ಗುರುವಿನ ಕೃಪೆಯಿಂದ ಸಾಧನೆ ಸಾಧ್ಯ: ಯಲಬುರ್ಗಾ ಶ್ರೀ
Achievement is possible with the grace of the Guru: Yelaburga Sri
ಗುರುವಿನ ಕೃಪೆಯಿಂದ ಸಾಧನೆ ಸಾಧ್ಯ: ಯಲಬುರ್ಗಾ ಶ್ರೀ
ಕುಕನೂರ 12 : ಮನುಷ್ಯ ತನ್ನ ಜೀವನದಲ್ಲಿ ಗುರುವಿನ ಕೃಪೆಯಿಂದ ಮಾತ್ರ ಎತ್ತರಕ್ಕೆ ಬೆಳೆಯಲು ಸಾದ್ಯ ಎಂದು ಯಲಬುರ್ಗಾದ ಶ್ರ ಷ ಬ್ರ ಬಸವಲಿಂಗೇಶ್ವರ ಸ್ವಾಮೀಜೀ ಹೇಳಿದರು.
ಅವರು ಕುಕನೂರ ತಾಲ್ಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ ಅನ್ನದಾನೀಶ್ವರರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡುತ್ತಾ ಶ್ರೀಮಠದ 9 ನೇ ಜಗದ್ಗುರುಗಳು ಪಂಡಿತರಾಗಿ, ಭವರೋಗ ವೈದ್ಯರಾಗಿ ಜೀವನ ನಡೆಸಿದವರು ತಮ್ಮ ಬದುಕಿನುದ್ದಕ್ಕೂ ಹಲವಾರು ಪವಾಡಗಳನ್ನ ಮಾಡುತ್ತಾ ಲೀಲಾಮೂರ್ತಿಯಾಗಿ ಅಪಾರ ಭಕ್ತರನ್ನ ಸಂಪಾದಿಸಿದವರು ಎಂದರು.
ನಂತರ ಮಾತನಾಡಿದ ಶ್ರೀಮಠದ ಪೂಜ್ಯ ಮಹಾದೇವ ಸ್ವಾಮೀಜಿ ನಮ್ಮ ಮಠದ ಗುರುಗಳು ತಳಕಲ್ ಗ್ರಾಮದ ಜನರಿಗೆ 4 ಎಕರೆ ಭೂಮಿ ನೀಡಿದ ಭೂ ದಾನಿಗಳು, ಅವರ ಕಾಲದಲ್ಲಿ ಶ್ರೀಮಠ ಹಲವಾರು ಧರ್ಮಪರ ಕಾರ್ಯಗಳಿಗೆ ದಾನ ಧರ್ಮ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ, ಹಲವಾರು ಮಠ ಮಂದಿರಗಳ ಕಲ್ಯಾಣಕ್ಕೆ ಶ್ರೀಮಠದ ಗುರುಗಳು ಶ್ರಮಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗುರುಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ರುದ್ರಾಬಿಷೇಕ, ಮಹಾದಾಸೋಹ ನಡೆಸಲಾಯಿತು. ಮಲ್ಲಪ್ಪ ಗೋರಿ, ಮುದಿಯಪ್ಪ ಯೋಗೆಮ್ಮನವರ, ರಾಮಣ್ಣ ನಿಟ್ಟಲಿ, ಸೋಮಣ್ಣ ಕರ್ಜಗಿ, ಬಸವರಾಜ ಬ್ಯಾಳಿ, ಸುರೇಶ, ಪಕ್ಕಪ್ಪ ಅಳವಂಡಿ, ಮಂಜುನಾಥ, ನವೀನಕುಮಾರ, ಹನುಮಂತ, ಕಲ್ಲಯ್ಯ ಸೇರಿದಂತೆ ಹಲವಾರು ಭಕ್ತರು ಇದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 