ವಿಶ್ವವಿದ್ಯಾಲಯಕ್ಕೆ ಅಗತ್ಯ ಸೌಲಭ್ಯಕ್ಕೆ ಒಪ್ಪಿಗೆ: ಕುಮಾರಸ್ವಾಮಿ

ಬಾಗಲಕೋಟೆ 24: ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ದೇಶದಲ್ಲಿಯೇ ಮಾದರಿಯಾಗಿದ್ದು, ಸದ್ಯ ಅವಶ್ಯವಿರುವ ಭೂಮಿ ಹಾಗೂ ನೀರು ಪೂರೈಸುವ ಕಾರ್ಯ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾಸ್ವಾಮಿ ಭರವಸೆ ನೀಡಿದರು.

ಉದ್ಯಾನಗಿರಿಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿಂದು ನಡೆದ ಎರಡನೇ ದಿನದ ತೋಟಗಾರಿಕೆ ಮೇಳವನ್ನು ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು ಸತತವಾಗಿ ಬರಗಾಲದಿಂದ ರೈತ ಬಳಲುತ್ತಿದ್ದು, ರೈತರಲ್ಲಿ ಆತ್ಮಸ್ಥೈರ್ಯ ತುಂಬಿಸುವ ನಿಟ್ಟಿನಲ್ಲಿ ಕೃಷಿಯಲ್ಲಿ ವಿನೂತನ ಮಾದರಿಯ ಪದ್ದತಿಯನ್ನು ಅಳವಡಿಸಿಕೊಳ್ಳುವಂತೆ ಮಾಡಬೇಕು. ತೋಟಗಾರಿಕೆ ವಿವಿಗೆ ಬೇಕಾದ ಅಗತ್ಯ ನೀರು ಹಾಗೂ 1000 ಎಕರೆ ಜಮೀನು ಖರೀದಿಗೆ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು. 

ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾದ ಆಲಮಟ್ಟಿ ಹಿನ್ನೀರನ್ನು ಬಳಸಿಕೊಳ್ಳಲು 2-3 ದಿನಗಳ ಒಳಗಾಗಿ ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಇದಕ್ಕೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡಾಗುವುದು. ಅಲ್ಲೇ ಮುಂದಿನ ಜನವರಿ ತಿಂಗಳಿನ ಮೊದಲ ವಾರದಲ್ಲಿ ಜಿಲ್ಲೆಗೆ ಬರುವ ಮೂಲಕ ಬೆಳಿಗ್ಗೆಯಿಂದ ಸಂಜೆವರೆಗೆ ಇದ್ದು, ಜಿಲ್ಲೆಯ ಸಂಪೂರ್ಣ ಅಭಿವೃದ್ದಿಗೆ ಯೋಜನೆಗಳ ಜಾರಿಗೆ ತರಲು ಶ್ರಮಿಸಲಾಗುವುದೆಂದರು. ನಮ್ಮ ಆಡಳಿತದಲ್ಲಿ ಉತ್ತರ ಕನರ್ಾಟಕಕ್ಕೆ ಯಾವುದೇ ರೀತಿಯ ಅನ್ಯಾಯವಾಗಲು ಬಿಡುವದಿಲ್ಲವೆಂದ ಅವರು ಈ ಮೊದಲು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿಯೇ ಪ್ರಥಮ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದ್ದೇನು. ಈ ಬಾರಿ ಕೂಡಾ ತಮ್ಮೇಲ್ಲರ ಸಹಕಾರದಿಂದ ಮುಖ್ಯಮಂತ್ರಿಯಾಗಿದ್ದು, ರೈತರಿಗಾಗಿ ಹಾಗೂ ನೀರಾವರಿಗಾಗಿ ಎಲ್ಲ ರೀತಿಯ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು. 

