ಕೃಷಿಯಲ್ಲಿ ಸಾಧನೆ : ಬೆಳೆಯಲ್ಲಿ ಯಶಸ್ಸು ಕಂಡ ಯುವ ರೈತ ಮಲ್ಲನಗೌಡ
Achievement in agriculture: Young farmer Mallana Gowda achieves success in cultivation
ದೇವರಹಿಪ್ಪರಗಿ 12: ಇಂದಿನ ತಂತ್ರಜ್ಞಾನದ ಯುಗದಲ್ಲಿ ವ್ಯವಸಾಯ ಅಂದ್ರೇ ಬಹಳಷ್ಟು ಜನ ಮೂಗು ತಿರುಗಿಸಿಕೊಂಡು ಹೋಗ್ತಾರೆ. ಆದರೆ, ಇಲ್ಲೊಬ್ಬ ಯುವ ರೈತ ಕೃಷಿಯಲ್ಲಿಯೇ ಲಕ್ಷ, ಲಕ್ಷ ಸಂಪಾದಿಸಿ ಕೃಷಿ ಅಂದ್ರೇ ಕಷ್ಟ ಅಲ್ಲ ಎಂದು ತೋರಿಸಿದ್ದಾನೆ.ಹೌದು, ತಾಲೂಕಿನ ಬಮ್ಮನಜೋಗಿ ಗ್ರಾಮದ ರೈತ ಮಲ್ಲನಗೌಡ ಜಿ. ಬಿರಾದಾರ ತೋಟಗಾರಿಕೆ ಬೆಳೆಗಳಿಂದಲೇ ಕೈ ತುಂಬಾ ಸಂಪಾದಿಸುತ್ತಿದ್ದಾರೆ. ಕೃಷಿಯಲ್ಲಿಯೇ ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಿದ್ದ ಮಲ್ಲನಗೌಡ ಜಿ. ಬಿರಾದಾರ ಪಿಯುಸಿ ಬಳಿಕ ಶಿಕ್ಷಣ ಮುಂದುವರಿಸಲಿಲ್ಲ. 2014ರಿಂದ ತಮಗಿರುವ ಜಮೀನಿನಲ್ಲಿ ಅವರ ತಂದೆ ಹಾಗೂ ಸಹೋದರನ ಸಹಾಯ ಪಡೆದು ವ್ಯವಸಾಯ ಮಾಡಲು ಪ್ರಾರಂಭಿಸಿದರು.ತಮ್ಮ ಜಮೀನಿನಲ್ಲಿ ವೈವಿಧ್ಯಮಯ ಬೆಳೆ ಬೆಳೆಯುವ ಜತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಯಂಹ ಉಪ ಕಸುಬುಗಳ ಮೂಲಕ ಆದಾಯ ಗಳಿಸುತ್ತಿದ್ದಾರೆ.
ಹೊಸ ಹೊಸ ವಾಣಿಜ್ಯ ಬೆಳೆಗಳನ್ನು ಬೆಳೆದು ತೋರಿಸಿ ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ. ತಂದೆಯ ಮಾರ್ಗದರ್ಶನದಲ್ಲಿ ಜಮೀನಿನಲ್ಲಿ ತೋಟಗಾರಿಕೆ ಗಿಡಗಳಾದ ತೆಂಗು, ನಿಂಬೆ, ಪೇರಲ,ಮಾವು, ಸಪೋಟ, ನೆಲ್ಲಿಕಾಯಿ, ಬಾಳೆ, ಕಿತ್ತಳೆ, ದ್ರಾಕ್ಷಿ, ರಾಮಫಲ, ಕರಿಬೇವನ್ನೂ ಬೆಳೆದಿದ್ದಾರೆ. ಜೊತೆಗೆ ಹಸುಗಳನ್ನು ಸಾಕಿರುವ ಇವರು ಪ್ರತಿನಿತ್ಯ ನೂರಾರು ಲೀಟರ್ ಹಾಲನ್ನು ಮಾರಾಟ ಮಾಡುತ್ತಾ ಈ ಭಾಗದ ಮಾದರಿ ಯುವ ರೈತರಾಗಿದ್ದಾರೆ. ತೋಟದೊಳಗೊಂದು ಸುತ್ತು ಬದುಗಳಲ್ಲಿ ವಿವಿಧ ಮರ, ಹಣ್ಣಿನ ಗಿಡಗಳ ಸಾಲು, ಕಣ್ಣು ಹಾಯಿಸಿದಷ್ಟು ಕಾಣುವ ತೋಟಗಾರಿಕೆಯ ಗಿಡಗಳ ಸಾಲು. ಅಲ್ಲಲ್ಲಿ ತೆಂಗು, ಸಪೋಟ, ಪೇರಲ, ಮಾವು, ಕಿತ್ತಳೆ, ನಿಂಬೆ ಕೂಡ ಬೆಳೆದಿದ್ದಾರೆ. ತೋಟದಲ್ಲಿ ಸಾವಯವ, ನರ್ಸರಿ ಮೂಲಕ ಹಲವಾರು ತೋಟಗಾರಿಕಾ ಬೆಳೆಗಳನ್ನು ಮಾರಾಟ ಮಾಡುತ್ತಾ ಯುವ ರೈತರಿಗೆ ಮಾದರಿಯಾಗಿದ್ದಾರೆ.-ಮಹಾಂತೇಶ ಬಿರಾದಾರ. ಯುವ ಮುಖಂಡರು ದೇವರಹಿಪ್ಪರಗಿ .
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 