ಹೊಟೇಲ್ಗೆ ಆಕಸ್ಮಿಕ ಬೆಂಕಿ ಲಕ್ಷಾಂತರ ರೂ ಹಾನಿ

ಲೋಕದರ್ಶನ ವರದಿ

ಅಂಕೋಲಾ12 : ಬಸ್ ನಿಲ್ದಾಣದ ಎದುರಿನ 'ಶ್ರೀಕೃಷ್ಣ ವಿಲಾಸ' ಹೊಟೇಲ್ನಲಿರುವ ಸಿಲೆಂಡರ್ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಹಾನಿಯಾಗಿರುವ ಘಟನೆ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿದೆ. 

ಮಂಜುನಾಥ ವಿವೇಕಾನಂದ ನಾಯ್ಕ ಮಾಲಿಕತ್ವದ ಹೊಟೇಲ್ನ ಅಡುಗೆ ಕೋಣೆಯಲ್ಲಿರುವ ಎರಡು ಸಿಲೆಂಡರ್ಗೆ ಆಕಸ್ಮಿಕ ಬೆಂಕಿ ತಗುಲಿ ಸ್ಥಳೀಯರಲ್ಲಿ ಆಂತಕ ಸೃಷ್ಟಿಸಿತ್ತು. ಹೊಟೇಲ್ ಸಿಬ್ಬಂದಿಗಳಾದ ಪ್ರಮೋದ ಗುನಗಾ ಮತ್ತು ಸಹೋದರರು, ಸ್ಥಳೀಯ ರಿಕ್ಷಾ ಯುನಿಯನ್ ಪ್ರಮುಖರು, ಗ್ರಾ.ಪಂ. ಸದಸ್ಯ ಮಾದೇವ ಗೌಡ, ವಿನಾಯಕ ನಾಯ್ಕ ತೆಂಕಣಕೇರಿ, ಕಿಶೋರ ನಾಯ್ಕ, ಮಹೇಶ ನಾಯ್ಕ, ನಂದಾ ನಾಯ್ಕ ಮತ್ತಿತರರು ಬೆಂಕಿ ನಂದಿಸಲು ಪ್ರಯತ್ನಿಸಿ, ಹೊಟೇಲ್ ಒಳಗಡೆಯಿರುವ ಹೆಚ್ಚುವರಿ ಸಿಲೆಂಡರ್ಗಳನ್ನು ಕೂಡಲೇ ಹೊರ ಗಡೆ ಸಾಗಿಸಿದರು. ಹೊಟೇಲ್ ಮಾಲಕ ಮಂಜುನಾಥ ನಾಯ್ಕ ಇವರು ಹೊಟೇಲ್ನಲ್ಲಿ ಮುಂಜಾಗ್ರತೆಗಾಗಿ ತಂದಿಡಲಾದ ಅಗ್ನಿಶಮನ (ಗ್ಯಾಸ್) ಬಳಸಿ ಬೆಂಕಿ ನಂದಿಸಲು ಪ್ರಯತ್ನಪಟ್ಟರೂ, ಒಳಗಡೆಯ ಬೆಂಕಿಯ ಖಾವಿಗೆ ಮುಂದೆ ಹೋಗಲಾಗದೆ ನಿರೀಕ್ಷತ ಮಟ್ಟದ ಫಲಿತಾಂಶ ಸಾಧ್ಯವಾಗಲಿಲ್ಲಾ. ಆ ವೇಳೆಗಾಗಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದರು. ಅದೃಷ್ಟವಶಾತ್ ಸಿಲೆಂಡರ್ ಸ್ಪೋಟಗೊಳ್ಳದೆ ಕಟ್ಟಡ ಮತ್ತು ಪ್ರಾಣ ಹಾನಿ ಸಂಭವಿಸಿಲ್ಲಾ.  

ಹೊಟೇಲ್ನಲ್ಲಿರುವ ತಿಂಡಿತಿನಿಸುಗಳು, ಪಾತ್ರೆ ಪೈಪ್ಲೈನ್, ವಿದ್ಯುತ್ ಪರಿಕರಗಳು ಸೇರಿದಂತೆ ಹಲವು ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿ, ಅಂದಾಜು 1 ಲಕ್ಷ್ಮಕ್ಕೂ ಹೆಚ್ಚು ಹಾನಿಯಾಗಿದೆ. ಎ.ಎಸ್.ಐ. ಅಶೋಕ ತಳಗಪ್ಪನವರ್ ಜನಜಂಗುಳಿ ನಿಯಂತ್ರಿಸಿದರು. ಅಂಕೋಲಾ ಹೋಬಳಿ ಮಟ್ಟದ ಗ್ರಾಮ ಲೆಕ್ಕಿಗೆ ಭಾರ್ಗವ ನಾಯಕ ಹಾನಿ ಪರಿಶೀಲಿಸಿದರು. ಅನಿಲ ಸಿಲೆಂಡರ್ ಸೋರಿಕೆಯಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಸ್ಥಳೀಯ ಮಾನು ಇಂಡೇನ್ ಅನಿಲ ವಿತರಕ ಕಚೇರಿಗೆ ಮಾಹಿತಿ ನೀಡಿದ ತಕ್ಷಣ ಸಿಬ್ಬಂದಿ ಮಂಜುನಾಥ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಸೋರಿಕೆಯಾಗುತ್ತಿರುವ ಸಿಲೆಂಡರ್ನನ್ನು ಪರಿಶೀಲಿಸಿ ಸೋರಿಕೆ ತಡೆಗಟ್ಟಲು ಸೂಕ್ತಕ್ರಮ ಕೈಗೊಂಡರು. 

ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ಅಗ್ನಿಶಾಮಕದಳದ ಠಾಣಾಧಿಕಾರಿ ಉಮೇಶ ನಾಯ್ಕ ಸಿಬ್ಬಂದಿಗಳಾದ ಜಯಾನಂದ ಪಟಗಾರ ಬೆಟ್ಕುಳಿ, ಸೀತಾರಾಮ ನಾಯ್ಕ, ರಾಮಪ್ಪ ಇಂಗಳಗಿ, ನಾಗರಾಜ ಪಟಗಾರ, ವಿಘ್ನೇಶ್ವರ ನಾಯ್ಕ, ಗೃಹ ರಕ್ಷಕ ಚಂದ್ರಹಾಸ ಗೌಡ ಪಾಲ್ಗೊಂಡಿದ್ದರು.