ತೋವಿವಿಗೆ ಅಗತ್ಯವಿರುವ ನೀರು ಹಾಗೂ ಜಮೀನನ್ನು ನೀಡುವ ಮೂಲಕ ವಿಜ್ಞಾನಿಗಳು ಕಂಡುಹಿಡಿದ ಸಂಶೋಧನೆಗಳು ಕೇವಲ ಪ್ರಾಯೋಗಿಕವಾಗದೇ ಈ ಬಾಗದ ಪ್ರತಿಯೊಬ್ಬರ ರೈತರ ಜಮೀನಿಗೂ ಅದರ ಉಪಯೋಗವಾಗುವಂತೆ ಮಾಡಬೇಕು. ರೈತರು ಕೂಡಾ ಗ್ರಾಮೀಣ ಮಟ್ಟದ ಪ್ರಗತಿಪರ ರೈತರು, ದೊಡ್ಡ ರೈತರು, ಚಿಕ್ಕ ಹಿಡುವಳಿದಾರರು ಸೇರಿಕೊಂಡು ತಾವು ಬೆಳೆಯುವ ಬೆಳೆಗಳ ಬಗ್ಗೆ ಸುಧೀಘ್ರವಾಗಿ ಚಚರ್ಿಸಿ ನೀರನ್ನು ಸದ್ಬಳಕೆ ಮಾಡಿಕೊಂಡು ಹನಿ ನೀವಾರಿ, ತುಂತುರು ನೀರಾವರಿ ಉಪಯೋಗಿಸಿಕೊಂಡು ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆಯುವಂತಹ ಬೆಳೆ ಬೆಳೆದು ಆಥರ್ಿಕವಾಗಿ ಅಭಿವೃದ್ದಿ ಹೊಂದುವ ಮೂಲಕ ಮುಂದಿನ ದಿನಗಳಲ್ಲಿ ಸಾಲಗಾರರೆಂಬ ಹಣೆಪಟ್ಟಿಯಿಂದ ಹೊರಬರಬೇಕೆಂದು ರೈತರಲ್ಲಿ ಆತ್ಮಸ್ಥೈರ್ಯ ತುಂಬಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಮಾತನಾಡಿ, ರಾಷ್ಟ್ರದಲ್ಲಿಯೇ ಮಾದರಿಯಾದ ಈ ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಸರಕಾರ ಅನೇಕ ಸೌಲಭ್ಯಗಳನ್ನು ಒದಗಿಸಿದರೂ ಕೂಡಾ ಅದು ಇನ್ನು ಕಡಿಮೆಯಾಗಿದ್ದು, ದೇಶದಲ್ಲಿಯೇ ಮಾದರಿಯಾಗುವಂತಹ ಮತ್ತು ಈ ಭಾಗದ ಅತೀ ಹೆಚ್ಚು ನೀರು ಸಂಪನ್ಮೂಲಗಳಾದ ತುಂಗಭದ್ರಾ ಮತ್ತು ಕೃಷ್ಣಾ ಹಿನ್ನೀರನ್ನು ಉಪಯೋಗಿಸಿ 3 ರಿಂದ 4 ಸಾವಿರ ಎಕರೆ ಜಮೀನುನಲ್ಲಿ ಕೃಷಿಗೆ ಸಂಬಂಧಿಸಿದಂತೆ ಹೈನುಗಾರಿಕೆ, ಪಶುಸಂಗೋಪನ, ಕೃಷಿ, ತೋಟಗಾರಿಕೆ, ತರಕಾರಿ ಮತ್ತು ವಿವಿಧ ಹೂ ಬೆಳೆಗಳ ಒಂದೇ ಸೂರಿನಡಿಯಲ್ಲಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು ಎಂದ ಅವರು ಈ ಭಾಗದಲ್ಲಿ ಅತೀ ಹೆಚ್ಚು ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಯುತ್ತಿರುವದರಿಂದ ಅದಕ್ಕೆ ತಗಲುವ ರೋಗ ನಿಯಂತ್ರಣ ಇದುವರೆಗೂ ಸಾಧ್ಯವಾಗುತ್ತಿಲ್ಲ. ತೋವಿವಿಯ ವಿಜ್ಞಾನಿಗಳು ಅಂತಹ ರೈತರ ತೋಟಗಳಿಗೆ ಭೇಟಿ ನೀಡಿ ರೋಗ ನಿಯಂತ್ರಣಗೊಳಿಸುವಂತಹ ಕಾರ್ಯ ಮಾಡಬೇಕೆಂದರು.

