ತಾ ಲೋಕಕಲ್ಯಾಣಕ್ಕಾಗಿ ತಮ್ಮನ್ನು ತಾವೇ ತೊಡಗಿಸಿಕೊಂಡ ಮಹಾನ್ ಸಂತರಾಗಿದ್ದರು ಎಂದು ಹೆಸ್ಕಾಂ ಅಧ್ಯಕ್ಷ ಅಜಂಪಿರ್ ಖಾದ್ರಿ ಹೇಳಿದರು.ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಸಂತ ಸೇವಾಲಾಲ ಮಹಾರಾಜರ 286 ನೇ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು 18 ನೇ ಶತಮಾನದಲ್ಲಿ ಲಂಬಾಣಿ ಸಮಾಜದ ಜನರ ಹಕ್ಕಿಗಾಗಿ ಹೋರಾಟವನ್ನು ಮಾಡಿದ ಸೇವಾಲಾಲ್ ಮಹಾರಾಜರ ಆದರ್ಶಗಳನ್ನು ಇಂದಿನ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೇಕೆಂದು ಹೇಳಿದರು.   

 ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ, ಬಂಜಾರ ಸಮಾಜದ ತಾಲೂಕಾದ್ಯಕ್ಷ ಅಣ್ಣಪ್ಪ ಲಮಾಣಿ ಮಾತನಾಡಿದರು.ತಹಸೀಲ್ದಾರ ರವಿ ಕೊರವರ, ಎಸ್ ಎಫ್ ಮಣಕಟ್ಟಿ, ಗುಡ್ಡಪ್ಪ ಜಲದಿ, ಡಾ. ಮಲ್ಲೇಶಪ್ಪ ಹರಿಜನ, ಶಶಿಕಾಂತ ರಾಠೋಡ, ಕಾಳಪ್ಪ ಬಡಿಗೇರಿ, ಡಾಕಪ್ಪ ಲಮಾಣಿ, ಸೀನಪ್ಪ ಲಮಾಣಿ, ಕೃಷ್ಣಪ್ಪ ಲಮಾಣಿ, ಪ್ರಕಾಶ ಪೂಜಾರಿ, ಶ್ರೀಕಾಂತ ಲಮಾಣಿ, ಹರ್ಜಪ್ಪ ಲಮಾಣಿ, ಮಂಜುನಾಥ ಮಣ್ಣಣ್ಣವರ, ರವಿ ಕೋಣಪ್ಪನವರ, ಟೊಪಣ್ಣ ಲಮಾಣಿ, ಪ್ರಭು ಬಿದರಗಡ್ಡಿ, ಪರಶುರಾಮ ಅಂಗಡಿ ಸೇರಿದಂತೆ ಬಂಜಾರ ಸಮುದಾಯದ ವಿವಿಧ ಮುಖಂಡರು ಇದ್ದರು.