ತೋಟಗಾರಿಕೆ ಸಚಿವರಾದ ಎಂ.ಸಿ.ಮನಗೂಳಿ ತೋಟಗಾರಿಕೆಯಿಂದ ಬೆಳೆ ವಿವಿಧ ಹಣ್ಣುಗಳಿಂದ ನಾನಾ ಬಗೆಯ ಪಾನಿಯಗಳನ್ನು ಉತ್ಪಾದಿಸುವದರೊಂದಿಗೆ ಆಥರ್ಿಕವಾಗಿ ಅಭಿವೃದ್ದಿ ಹೊಂದಬೇಕು. ಈಗಾಗಲೇ ರಾಜ್ಯ ಸರಕಾರ ರಾಜ್ಯದ 4 ಜಿಲ್ಲೆಗಳಾದ ವಿಜಯಪುರ, ಕಾರವಾರ, ಕೋಲಾರ ಹಾಗೂ ಹುಬ್ಬಳ್ಳಿಗಳಲ್ಲಿ ಇಂತಹ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅದರಿಂದ ದೊರೆಯುವ ಪ್ರಯೋಜಗಳನ್ನು ಈ ಭಾಗದ ರೈತರು ಪಡೆದುಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಎಲ್ಲ ರೀತಿಯ ಅನುಕೂಲಗಳು ದೊರೆಯುತ್ತಿದ್ದರು ಕೂಡಾ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ. 1419 ಹುದ್ದೆಗಳ ಪೈಕಿ 759 ಸಿಬ್ಬಂದಿ ಇದ್ದು, ಉಳಿದ 680 ಹುದ್ದೆಗಳನ್ನು ಕೂಡಲೇ ಭತರ್ಿ ಮಾಡಿಕೊಳ್ಳಬೇಕೆಂದು ತಿಳಿಸಿದರು. ಕಳೆದ ನಾಲ್ಕು ವರ್ಷಗಳಿಂದ ಬೇರೆ ವಿಶ್ವವಿದ್ಯಾಲಯಕ್ಕೆ ಹೋಲಿಸಿದಾಗ ಅತೀ ಕಡಿಮೆ ಅನುದಾನ ನೀಡಲಾಗಿದ್ದು, 125 ಕೋಟಿ ರೂ.ಗಳ ಅನುದಾನ ನೀಡಬೇಕೆಂದರು. ಮಿನಿ ಇಸ್ರೇಲ್ ಮಾದರಿಯ ಕೃಷಿಯನ್ನು ಇಲ್ಲಿ ಸ್ಥಾಪಿಸಬೇಕು. ಅಲ್ಲದೇ ಇಸ್ರೇಲ್ ಮಾದರಿಯ ಕೃಷಿ ಯೋಜನೆ 8 ಜಿಲ್ಲೆ ಒಳಪಟ್ಟಂತೆ ಬಾಗಲಕೋಟೆಯನ್ನು 9ನೇ ಜಿಲ್ಲೆಯನ್ನಾಗಿ ಸೇರಿಸಬೇಕೆಂದು. ಜಿಲ್ಲೆಯ ಮುಳುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದರು.

ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ ಪ್ರಾಸ್ತಾವಿಕವಾಗಿ ಮಾತನಾಡಿ ತೋಟಗಾರಿಕೆ ಕಾರ್ಯಗೊಂಡಾಗಿನಿಂದ ಇಲ್ಲಿಯವರೆ ನಡೆದು ಬಂದ ದಾರಿಯನ್ನು ವಿವರಿಸುತ್ತಾ. ಬೇಕಾದ ಅಗತ್ಯತೆಯನ್ನು ದೊರಕಿಸಿಕೊಡಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ರೈತ ಉತ್ಪಾದಕ ಸಂಸ್ಥೆಯ ಉತ್ಕೃಷ್ಟ ಕೇಂದ್ರದ ವೆಬ್ಸೈಟ್ಗೆ ಚಾಲನೆ, ವಿವಿಧ ಪ್ರಕಟಣೆಗಳು, ತಂತ್ರಜ್ಞಾನಗಳ ಸಿಡಿ ಬಿಡುಗಡೆ, ಬೀದರನಲ್ಲಿ ಕೈಗೊಂಡ ಭೂಸವರ್ೆಕ್ಷಣೆ ಹಾಗೂ ಭೂ ಸಂಪನ್ಮೂಲಗಳ ವರದಿ ಪತ್ರವನ್ನು ರೈತರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಹನಮಂತ ನಿರಾಣಿ, ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾ.ಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಉಪವಿಭಾಗಾಧಿಕಾರಿ ಎಚ್.ಜಯ, ತೋವಿವಿಯ ವಿಸ್ತರಣಾ ನಿದರ್ೇಶಕ ವಾಯ್.ಕೆ.ಕೋಟಿಕಲ್ ಸೇರಿದಂತೆ ಇತರರು ಉಪಸ್ಥತರಿದ್ದರು.